Sunday, 11th May 2025

Nelamangala News: ಜಮೀರ್​ ಹೇಳಿಕೆಯಿಂದ ಸಿಡಿದೆದ್ದ ನೆಲಮಂಗಲ ಒಕ್ಕಲಿಗ ಸಮುದಾಯ : ರಾಜೀನಾಮೆಗೆ ಆಗ್ರಹ!

ಸಚಿವ ಜಮೀರ್ ಅಹಮದ್ ಖಾನ್​​ ವಿರುದ್ಧ ಒಕ್ಕಲಿಗ ಯುವ ವೇದಿಕೆ ಹಾಗೂ ಒಕ್ಕಲಿಗ ಒಕ್ಕೂಟದ ನಾಯಕರು ಪ್ರತಿಭಟನೆ ನಡೆಸಿದ್ದು, ಕುಮಾರಸ್ವಾಮಿ ಮತ್ತು ದೇವೇಗೌಡರಿಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಜಮೀರ್​ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ನೆಲಮಂಗಲದ ಕುಣಿಗಲ್ ಬೈಪಾಸ್ ನಲ್ಲಿ ಪ್ರತಿಭಟನೆ ನಡೆಸಿದ್ದು, ನೂರಾರು ಒಕ್ಕಲಿಗ ಸಮುದಾಯದ ಮುಖಂಡರಿಂದ ಪ್ರತಿಭಟನೆ ನಡೆಸಿದ್ದಾರೆ. ಮಾಜಿ ಪ್ರಧಾನಿ ದೇವೆಗೌಡ ಹಾಗೂ ಕುಮಾರಸ್ವಾಮಿ ವಿರುದ್ದ ಅವಹೇಳನಕಾರಿ ಪದ ಬಳಕೆ ಹಿನ್ನೆಲೆ ಆಕ್ರೋಶಗೊಂಡ ಒಕ್ಕಲಿಗರ ಸಮುದಾಯದಿಂದ ಬಾರಿ ಆಕ್ರೋಶ ವ್ಯಕ್ತವಾಗಿದ್ದು ಜಮೀರ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಜಮೀರ್ ಪ್ರತಿಕೃತಿ ದಹಿಸಿದರು.

ಕುಣಿಗಲ್ ಬೈಪಾಸ್ ಬಳಿ ಮಾನವ ಸರಪಳಿ ಮಾಡಿ ಜಮೀರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತುಮಕೂರು, ಬೆಂಗಳೂರು, ಮಂಗಳೂರು ಎರಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನವ ಸರಪಳಿ ಮಾಡಿ ಪ್ರತಿಭಟನೆ ಮಾಡಿದ್ದಾರೆ. ಪಕ್ಷಬೇದ ಮರೆತು ಕಾಂಗ್ರೆಸ್ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು.

ಮಾನವ ಸರಪಳಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಕೆಲಕಾಲ ಅಸ್ತವ್ಯಸ್ತ ಉಂಟಾಗಿತ್ತು. ಕುಣಿಗಲ್ ಬೈಪಾಸ್ ನಿಂದ ನೆಲಮಂಗಲ ತಾಲೂಕು ಕಚೇರಿಯವರೆಗೆ ಬೃಹತ್ ಪ್ರತಿಭಟನೆಯನ್ನು ನಡೆಸಿ ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.