Sunday, 11th May 2025

BBK 11: ಈ ವಾರ ಇರುತ್ತಾ ಡಬಲ್ ಎಲಿಮಿನೇಷನ್?: ಮನೆಯಿಂದ ಯಾರು ಔಟ್?

BBK 11 week 7 Elimination

ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ಏಳನೇ ವಾರ ಮುಕ್ತಾಯದಲ್ಲಿದೆ. ಇಂದು ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ನಡೆಯಲಿದೆ. ಸದ್ಯ ಮನೆಯಲ್ಲಿ 13 ಮಂದಿ ಇದ್ದಾರೆ. ಕಳೆದ ವಾರ ಮನೆಯೊಳಗೆ ಯಾವುದೇ ಎಲಿಮಿನೇಷನ್ ಪ್ರಕ್ರಿಯೆ ನಡೆದಿಲ್ಲ. ಭವ್ಯಾ ಗೌಡ ಹಾಗೂ ಧನರಾಜ್ ಆಚಾರ್ ಡೇಂಜರ್ ಝೋನ್​ಗೆ ಬಂದಿದ್ದರು. ಇದರಲ್ಲಿ ಭವ್ಯಾ ಎಲಿಮಿನೇಟ್ ಎಂದು ಸುದೀಪ್ ಘೋಷಣೆ ಕೂಡ ಮಾಡಿದರು. ಆದರೆ, ನೋ ಎಲಿಮಿನೇಷನ್ ವೀಕ್ ಆಗಿದ್ದರಿಂದ ಭವ್ಯಾ ಬಚಾವ್ ಆದರು.

ಇದೀಗ ಏಳನೇ ವಾರ ಮನೆಯಿಂದ ಹೊರಹೋಗಲು ಹತ್ತು ಸದಸ್ಯರು ನಾಮಿನೇಟ್ ಆಗಿದ್ದಾರೆ. ಈ ಪೈಕಿ ಅನುಷಾ ರೈ, ಮೋಕ್ಷಿತಾ ಪೈ, ಧನರಾಜ್ ಆಚಾರ್, ಭವ್ಯಾ ಗೌಡ, ಧರ್ಮ ಕೀರ್ತಿರಾಜ್, ಗೋಲ್ಡ್ ಸುರೇಶ್, ಗೌತಮಿ ಜಾದವ್, ಹನುಮಂತ, ಶಿಶಿರ್ ಶಾಸ್ತ್ರೀ, ಉಗ್ರಂ ಮಂಜು ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಈ ವಾರ ಯಾರ ಆಟ ಮನೆಯಲ್ಲಿ ಅಂತ್ಯವಾಗಲಿದೆ ಎಂದು ಕಾದುನೋಡಬೇಕಿದೆ.

ಇನ್ನು ಕ್ಯಾಪ್ಟನ್ಸಿ ಟಾಸ್ಕ್‌ ನಲ್ಲಿ ತ್ರಿವಿಕ್ರಮ್‌ ಅವರು ತನ್ನ ಉಳಿವಿಗಾಗಿ ಮಂಜು ಅವರೊಂದಿಗೆ ಮಾಡಿಕೊಂಡಿದ್ದ ಮ್ಯಾಚ್‌ ಫಿಕ್ಸಿಂಗ್‌ ಗೇಮ್‌ನಿಂದ ಬಿಗ್ ಬಾಸ್ ಬೇಸರ ಮಾಡಿಕೊಂಡು ಈ ವಾರ ಕ್ಯಾಪ್ಟನ್‌ಗೆ ಯಾವುದೇ ವಿಶೇಷ ಅಧಿಕಾರ ನೀಡಲಿಲ್ಲ. ಕ್ಯಾಪ್ಟನ್​ಗೆ ಇದ್ದ ನೇರ ನಾಮಿನೇಷನ್ ಮತ್ತು ಸೇಫ್ ಮಾಡುವ ಅಧಿಕಾರವನ್ನು ಕಸಿದುಕೊಂಡಿದ್ದರು. ಸ್ಪರ್ಧಿಗಳೇ ಮಾತನಾಡಿಕೊಂಡು ಒಂದು ಜೋಡಿಯನ್ನು ಈ ವಾರ ನೇರ ನಾಮಿನೇಟ್ ಮಾಡಬೇಕಿತ್ತು.

ಸದ್ಯ ಈ ಭಾನುವಾರ ಮನೆಯಿಂದ ಹೊರಹೋಗುವ ಸ್ಪರ್ಧಿ ಯಾರು ಎಂಬುದು ಕುತೂಹಲ ಮೂಡಿಸಿದೆ. ಯಾಕೆಂದರೆ ನಾಮಿನೇಟ್ ಆಗಿರುವ ಎಲ್ಲ ಸದಸ್ಯರು ಬಲಿಷ್ಠರೇ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಈ ವಾರ ಧನರಾಜ್ ಆಚಾರ್ ಮತ್ತು ಚೈತ್ರಾ ಕುಂದಾಪುರ ಡೇಂಜರ್​ ಘೋನ್​ಗೆ ಬರಬಹುದು ಎನ್ನಲಾಗಿದೆ.

ಚೈತ್ರಾ ಈ ವಾರ ಶಿಶಿರ್​ ಜೊತೆ ನಡೆದುಕೊಂಡ ರೀತಿ ಅನೇಕರಿಗೆ ಇಷ್ಟ ಆಗಿಲ್ಲ. ಹಾಗೆಯೆ ಧನರಾಜ್ ಈ ವಾರ ಕೂಡ ಕಳಪೆಗೆ ಹೋಗಿದ್ದಾರೆ. ಇದರ ನಡುವೆ ಈ ವಾರ ಡಬಲ್ ಎಲಿಮಿನೇಷನ್ ಇದೆ ಎಂಬ ಮಾತುಕೂಡ ಕೇಳಿಬರುತ್ತಿದೆ. ಯಾಕೆಂದರೆ ಕಳೆದ ವಾರ ಎಲಿಮಿನೇಷನ್ ಇರಲಿಲ್ಲ. ಹೀಗಾಗಿ ಈ ವಾರ ಇಬ್ಬರು ಮನೆಯಿಂದ ಹೊರಬರಲಿದ್ದಾರೆ ಎನ್ನಲಾಗುತ್ತದೆ.

BBK 11: ತನ್ನ ಜೋಡಿ ಸ್ಪರ್ಧಿಗೇ ಕಳಪೆ ನೀಡಿದ ಮೋಕ್ಷಿತಾ: ಸಿಡಿದೆದ್ದ ಧನರಾಜ್ ಆಚಾರ್