Wednesday, 14th May 2025

Tumkur News: ಎಳ್ಳು ಹೊಲದ ಈರಣ್ಣ ದೇವಸ್ಥಾನದ ನಿರ್ಮಾಣಕ್ಕೆ 25 ಲಕ್ಷ ದೇಣಿಗೆ

ತುಮಕೂರು: ತಾಲೂಕಿನ ಬೆಳ್ಳಾವಿ ಹೋಬಳಿ ಹುಚ್ಚು ಬಸವನಹಳ್ಳಿ ಸೋರೆಕುಂಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವೀರಗಾರರ ಎಳ್ಳು ಹೊಲದ ಈರಣ್ಣ ಧಾರ್ಮಿಕ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸೇವಾ ಟ್ರಸ್ಟ್‌ ಆಶ್ರಯದಲ್ಲಿ ಈರಣ್ಣನ ಗುಡ್ಡೆ ಅಭಿವೃದ್ಧಿಗೆ ಶಾಸಕ ಸುರೇಶ್ ಗೌಡ ವೈಯಕ್ತಿಕವಾಗಿ 25 ಲಕ್ಷ ಗಣಿಗೆ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಕಾಡುಗೊಲ್ಲ ಸಮುದಾಯದ ಸುತ್ತಮುತ್ತಲಿನ ಐದಾರು ತಾಲ್ಲೂಕುಗಳ ಭಕ್ತರು ಈ ಕ್ಷೇತ್ರದ ದೈವಕ್ಕೆ ನಡೆದುಕೊಂಡು ತಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳುತ್ತಾರೆ. ಈ ಕ್ಷೇತ್ರಕ್ಕೆ ಕನಿಷ್ಠ ಒಂದರಿಂದ ಎರಡು ಎಕರೆ ಜಾಗ ಬೇಕಾಗಿದೆ. ಜಮೀನು ಮಂಜೂರು ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡುವೆ ಎಂದರು.

ಸಮಾರಂಭದಲ್ಲಿ ಸುತ್ತಮುತ್ತಲಿನ ಸಮಾಜದ ಗಣ್ಯರು, ಅರ್ಚಕರು, ಪಂಚಾಯ್ತಿ, ಸದಸ್ಯರು ಎ.ಪಿ.ಎಂ.ಸಿಯ ಶಿವರಾಜ್, ಡಾ.ಶಿವಕುಮಾರ್, ಹನುಮಂತರಾಜು (ಮೆಡಿಕಲ್) ಶೇಷಕುಮಾರ್ ಸೇರಿದಂತೆ ಪದಾಧಿಕಾರಿಗಳು ಭಾಗವಹಿಸಿದ್ದರು.

ಇದನ್ನೂ ಓದಿ: Tumkur Breaking: ಸಮಾಜದ ಒಳಿತಿಗಾಗಿ ಭ್ರಷ್ಟಾಚಾರ ನಿರ್ಮೂಲನೆ ಮಾಡಿ: ನ್ಯಾ.ಜಯಂತ್ ಕುಮಾರ್