Sunday, 11th May 2025

Supriya Sule : ʼಮಹಾʼ ಚುನಾವಣೆ ನಡುವೆ ಸಂಚಲನ ಮೂಡಿಸಿದ ಬಿಟ್‌ ಕಾಯಿನ್‌ ಪ್ರಕರಣ, ಸುಪ್ರಿಯಾ ಸುಳೆ ವಿರುದ್ಧ ಆರೋಪ

Supriya Sule

ಮುಂಬೈ : ಮಹಾರಾಷ್ಟ್ರದಲ್ಲಿ ಮತದಾನದ (Maharashtra By Election) ದಿನದಂದು ದೊಡ್ಡ ವಿವಾದವೊಂದು ಹುಟ್ಟಿಕೊಂಡಿದೆ. ಪುಣೆಯ ಮಾಜಿ ಐಪಿಎಸ್ ಅಧಿಕಾರಿ ರವೀಂದ್ರನಾಥ್ ಪಾಟೀಲ್ ಅವರು, ಎನ್‌ಸಿಪಿ (ಎಸ್‌ಪಿ) ನಾಯಕಿ ಮತ್ತು ಬಾರಾಮತಿ ಸಂಸದೆ  ಸುಪ್ರಿಯಾ ಸುಳೆ (Supriya Sule) ಹಾಗೂ ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ (Nana Patole) ಅವರ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದಾರೆ. 2018ರ ಬಿಟ್‌ ಕಾಯಿನ್‌ ಗೆ (Bitcoin scam) ಸಂಬಂಧಿಸಿದ ವಂಚನೆ ಪ್ರಕರಣದಲ್ಲಿ ಅವರು ಭಾಗಿಯಾಗಿದ್ದು, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಈ ಹಣವನ್ನೇ ಬಳಸಿಕೊಂಡಿದ್ದಾರೆ ಎಂದು ದೂರಿದ್ದಾರೆ.

ಚುನಾವಣಾ ಸಂದರ್ಭದಲ್ಲಿ ಈ ಘಟನೆ ನಡೆದಿದ್ದರಿಂದ ಬಿಜೆಪಿಯ ನಾನಾ ಪಟೋಲೆ ಹಾಗೂ ಸುಪ್ರಿಯಾ ಸುಳೆ ಅವರು ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿರುವುದಕ್ಕೆ ಪುರಾವೆ ಇದೆ ಎಂದು ಅವರು ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ್ದರು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸುಪ್ರಿಯಾ, ಈ ಆಡಿಯೋ ತನ್ನದಲ್ಲ ಎಂದು ಆರೋಪವನ್ನು ತಳ್ಳಿ ಹಾಕಿದ್ದಾರೆ.

ಲೋಕಸಭಾ ಸಂಸದೆ ಮತ್ತು ಎನ್‌ಸಿಪಿ (ಶರದ್ ಪವಾರ್ ಬಣ) ನಾಯಕಿ ಸುಪ್ರಿಯಾ ಸುಳೆ ಅವರು ಪುಣೆಯ ಚುನಾವಣಾ ಆಯೋಗ ಮತ್ತು ಸೈಬರ್ ಸೆಲ್‌ಗೆ ಔಪಚಾರಿಕ ದೂರು ಸಲ್ಲಿಸಿದ್ದು, ತಮ್ಮ ಬಗ್ಗೆ ಸುಳ್ಳು ಮತ್ತು ಮಾನಹಾನಿಕರ ಮಾಹಿತಿಯನ್ನು ಹರಡಿದ ಆರೋಪದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಸುಧಾಂಶು ತ್ರಿವೇದಿ ಅವರ 5 ಪ್ರಶ್ನೆಗಳಿಗೆ ಎಲ್ಲಿ ಬೇಕಾದರೂ ಉತ್ತರಿಸಲು ನಾನು ಸಿದ್ಧನಿದ್ದೇನೆ. ಅವರು ಹೇಳಿದ ಸಮಯ, ಸ್ಥಳ ಮತ್ತು ಅವರು ಹೇಳಿದ ವೇದಿಕೆಯಲ್ಲಿ ನಾನು ಅವರಿಗೆ ಉತ್ತರಿಸಲು ಸಿದ್ಧನಿದ್ದೇನೆ ಏಕೆಂದರೆ ಎಲ್ಲಾ ಆರೋಪಗಳು ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹಾಗೂ ಸುಪ್ರಿಯಾ ಸುಳೆ ಅವರ ಸೋದರ ಸಂಬಂಧಿ ಅಜಿತ್ ಪವಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಆಡಿಯೋ ಕ್ಲಿಪ್ ನಾನು ಕೂಡ ಕೇಳಿದ್ದೇನೆ, ಅವರಲ್ಲಿರುವವರಲ್ಲಿ ಒಬ್ಬರು ನನ್ನ ಸಹೋದರಿ ಮತ್ತು ಇನ್ನೊಬ್ಬರ ಜೊತೆ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಆಡಿಯೋ ಕ್ಲಿಪ್ ನಲ್ಲಿರುವುದು ಅವರ ಧ್ವನಿ ಹೌದು ಅದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಗ್ಗೆ ತನಿಖೆ ನಡೆಯಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Maharashtra Assembly Election: ಮಹಿಳೆಯರಿಗೆ ಜ್ಯೂಸರ್‌ ಮಿಕ್ಸರ್‌ ಫ್ರೀ..ಫ್ರೀ.. ಆಮಿಷವೊಡ್ಡಿದ ಮಹಾರಾಷ್ಟ್ರ ಶಾಸಕನ ವಿರುದ್ಧ ECಗೆ ದೂರು

ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರು ಕ್ರಿಪ್ಟೋಕರೆನ್ಸಿ ವಂಚನೆಗೆ ಸಂಬಂಧಿಸಿದಂತೆ ತಮ್ಮ ಪುತ್ರಿ ಮತ್ತು ಪಕ್ಷದ ಸಂಸದೆ ಸುಪ್ರಿಯಾ ಸುಳೆ ವಿರುದ್ಧ ಬಿಜೆಪಿ ಸುಳ್ಳು ಆರೋಪಗಳನ್ನು ಮಾಡಿದೆ, ಬಿಜೆಪಿಯು ಇಷ್ಟೊಂದು ಕೆಳಮಟ್ಟಕ್ಕೆ ಇಳಿಯುತ್ತದೆ ಎಂದು ಅಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ. ಸುಪ್ರಿಯಾ ವಿರುದ್ಧ ದೂರು ಹಾಗೂ ಆರೋಪ ಮಾಡಿದ್ದ ಮಾಜಿ ಐಪಿಎಸ್ ಅಧಿಕಾರಿ ಈ ಹಿಂದೆ ಜೈಲು ಸೇರಿದ್ದರು ಈಗ ಬಿಜೆಪಿ ಜತೆ ಸೇರಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.