Sunday, 18th May 2025

Viral Video: 10 ಸೆಕೆಂಡ್‌ ರೀಲ್ಸ್‌ಗಾಗಿ ಅಮೂಲ್ಯ ಜೀವ ಕಳೆದುಕೊಂಡ ಬಾಲಕ; ವಿಡಿಯೊ ನೋಡಿ

Viral Video

ಸೋಶಿಯಲ್ ಮೀಡಿಯದಲ್ಲಿ ಫೇಮಸ್‍ ಆಗಲು ಈಗ ಎಲ್ಲರೂ ರೀಲ್ಸ್‌ನ ಮೊರೆ ಹೋಗುತ್ತಿದ್ದಾರೆ. ಈಗಾಗಲೇ ಹಲವಾರು ಜನ ಜೀವ ಕಳೆದುಕೊಂಡಿದ್ದಾರೆ. ಆದರೂ ಬೆಂಕಿಯ ಮೋಹಕ್ಕೆ ಬಿದ್ದ ಪತಂಗದಂತೆ ಇಂದಿನ ಯುವ ಜನಾಂಗ ಮತ್ತೆ ಮತ್ತೆ ಇದರ ಬಲೆಗೆ ಬಿದ್ದು ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೆ. ರೀಲ್ಸ್‌ ಕ್ರೇಜ್‌ಗೆ ಬಿದ್ದು ಹುಡುಗನೊಬ್ಬ ಜೀವಕ್ಕೆ ಕುತ್ತು ತಂದುಕೊಂಡ ಘಟನೆಯೊಂದು ಇತ್ತೀಚೆಗೆ ನಡೆದಿದೆ. ಹುಡುಗನೊಬ್ಬ ರೈಲು ಹಳಿಯ ಬಳಿ ರೀಲ್ಸ್‌ ಮಾಡುತ್ತಿದ್ದಾಗ ವೇಗವಾಗಿ ಬಂದ ರೈಲೊಂದು ಆತನಿಗೆ ಗುದ್ದಿದೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.

ಈ ಆಘಾತಕಾರಿ ವಿಡಿಯೊ ಅನ್ನು ಘರ್ ಕೆ ಕಾಲೇಶ್ ಎಂಬ ಖಾತೆಯ ಪೇಜ್‍ನಲ್ಲಿ  ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಹುಡುಗರ ಗುಂಪೊಂದು ರೈಲ್ವೆ ಹಳಿಗಳ ಮೇಲೆ ನಿಂತು ರೀಲ್ಸ್ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿರುವಾಗ ರೈಲೊಂದು ಬರುತ್ತಿರುವುದು ಕಂಡಿದೆ.  ತಕ್ಷಣ ಹುಡುಗರು ರೈಲು ಹಳಿಗಳ ಪಕ್ಕದಲ್ಲಿ ನಿಂತು ರೀಲ್ಸ್ ಮಾಡಲು ತಮ್ಮ ಮೊಬೈಲ್‍ ಪೋನ್‌ ಅನ್ನು ಕೈಯಲ್ಲಿ ಹಿಡಿದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ವೇಗವಾಗಿ ಬಂದ ರೈಲೊಂದು ಹಳಿಯ ಹತ್ತಿರವಿದ್ದ ಹುಡುಗನಿಗೆ ಗುದ್ದಿದೆ.

ಈ ವಿಡಿಯೊ ಪೋಸ್ಟ್ ಮಾಡಿದಾಗಿನಿಂದ 299,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಇದಕ್ಕೆ ನೆಟ್ಟಿಗರು ಕೂಡ ಕಮೆಂಟ್ ಮಾಡಿದ್ದಾರೆ. “ಹುಡುಗ ಕೇವಲ 10 ಸೆಕೆಂಡುಗಳ ರೀಲ್‍ಗಾಗಿ ತನ್ನ ಅಮೂಲ್ಯ ಜೀವವನ್ನು ಕಳೆದುಕೊಂಡಿದ್ದಾನೆ” ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, “ಅವನು ಜೀವಂತವಾಗಿರಲು ಸಾಧ್ಯವೇ ಇಲ್ಲ” ಎಂದು ಬರೆದಿದ್ದಾರೆ.

ಇದನ್ನೂ ಓದಿ: ಅಪಘಾತದಲ್ಲಿ ಕಾಲು ಮುರಿದುಕೊಂಡು 6 ವರ್ಷ ಹಾಸಿಗೆ ಹಿಡಿದಾಗ ಆರೈಕೆ ಮಾಡಿ ಪತ್ನಿಗೇ ವಿಚ್ಛೇದನ ಕೊಟ್ಟ!

ಇತ್ತೀಚೆಗಷ್ಟೆ ಮೈಸೂರಿನ ಇಲವಾಲ ಹೋಬಳಿ ಮಲ್ಲೇಗೌಡನ ಕೊಪ್ಪಲು ಗ್ರಾಮದ ರೈಲ್ವೆ ಗೇಟ್ ಬಳಿ ರೈಲು ಬರುತ್ತಿದ್ದರೂ ಗೇಟ್ ಹಾಕದೆ ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಾ ಮೈಮರೆತು ಕುಳಿತ ಸ್ಟೇಷನ್‌ ಮಾಸ್ಟರ್‌ ರೈಲು ಅಪಘಾತಕ್ಕೆ (Train Accident news) ಕಾರಣನಾಗಿದ್ದಾನೆ. ಪರಿಣಾಮ ರೈಲಿಗೆ ಆಟೋ ಡಿಕ್ಕಿಯಾಗಿ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಂತಹ ಘಟನೆ ನಡೆದಿದೆ.