Sunday, 18th May 2025

Viral Video: ತಾಯಿ ಪ್ರೀತಿಗೆ ಮಿಗಿಲು ಬೇರೇನಿದೆ? ಮರಿಗಳನ್ನು ರಕ್ಷಿಸಲು ಸಿಂಹದ ಜೊತೆ ಕಾದಾಡಿದ ಚಿರತೆ; ವಿಡಿಯೊ ನೋಡಿ

Viral Video

ತಾಯಿಯ ಪ್ರೀತಿಗಿಂತ ಮಿಗಿಲಾದುದು ಬೇರೆ ಯಾವುದೂ ಇಲ್ಲ ಎಂದು ಹೇಳುತ್ತಾರೆ.ಮಕ್ಕಳಿಗಾಗಿ ತನ್ನ ಪ್ರಾಣವನ್ನು ನೀಡಲು ಸಿದ್ಧಳಾಗಿರುತ್ತಾಳೆ ಎಂಬುದಕ್ಕೆ ನಿದರ್ಶನಗಳು ಸಾಕಷ್ಟಿವೆ. ಇದಕ್ಕೆ ಸಾಕ್ಷಿಯಂಬಂತೆ ತಾಯಿ ಚಿರತೆಯೊಂದು ತನ್ನ ಎರಡು ಮರಿಗಳನ್ನು ಉಳಿಸಲು ಸಿಂಹದೊಂದಿಗೆ ಕಾದಾಡಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್(Viral Video) ಆಗಿದೆ.

ಈ ಘಟನೆಯನ್ನು ತಾಂಜೇನಿಯಾದ ಸೆರೆಂಗೆಟಿ ರಾಷ್ಟ್ರೀಯ ಉದ್ಯಾನವನದಲ್ಲಿ ಕರೋಲ್ ಮತ್ತು ಬಾಬ್ ಎಂಬ ಆಫ್ರಿಕನ್ ಸಾಹಸಿ ದಂಪತಿ ರೆಕಾರ್ಡ್ ಮಾಡಿದ್ದಾರೆ. ಮತ್ತು ಇದನ್ನು ಯೂಟ್ಯೂಬ್ ಚಾನೆಲ್ “ಲೇಟೆಸ್ಟ್ ಸೈಟಿಂಗ್ಸ್” ಹಂಚಿಕೊಂಡಿದ್ದಾರೆ. ಈ ವೈರಲ್ ವಿಡಿಯೊದಲ್ಲಿ ಚಿರತೆಯೊಂದು ತನ್ನ ಗುಹೆಯ ಬಳಿ  ನಿಂತಿತ್ತು, ಚಿರತೆಯ ಎರಡು ಮರಿಗಳು ಅದರ ಹಿಂದೆ ನಿಂತಿದ್ದವು. ಆಗ ಸ್ವಲ್ಪ ದೂರದಲ್ಲಿ ಸಿಂಹ ಬರುವುದನ್ನು ಕಂಡು ಚಿರತೆ ಘರ್ಜಿಸಲು ಶುರುಮಾಡಿತ್ತು. ತನ್ನ ಮರಿಗಳನ್ನು ಹಿಡಿಯಲು ಬಂದ ಸಿಂಹದ ಮೇಲೆ ಹಾರಿ ಅದರ ಜೊತೆ ಕಾದಾಡಿತ್ತು.

ವರದಿ ಪ್ರಕಾರ ಕರೋಲ್ ಮತ್ತು ಬಾಬ್, ರೇಂಜರ್ ಗಾಡ್ಲಿವಿಂಗ್ ಶೂ ಅವರೊಂದಿಗೆ ಮುಂಜಾನೆ ಸಫಾರಿ ಹೋದಾಗ ಈ ದೃಶ್ಯ ಕಂಡು ಬಂದಿತಂತೆ. ಚಿರತೆಯೊಂದು ಸಿಂಹದ ಜೊತೆ ಕಾದಾಡಿ ತನ್ನ ಮರಿಗಳನ್ನು ರಕ್ಷಿಸಿದ್ದನ್ನು ಇವರು ವಿಡಿಯೊ ಮಾಡಿದ್ದಾರೆ.ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಇದನ್ನೂ ಓದಿ:ಫ್ರೀ ಆಗಿ ಸಿಕ್ರೆ ಕೆಚಪ್‌ ಪ್ಯಾಕನ್ನೂ ಬಿಡಲ್ಲ… ಇದು ಈತನ ಜಾಣ್ಮೆಯೋ…ಇಲ್ಲ, ದುರಾಸೆಯೋ? ವಿಡಿಯೊ ನೋಡಿ

ಈ ಹೋರಾಟದಲ್ಲಿ ಸಿಂಹದ ಕಾಲಿಗೆ ಪೆಟ್ಟಾಗಿದ್ದು, ಚಿರತೆ ಬಹಳ ದಣಿದಿತ್ತು ಎನ್ನಲಾಗಿದೆ. ಆದರೂ ಚಿರತೆ ಮರಿಗಳ ಸುರಕ್ಷತೆಗಾಗಿ ಮಧ್ಯಾಹ್ನದ ವೇಳೆ  ಎರಡು ಬಾರಿ ತನ್ನ ಮರಿಗಳನ್ನು ಬೇರೆ ಬೇರೆ ಸ್ಥಳಕ್ಕೆ ಸ್ಥಳಾಂತರಿಸಿದೆ ಎಂಬುದಾಗಿ ಆಫ್ರಿಕನ್ ಸಾಹಸಿ ದಂಪತಿ ತಿಳಿಸಿದ್ದಾರೆ.