Sunday, 11th May 2025

Viral Video: ದೆಹಲಿ ಮೆಟ್ರೋದಲ್ಲಿ ಜಡೆ ಜಗಳ: ಯುವತಿಯರಿಬ್ಬರ ಕಿತ್ತಾಟ ನೋಡಿ ಬಿದ್ದು ಬಿದ್ದು ನಕ್ಕ ಜನರು

Viral Video

ನವದೆಹಲಿ: ದೆಹಲಿ ಮೆಟ್ರೋ ಪ್ರತಿದಿನ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತದೆ. ಈ ಹಿಂದೆ ಕೂಡ ಹಲವು ಬಾರಿ ಜಗಳ, ನಿಂದನೆ, ರೀಲ್ಸ್ ವಿಚಾರಕ್ಕೆ ಸುದ್ದಿಯಾಗಿತ್ತು. ಇದೀಗ ಯುವತಿಯೊಬ್ಬಳು ಮೆಟ್ರೋ ಒಳಗಿದ್ದ ಸಹ ಪ್ರಯಾಣಿಕ ಯುವತಿಯನ್ನು ಹೊರಗೆ ತಳ್ಳಿ ನಿಂದಿಸಿದ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ.

ದೆಹಲಿ ಮೆಟ್ರೋದಲ್ಲಿ ಇಬ್ಬರು ಯುವತಿಯರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಇಬ್ಬರ ನಡುವಿನ ಜಗಳ ಅತಿರೇಕಕ್ಕೆ ಹೋದ ನಂತರ ಒಬ್ಬ ಯುವತಿ ಇನ್ನೊಬ್ಬ ಯುವತಿಯನ್ನು ಮೆಟ್ರೋದಿಂದ ಹೊರಗೆ ದಬ್ಬಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಇಬ್ಬರು ಯುವತಿಯರ ನಡುವಿನ ಜಗಳ ನೋಡಿ ನೆಟ್ಟಿಗರು ಸಿಕ್ಕಾಪಟ್ಟೆ ನಕ್ಕಿದ್ದಾರೆ.  ಈ ಘಟನೆ ನಡೆದಾಗ ಕೂಡ  ಮೆಟ್ರೋ ನಿಲ್ದಾಣದಲ್ಲಿದ್ದ ಜನರು ನಕ್ಕು ವಿಡಿಯೊ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೊಗೆ ಸಾವಿರಾರು ವ್ಯೂವ್ಸ್ ಬಂದಿದೆ.  ಆದರೆ ದೆಹಲಿ ಮೆಟ್ರೋ ರೈಲು ನಿಗಮಕ್ಕೆ ಸಂಬಂಧಿತ ಅಧಿಕಾರಿಗಳು ಈ ವಿಡಿಯೊಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ:ನಡುರಸ್ತೆಯಲ್ಲಿ ಟಿವಿ ರಿಪೋರ್ಟರ್‌ ಮೇಲೆ ಅಟ್ಯಾಕ್‌; ಬಿಟ್ಟು ಬಿಡಿ ಎಂದು ಕಾಲಿಗೆ ಬಿದ್ದ ಬಡಪಾಯಿ- ವಿಡಿಯೊ ವೈರಲ್

ದೆಹಲಿ ಮೆಟ್ರೊದಲ್ಲಿ ಪ್ರಯಾಣಿಕರ ನಡುವೆ ಜಗಳ ನಡೆಯುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ದೆಹಲಿ ಮೆಟ್ರೋ ರೈಲಿನಲ್ಲಿ  ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ತಂದೆ-ಮಗ ತಳ್ಳಿದ್ದಾರೆ ಎಂದು ಆರೋಪಿಸಿ ಅವರನ್ನೂ ಆಕೆ ತಳ್ಳಿದ ಘಟನೆ ನಡೆದಿದೆ.  ಅದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೈರಲ್ ವಿಡಿಯೊದಲ್ಲಿ ಮಹಿಳೆಯೊಬ್ಬರು ರೈಲಿನಲ್ಲಿದ್ದ ತಂದೆ-ಮಗ ತನ್ನನ್ನು ತಳ್ಳಿದ್ದಾರೆ ಎಂದು ಆರೋಪಿಸಿ ತೀವ್ರ ವಾಗ್ವಾದ ನಡೆಸಿದ್ದಾರೆ. ಮೂವರು ಸೇರಿ ಕೈಕೈ ಮಿಲಾಯಿಸಿದ್ದಾರೆ. ಅಲ್ಲಿದ್ದ ಪ್ರಯಾಣಿಕರು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರೂ ಕೂಡ ಮಹಿಳೆ ಆಕ್ರೋಶಗೊಂಡು ಅವರನ್ನು ಬಲವಂತವಾಗಿ ತಳ್ಳಿ ರೈಲಿನಿಂದ ಹೊರಗೆ ಹೋಗುವಂತೆ ಬೆದರಿಕೆ ಹಾಕಿದ್ದಾಳೆ.