Sunday, 11th May 2025

BBK 11: ಈ ವಾರ ಮನೆಯಿಂದ ಹೊರಹೋಗುವ ಸ್ಪರ್ಧಿ ಇವರೇ..?

BBK 11 week 8 nomination (1)

ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ಎಂಟನೇ ವಾರ ಮುಕ್ತಾಯದಲ್ಲಿದೆ. ಇಂದು ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ನಡೆಯಲಿದೆ. ಸದ್ಯ ಮನೆಯಲ್ಲಿ 14 ಮಂದಿ ಇದ್ದಾರೆ. ಕಳೆದ ವಾರ ಮನೆಯಿಂದ ಅನುಷಾ ರೈ ಎಲಿಮಿನೇಟ್ ಆಗಿ ಹೊರಬಂದಿದ್ದರು. ಇದೀಗ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಯಾಕೆಂದರೆ ಎಂಟನೇ ವಾರ ನಾಮಿನೇಟ್ ಆಗಿರುವ ಎಲ್ಲ ಸ್ಪರ್ಧಿಗಳು ಬಲಿಷ್ಠರೇ ಆಗಿದ್ದಾರೆ.

ಎಂಟನೇ ವಾರ ಮನೆಯಿಂದ ಹೊರಹೋಗಲು ಏಳು ಸದಸ್ಯರು ನಾಮಿನೇಟ್ ಆಗಿದ್ದಾರೆ. ಚೈತ್ರಾ ಕುಂದಾಪುರ, ಉಗ್ರಂ ಮಂಜು, ತ್ರಿವಿಕ್ರಮ್, ಮೋಕ್ಷಿತಾ ಪೈ, ಗೌತಮಿ ಜಾಧವ್, ಧರ್ಮ ಕೀರ್ತಿರಾಜ್‌ ಹಾಗೂ ಹನುಮಂತ ಲಮಾಣಿ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಯಾರ ಪ್ರಯಾಣ ಬಿಗ್ ಬಾಸ್ ಮನೆಯಲ್ಲಿ ಕೊನೆಗೊಳ್ಳಲಿದೆ ಎಂಬುದು ನೋಡಬೇಕಿದೆ.

ನಾಮಿನೇಟ್ ಆಗಿರುವವರ ಪೈಕಿ ಈ ವಾರ ಚೈತ್ರಾ, ಮಂಜು, ತ್ರಿವಿಕ್ರಮ್, ಮೋಕ್ಷಿತಾ, ಗೌತಮಿ ಹಾಗೂ ಹನುಮಂತ ಈ ವಾರ ಚೆನ್ನಾಗಿ ಆಡಿದ್ದಾರೆ. ಕಳೆದ ವಾರ ಚೈತ್ರಾ ಅವರು ನಾನು ಮನೆಯಿಂದ ಹೊರ ಹೋಗುತ್ತೇನೆ ಎಂದು ಹೇಳಿದ್ದರು. ಆದರೆ, ಈ ವಾರದ ಮೊದಲ ಎರಡು ದಿನ ಸೈಲೆಂಟ್ ಆಗಿದ್ದರೂ ಬಳಿಕ ಚಿಗುರಿದ್ದಾರೆ. ಈ ಕಾರಣಕ್ಕೆ ಅವರು ಈ ವಾರ ಹೊರ ಹೋಗುವುದು ಅನುಮಾನ. ಉಳಿದವರು ಉತ್ತಮ ಆಟ ಪ್ರದರ್ಶನ ಮಾಡುತ್ತಿದ್ದಾರೆ. ಅವರು ಯಾರಿಗೂ ಎಲಿಮಿನೇಷನ್ ಭಯ ಇಲ್ಲ.

ಸದ್ಯ ಉಳಿದಿರುವುದು ಧರ್ಮಾ ಕೀರ್ತಿರಾಜ್ ಮಾತ್ರ. ಬಿಗ್ ಬಾಸ್ ಮನೆಯಲ್ಲಿ ಧರ್ಮಾ ಕೀರ್ತಿರಾಜ್ ಮೂಲೆಗುಂಪಾಗುತ್ತಿದ್ದಾರೆ ಎಂಬ ಮಾತು ಕಳೆದ ಕೆಲವು ವಾರಗಳಿಂದ ಕೇಳಿ ಬರುತ್ತಲೇ ಇದೆ. ಇದು ಸುಳ್ಳು ಎಂದು ಧರ್ಮಾ ಅನೇಕ ಬಾರಿ ಹೇಳಿದ್ದರೂ ಮೇಲ್ನೋಟಕ್ಕೆ ನಿಜದಂತೆ ಕಾಣುತ್ತಿದೆ. ತಮ್ಮ ಒಳ್ಳೆಯ ಮನಸ್ಸಿನಿಂದ ಧರ್ಮ ಅವರು ಎಲ್ಲರಿಗೂ ಇಷ್ಟ ಆಗುತ್ತಿದ್ದಾರೆ. ಆದರೆ, ಅವರು ಉತ್ತಮ ಆಟ ತೋರಿಸುತ್ತಿಲ್ಲ. ಸಿಕ್ಕ ಅವಕಾಶವನ್ನು ದೊಡ್ಟ ಮಟ್ಟದಲ್ಲಿ ಉಳಿಸಿಕೊಂಡಿಲ್ಲ ಎಂಬುದು ಕೂಡ ನಿಜ.

ಅಲ್ಲದೆ ಕಳೆದ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಅನುಷಾ ಜೊತೆ ಧರ್ಮಾ ಕೂಡ ಡೇಂಜರ್ ಝೋನ್​ನಲ್ಲಿದ್ದರು. ಧರ್ಮಾ ಹಾಗೂ ಅನುಷಾ ಪೈಕಿ ಒಬ್ಬರು ಮಾತ್ರ ಉಳಿಯುವ ಅವಕಾಶ ಇತ್ತು. ಆ ಸಂದರ್ಭ ಧರ್ಮಾ ಬಚಾವ್ ಆದರು. ಆದರೆ, ಈ ವಾರ ಇವರು ಅಷ್ಟೊಂದು ಕಾಣಿಸಿಕೊಳ್ಳಲಿಲ್ಲ. ಈ ಎಲ್ಲ ಕಾರಣಕ್ಕೆ ಧರ್ಮಾ ಈ ವಾರ ಮನೆಯಿಂದ ಎಲಿಮಿನೇಟ್ ಆದರೂ ಆಗಬಹುದು.

BBK 11: ಕೊನೆಗೂ ಈಡೇರಿತು ಕನಸು: ಮೊದಲ ಬಾರಿಗೆ ಕ್ಯಾಪ್ಟನ್ ಆದ ಉಗ್ರಂ ಮಂಜು