Tuesday, 13th May 2025

ದಾರಿದೀಪೋಕ್ತಿ

ನೀವು ಯಾರಿಗೂ, ಯಾವತ್ತಿಗೂ ಹೆದರದಿರುವುದೇ ಧೈರ್ಯ ಎಂದು ಭಾವಿಸಬೇಕಿಲ್ಲ. ಯಾವುದೇ ಕೆಲಸಕ್ಕೆ ಮುಂದಾದಾಗ ಭಯ ನಿಮ್ಮನ್ನು ಕೈಜಗ್ಗಿ ನಿಲ್ಲಿಸದಿದ್ದರೆ, ನಿಮ್ಮ ಉತ್ಸಾಹ, ಶಕ್ತಿಯನ್ನು ಕುಗ್ಗಿಸದಿದ್ದರೆ, ನಿಮ್ಮಲ್ಲಿ
ಅವ್ಯಕ್ತ ಆತಂಕವನ್ನು ಉಂಟು ಮಾಡದಿದ್ದರೆ ಅದು ಧೈರ್ಯ. ಅಂಥ ಧೈರ್ಯವನ್ನು ಬೆಳೆಸಿಕೊಳ್ಳಬೇಕು.