ಪ್ರಧಾನಮಂತ್ರಿ ತರಬೇತಿ ಯೋಜನೆಗೆ (PM Internship Scheme) 280 ಕಂಪನಿಗಳು ನೋಂದಣಿ (companies register) ಮಾಡಿಕೊಂಡಿದ್ದು, 1,27,046 ಮಂದಿಗೆ ತರಬೇತಿ ಅವಕಾಶ (internship offers) ನೀಡಲಾಗಿದೆ. ಪ್ರಾಯೋಗಿಕ ಕಾರ್ಯಕ್ರಮದ ಅಡಿಯಲ್ಲಿ ನೋಂದಣಿಗಾಗಿ ಅಕ್ಟೋಬರ್ 3ರಂದು ಪೋರ್ಟಲ್ ಅನ್ನು ತೆರೆಯಲಾಗಿದ್ದು, ಇದೀಗ ಕಂಪೆನಿಗಳ ನೋಂದಣಿ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.
ಪ್ರಧಾನಮಂತ್ರಿ ತರಬೇತಿ ಯೋಜನೆಯಲ್ಲಿ (PMIS) ಹಲವಾರು ಕಾರ್ಪೊರೇಟ್ ಕಂಪನಿಗಳು ಭಾಗವಹಿಸಿವೆ. ಇದೀಗ ನೋಂದಣಿ ವಿಂಡೋವನ್ನು ಕೇಂದ್ರವು ಮುಚ್ಚಿದೆ. ಒಟ್ಟಾರೆಯಾಗಿ, ನೋಂದಣಿಗೆ ಮೀಸಲಾದ ಪೋರ್ಟಲ್‌ನಲ್ಲಿ 280 ಕಂಪನಿಗಳು ಭಾಗವಹಿಸಿದ್ದು, 1,27,046 ಇಂಟರ್ನ್‌ಶಿಪ್ ಅವಕಾಶಗಳನ್ನು ನೀಡಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕಾರ್ಪೊರೇಟ್ ಕಂಪನಿಗಳು ತರಬೇತಿ ಅವಕಾಶಗಳನ್ನು ನೀಡಲು ಮತ್ತು ಆಸಕ್ತರಿಗೆ ನೋಂದಾಯಿಸಿಕೊಳ್ಳಲು ಪಿಎಂಇಎಸ್ ಪೋರ್ಟಲ್ www.pminternship.mca.gov.in ಅನ್ನು ಅಕ್ಟೋಬರ್ 3ರಂದು ತೆರೆಯಲಾಗಿತ್ತು. ಪಿಎಂಐಎಸ್ ಅಭ್ಯರ್ಥಿಗಳು ನೋಂದಣಿ ಮಾಡಲು ನವೆಂಬರ್ 1ರವರೆಗೆ ಅವಕಾಶ ನೀಡಲಾಗಿದೆ.
ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು (MCA) ಈ ವರ್ಷದ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಪಿಎಂಐಎಸ್ ಅನ್ನು ನಿರ್ವಹಿಸುತ್ತಿದ್ದು, ಸಿ ಎಸ್ ಆರ್ ವೆಚ್ಚದ ಮೂಲಕ ಕಳೆದ ಮೂರು ವರ್ಷ ಹಣಕಾಸಿನ ಲೆಕ್ಕಾಚಾರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ 500 ಕಾರ್ಪೊರೇಟ್ ಕಂಪನಿಗಳಿಗೆ ಯೋಜನೆಯಲ್ಲಿ ಭಾಗವಹಿಸಲು ಮತ್ತು ಯುವಕರಿಗೆ ಇಂಟರ್ನ್‌ಶಿಪ್ ಅವಕಾಶಗಳನ್ನು ನೀಡಲು ಅನುಮತಿಸಲಾಗಿದೆ.
ಪಿಎಂಐಎಸ್ ಯುವ ಭಾರತೀಯರಿಗೆ ಪ್ರಾಯೋಗಿಕ ಉದ್ಯಮದ ಅನುಭವವನ್ನು ಒದಗಿಸುವ ಮೂಲಕ ಅವರಿಗೆ ಉದ್ಯೋಗಾವಕಾಶವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ತಂತ್ರಜ್ಞಾನ, ಉತ್ಪಾದನೆ, ಹಣಕಾಸು, ಚಿಲ್ಲರೆ ವ್ಯಾಪಾರ, ಆರೋಗ್ಯ ಸೇರಿದಂತೆ ವಿವಿಧ ವಲಯಗಳಲ್ಲಿ ಇಂಟರ್ನ್‌ಶಿಪ್ ಅವಕಾಶಗಳನ್ನು ನೀಡುವ ಮೂಲಕ ಶೈಕ್ಷಣಿಕ ಕಲಿಕೆ ಮತ್ತು ಉದ್ಯಮದ ಅವಶ್ಯಕತೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಈ ಯೋಜನೆ ಮೂಲಕ ಪ್ರಯತ್ನಿಸಲಾಗುತ್ತದೆ.
