Thursday, 15th May 2025

Viral Video: 9 ವರ್ಷಕ್ಕೇ ಗರ್ಭಿಣಿ! ಈ ಖುಷಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಬಾಲಕಿ!

Viral Video

ಭಾರತದಲ್ಲಿ 18 ವರ್ಷ ವಯಸ್ಸಾಗುವವರೆಗೂ ಮದುವೆ ಮಾಡುವ ಹಾಗೆಯೇ ಇಲ್ಲ. ಒಂದು ವೇಳೆ ಮದುವೆ ಮಾಡಿದರೆ ಅದನ್ನು ಬಾಲ್ಯವಿವಾಹವೆಂದು ಪರಿಗಣಿಸಿ ಪೋಷಕರ ವಿರುದ್ಧ ಕೇಸು ದಾಖಲಿಸುತ್ತಾರೆ. ಅಂಥದರಲ್ಲಿ ಇರಾಕ್‍ನಲ್ಲಿ  9 ವರ್ಷದ ಹುಡುಗಿಯೊಬ್ಬಳು ಗರ್ಭಿಣಿಯಾಗಿದ್ದು, ಅದರಿಂದ ಖುಷಿಯಾದ ಆಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ವಿಡಿಯೊ ಸಂಚಲನ ಮೂಡಿಸಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದ್ದು, ಕೋಲಾಹಲಕ್ಕೆ ಕಾರಣವಾಗಿದೆ.

ವಿಡಿಯೊದಲ್ಲಿ ಕಂಡುಬಂದ ಹುಡುಗಿಗೆ 9 ವರ್ಷ ವಯಸ್ಸಾಗಿದ್ದು, ಆಕೆ 5 ತಿಂಗಳ ಗರ್ಭಿಣಿಯಾಗಿದ್ದಾಳೆ. ಗರ್ಭಿಣಿಯಾಗಿದ್ದಕ್ಕೆ ಆಕೆ ತುಂಬಾ ಖುಷಿಪಟ್ಟಿದ್ದಾಳಂತೆ. ಈ ಸಂಭ್ರಮವನ್ನು ಆಕೆ ಪಟಾಕಿ ಸಿಡಿಸಿ ಆಚರಿಸಿದ್ದಾಳೆ. ಒಂದು ಕೈಯಲ್ಲಿ  ಬಣ್ಣಗಳನ್ನು ಉಗುಳುತ್ತಿರುವ ಪಟಾಕಿಯನ್ನು ಹಿಡಿದುಕೊಂಡು ಆಟವಾಡುತ್ತ ಇನ್ನೊಂದು ಕೈಯಲ್ಲಿ ತನ್ನ ಹೊಟ್ಟೆಯನ್ನು ಹಿಡಿದುಕೊಂಡಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಹಲವರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.‌

ಹೆಚ್ಚಿನ ದೇಶಗಳಲ್ಲಿ ಹೆಣ್ಣುಮಕ್ಕಳ ಮದುವೆಯ ವಯಸ್ಸು 18 ಆಗಿದ್ದರೆ, ಇರಾಕ್‍ನ ಕಾನೂನಿನಲ್ಲಿ  ಮಾತ್ರ ಹೆಣ್ಣು ಮಕ್ಕಳು 9 ವರ್ಷಕ್ಕೆ ಮದುವೆಯಾಗಬಹುದು. ಇರಾಕ್‌ನಲ್ಲಿ ಪ್ರಾಥಮಿಕ ಶಾಲೆಗೆ ಹೋಗುವಾಗಲೇ ಹೆಣ್ಣುಮಕ್ಕಳಿಗೆ ಮದುವೆ ಮಾಡಲಾಗುತ್ತದೆ. ಅಪ್ರಾಪ್ತ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳು ತಾಯಿಯಾಗುತ್ತಿದ್ದಾರೆ. ಅಂತಾರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗ ಇದನ್ನು ತೀವ್ರವಾಗಿ ವಿರೋಧಿಸಿದೆ.

ಇರಾಕ್ ಸರ್ಕಾರ ತನ್ನ ವಿವಾಹ ಕಾನೂನುಗಳನ್ನು ತಿದ್ದುಪಡಿ ಮಾಡಿದೆ. ಕಾನೂನುಬದ್ಧ ವಯಸ್ಸನ್ನು 18ರಿಂದ 9ಕ್ಕೆ ಇಳಿಸಿದೆ. ಹಾಗೆಯೇ ಗಂಡುಮಕ್ಕಳ ಮದುವೆ  ವಯಸ್ಸನ್ನು 15ಕ್ಕೆ ಇಳಿಸಿದೆ.  ಇದು ವಯಸ್ಸಾದ ಪುರುಷರಿಗೆ ಯುವತಿಯರನ್ನು ಮದುವೆಯಾಗಲು ಅನುವು ಮಾಡಿಕೊಟ್ಟಿದೆ. ತಾಲಿಬಾನ್ ಶೈಲಿಯಲ್ಲಿ ಮಹಿಳೆಯರ ಎಲ್ಲ ಹಕ್ಕುಗಳನ್ನು ಇರಾಕ್‌ ಹಿಂತೆಗೆದುಕೊಂಡಂತಾಗಿದೆ.