Sunday, 11th May 2025

BBK 11: ಮಂಜು-ಗೌತಮಿ ಮಾಸ್ಟರ್ ಪ್ಲಾನ್​ ಉಡೀಸ್ ಮಾಡಿದ ಚೈತ್ರಾ ಕುಂದಾಪುರ: ಎಲ್ಲರೂ ಶಾಕ್

Chaithra Gowthami and Manju

ಕಳೆದ ವಾರ ನಡೆದ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ನಲ್ಲಿ ಕಿಚ್ಚ ಸುದೀಪ್ ಅವರು ಚೈತ್ರಾ ಕುಂದಾಪುರ (Chaithra Kundapura) ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಹೊರಗಿನ ವಿಷಯ ಏನನ್ನೂ ಹೇಳುವಂತಿಲ್ಲ ಎಂಬ ರೂಲ್ಸ್ ಇದ್ದರೂ ಚೈತ್ರಾ ಕೆಲ ವಿಚಾರ ಹಂಚಿಕೊಂಡಿದ್ದರು. ಈ ಕಾರಣಕ್ಕೆ ಸುದೀಪ್ ವಾರದ ಕತೆಯಲ್ಲಿ ಖಡಕ್ ಆಗಿ ಚೈತ್ರಾಗೆ ವಾರ್ನಿಂಗ್ ಕೊಟ್ಟರು. ಈ ಘಟನೆ ನಡೆದ ಬಳಿಕ ಚೈತ್ರಾ ಅವರು ಸೈಲೆಂಟ್ ಆಗಿಯೇ ಇದ್ದರು. ಆದರೀಗ ಚೈತ್ರಾ ತಮ್ಮ ಆರ್ಭಟ ಶುರುಮಾಡಿದ್ದಾರೆ.

ಬಿಗ್ ಬಾಸ್ ಮನೆಯ ಸದಸ್ಯರನ್ನು ಎರಡು ತಂಡಗಳಾಗಿ ವಿಂಗಡಿಸಲಾಗಿದೆ. ಎಲ್ಲ ಸ್ಪರ್ಧಿಗಳು ಗೇಮ್ ವೇಳೆ ಪಡೆದ ಪಾಯಿಂಟ್ಸ್ ಅನ್ನು ಕಾಪಾಡಿಕೊಳ್ಳಬೇಕು. ಅತಿ ಹೆಚ್ಚು ಪಾಯಿಂಟ್ಸ್ ಪಡೆದ ಸ್ಪರ್ಧಿಗಳು ಕ್ಯಾಪ್ಟನ್ಸಿ ಟಾಸ್ಕ್​ಗೆ ಅರ್ಹತೆ ಪಡೆಯುತ್ತಾರೆ. ಇದಕ್ಕಾಗಿ ಎಲ್ಲ ಸ್ಪರ್ಧಿಗಳು ತಮಗೆ ಸಿಕ್ಕ ಕಾಗದ ರೂಪದ ಪಾಯಿಂಟ್ಸ್ ಅನ್ನು ಜೋಪಾನವಾಗಿ ಕಾಪಾಡಿಕೊಳ್ಳುತ್ತಿದ್ದಾರೆ. ಇದನ್ನು ಎದುರಾಳಿ ತಂಡ ಕಳ್ಳತನ ಮಾಡಬಹುದು ಎಂಬ ನಿಯಮ ಕೂಡ ಇದೆ. ಆದರೆ, ಕಸಿದುಕೊಳ್ಳುವಂತಿಲ್ಲ.

ಹೀಗಾಗಿ ಚೈತ್ರಾ ಬಳಿ ಇರುವ ಪಾಯಿಂಟ್ಸ್ ಕದಿಯಲು ಗೌತಮಿ, ಮಂಜು, ಐಶ್ವರ್ಯ ಪ್ಲಾನ್ ಮಾಡಿಕೊಂಡಿದ್ದರು. ಆದರೆ, ಈ ಯೋಜನೆ ಫುಲ್ ಫೇಲ್ ಆಗಿದೆ. ಚೈತ್ರಾಗೆ ಪಂಚೆ ಹಾಕುವ ಐಡಿಯಾ ನೀಡಿ ವಾಶ್ ರೂಮ್​ಗೆ ಕರೆದುಕೊಂಡು ಹೋಗಿ ಅಲ್ಲಿ ಡ್ರೆಸ್ ಚೇಂಜ್ ಮಾಡುವಾಗ ಪಾಯಿಂಟ್ಸ್ ಕದಿಯುವ ಪ್ಲಾನ್ ಮಾಡಿಕೊಂಡರು ಗೌತಮಿ ಹಾಗೂ ಐಶ್ವರ್ಯಾ. ಇದನ್ನು ಗಂಭೀರವಾಗಿ ಪರಿಗಣಿಸಿದ ಚೈತ್ರಾ ಅವರು ಗೌತಮಿ ಜೊತೆ ವಾಶ್​ರೂಂಗೆ ಹೋದರು. ಅಲ್ಲಿ ಹಣ ಕದಿಯುವ ಪ್ರಯತ್ನ ನಡೆದಿದೆ.

ಆದರೆ, ಚೈತ್ರಾ ಅವರು ತಮ್ಮ ಪಾಯಿಂಟ್ಸ್​ ಅನ್ನು ಅನೇಕ ಪಿನ್​ಗಳಿಂದ ಕಟ್ಟಿದ್ದ ಕಾರಣ ಅವರಿಗೆ ತೆಗೆಯಲು ಸಾಧ್ಯವಾಗಲಿಲ್ಲ. ಇದನ್ನು ಅರಿತ ಚೈತ್ರಾ ವಾಶ್ ರೂಮ್ ಬಾಗಿಲು ತೆಗೆದುಕೊಂಡು ಸಿಟ್ಟಲ್ಲೇ ಹೊರಬಂದಿದ್ದಾರೆ. ಐಶ್ವರ್ಯ-ಗೌತಮಿ ಜೊತೆಗೆ ಸಾಕಷ್ಟು ಕೂಗಾಟ ನಡೆಸಿದ್ದಾರೆ. ನನಗೆ ತುಂಬಾ ಖುಷಿ ಇದೆ. ನೀವು ನಂಬಿಸಿ ಮೋಸ ಮಾಡಿದ್ದೀರಿ. ಅತ್ಯಂತ ಕೆಳಮಟ್ಟಕ್ಕೆ ಇಳಿದಿದ್ದೀರಿ. ನೀವು ದಡ್ಡರು ಎಂದು ಸಾಬೀತು ಮಾಡಿಕೊಂಡಿರಿ. ಓರ್ವ ವ್ಯಕ್ತಿ ಬಟ್ಟೆ ಬಿಚ್ಚಿ ನಿಮ್ಮ ಎದುರು ನಿಲ್ಲುತ್ತಾನೆ ಎಂದರೆ ಅದು ನಂಬಿಕೆ. ಆ ನಂಬಿಕೆಯನ್ನೇ ಉಳಿಸಿಕೊಂಡಿಲ್ಲ ನೀವು ಎಂದು ಹೇಳಿದ್ದಾರೆ.

BBK 11: ತಗ್ಗಿದ ಕಿಚ್ಚನ ಪಂಚಾಯಿತಿ ಕ್ರೇಜ್: ವೀಕೆಂಡ್​ನಲ್ಲಿ ಬಿಗ್ ಬಾಸ್​ ಟಿಆರ್​ಪಿ ಡೌನ್