ಯುವಕರಿಗೆ ತರಬೇತಿ ಅವಕಾಶ ನೀಡಲು ಕೆಲವು ಉನ್ನತ ಕಾರ್ಪೊರೇಟ್ ಕಂಪನಿಗಳಾದ ಮಹೀಂದ್ರಾ ಆಂಡ್ ಮಹೀಂದ್ರಾ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಲಾರ್ಸೆನ್ ಆಂಡ್ ಟೂಬ್ರೊ, ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಮಾರುತಿ ಸುಜುಕಿ, ಟೆಕ್ ಮಹೀಂದ್ರಾ, ಒಎನ್‌ಜಿಸಿ, ಬಜಾಜ್ ಫೈನಾನ್ಸ್, ಐಚರ್ ಮೋಟಾರ್, ಮ್ಯಾಕ್ಸ್ ಲೈಫ್ ಇನ್ಶುರೆನ್ಸ್, ಮುತ್ತೂಟ್. ಹಣಕಾಸು ಮತ್ತು ಜುಬಿಲೆಂಟ್ ಫುಡ್‌ವರ್ಕ್ಸ್ ಮುಂದೆ ಬಂದಿವೆ.
ಮುಖ್ಯವಾಗಿ ಆಯಿಲ್ ಗ್ಯಾಸ್ ಮತ್ತು ಎನರ್ಜಿ, ಆಟೋಮೋಟಿವ್, ಪ್ರಯಾಣ ಮತ್ತು ಆತಿಥ್ಯ, ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳು, ಲೋಹ ಮತ್ತು ಗಣಿಗಾರಿಕೆ ಕ್ಷೇತ್ರಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಉತ್ಪಾದನೆ ಮತ್ತು ಕೈಗಾರಿಕೆ, ಮೂಲಸೌಕರ್ಯ ಮತ್ತು ನಿರ್ಮಾಣ, ಐಟಿ ಮತ್ತು ಸಾಫ್ಟ್‌ವೇರ್ ಅಭಿವೃದ್ಧಿ, ಎಫ್ ಎಂಸಿಜಿ ಮತ್ತು ಟೆಲಿಕಾಂ ವಲಯದಲ್ಲೂ ಹೆಚ್ಚಿನ ಮಂದಿಗೆ ತರಬೇತಿ ನೀಡಲು ಹಲವು ಕಂಪೆನಿಗಳು ಮುಂದೆ ಬಂದಿವೆ. ಪ್ರಸ್ತುತ ಇಂಟರ್ನ್‌ಶಿಪ್ ಅವಕಾಶ 37 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಸೇರಿದಂತೆ 737 ಜಿಲ್ಲೆಗಳಲ್ಲಿ ಲಭ್ಯವಿವೆ.
ಪ್ರಯೋಜನ ಏನು?
ಪಿಎಂಐ ಯೋಜನೆ ಅಡಿಯಲ್ಲಿ ತಿಂಗಳಿಗೆ 5,000 ರೂ. ಭತ್ಯೆ ಮತ್ತು ಒಂದು ಬಾರಿ 6,000 ರೂ. ಅನುದಾನ ನೀಡಲಾಗುತ್ತದೆ. ಇದರ ಪ್ರಯೋಜನ ಪಡೆಯಲು ಬಯಸುವವರು ಆಧಾರ್ ಸಂಖ್ಯೆಯನ್ನು ಹೊಂದಿರಬೇಕು ಅಥವಾ ಆಧಾರ್ ದೃಢೀಕರಣಕ್ಕೆ ಒಳಗಾಗಬೇಕು.
Credit Card : ಕ್ರೆಡಿಟ್ ಕಾರ್ಡ್ ಕ್ಯಾನ್ಸಲ್ ಮಾಡುವ ಮುನ್ನ ಯೋಚಿಸಿ; ಲಾಭವೂ ಇದೆ, ನಷ್ಟವೂ ಉಂಟು
ಸರ್ಕಾರವು ಪ್ರಾಯೋಗಿಕ ಯೋಜನೆಗಾಗಿ 800 ಕೋಟಿ ರೂ. ಅನ್ನು ಮೀಸಲಿಟ್ಟಿದ್ದು, ಇದು ಹಣಕಾಸು ವರ್ಷ 2೦25 ರಲ್ಲಿ 21ರಿಂದ 24 ವರ್ಷದೊಳಗಿನ 1.25 ಲಕ್ಷ ಯುವಕರಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿದೆ.