Thursday, 15th May 2025

BBK 11: ‘ಮೆಟ್ಟು ತಗೊಂಡು ಹೊಡಿತೀನಿ’: ಸುದೀಪ್ ಮಾತಿಗೆ ಸ್ವಲ್ಪವೂ ಬೆಲೆ ಕೊಡದ ಚೈತ್ರಾ ಕುಂದಾಪುರ

Chaithra Kundapura (1)

ಕಳೆದ ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ಶನಿವಾರ ಮತ್ತು ಭಾನುವಾರ ಎರಡು ದಿನ ಕೂಡ ನಡೆಯಿತು. ಅಷ್ಟು ಹೊತ್ತು ಸುದೀಪ್ ಅವರು ಸ್ಪರ್ಧಿಗಳ ಬೆಂಡೆತ್ತಿದರು. ನಾನು ನಡೆಸಿಕೊಟ್ಟ ಬಿಗ್ ಬಾಸ್ ಸೀಸನ್​ನಲ್ಲಿ ಇದು ವರ್ಸ್ಟ್​ ಬ್ಯಾಚ್ ಎಂದು ಹೇಳಿದರು. ನಿಮ್ಮ ತಪ್ಪನ್ನು ನಾನು ಸರಿ ಪಡಿಸದಿದ್ದರೆ ಅದು ನನ್ನ ಕೆಲಸಕ್ಕೆ ನಾನು ಕೊಡುವ ಗೌರವ ಅಲ್ಲ ಎಂದು ಹೇಳಿ ಪ್ರತೀ ಸ್ಪರ್ಧಿಯ ತಪ್ಪುಗಳನ್ನು ಅರಿವು ಮಾಡುವ ಪ್ರಯತ್ನ ನಡೆಸಿದರು.

ಕಳೆದ ವಾರ ಸ್ಪರ್ಧಿಗಳು ನಡೆದುಕೊಂಡ ರೀತಿ, ಆಡಿದ ಮಾತನ್ನು ಅವರಿಗೇ ಮನವರಿಕೆ ಮಾಡಿದ ಸುದೀಪ್ ಬದಲಾಗಿ ಎಂದು ಹೇಳಿದ್ದರು. ಆದರೆ, ಈ ವಾರ ಸ್ಪರ್ಧಿಗಳು ಅದೇ ಹಳೇಯ ಚಾಳಿ ಮುಂದುವರೆಸಿದ್ದಾರೆ. ಸುದೀಪ್ ಆಡಿದ ಮಾತು ಲೆಕ್ಕಕ್ಕೆ ಇಲ್ಲದಂತಾಗಿದೆ. ಅದರಲ್ಲೂ ವೀಕೆಂಡ್ ಸುದೀಪ್ ಅವರು ಚೈತ್ರಾ ಕುಂದಾಪುರ ಅವರಿಗೆ ಸ್ಪೆಷನ್ ಕ್ಲಾಸ್ ತೆಗೆದುಕೊಂಡಿದ್ದರು. ಮಾತಿನ ಮೇಲೆ ಹಿಡಿತ ಇರಬೇಕು ಎಂದಿದ್ದರು. ಆದರೀಗ ಚೈತ್ರಾ ಮೆಟ್ಟು ತಗೊಂಡು ಹೊಡಿತೀನಿ ಎಂಬ ಪದ ಬಳಸಿ ನಾಲಿಗೆ ಹರಿಬಿಟ್ಟಿದ್ದಾರೆ.

ಬಿಗ್ ಬಾಸ್ ಮನೆಯ ಬೆಡ್‌ ರೂಮ್ ಏರಿಯಾದಲ್ಲಿ ಚೈತ್ರಾ ಕುಂದಾಪುರ, ಹಂಸ ಮತ್ತು ಮಾನಸಾ ಇದ್ದರು. ಈ ವೇಳೆ ಬಿಗ್ ಬಾಸ್ ಮನೆಯಲ್ಲಿ ಹುಟ್ಟಿಕೊಳ್ಳುವ ಲವ್ ಸ್ಟೋರಿಗಳ ಬಗ್ಗೆ ಚರ್ಚೆ ಶುರುವಾಯಿತು. ಆಗ ಮಾತಿನ ಮಧ್ಯೆ ಚೈತ್ರಾ, “ಮೆಟ್ಟು ತಗೊಂಡು ಹೊಡಿತೀನಿ ನಾನು. ಹೊರಗೆ ಹೋದರೂ ತೊಂದರೆ ಇಲ್ಲ. ನಾನು ಮದುವೆ ಫಿಕ್ಸ್ ಮಾಡಿಕೊಂಡು ಇಲ್ಲಿಗೆ ಬಂದಿದ್ದೇನೆ. ನನಗೆ ಯಾರ ಹತ್ತಿರವೂ ಸಂಬಂಧ ಕಟ್ಟಬೇಡಿ ಅಂತ ನಾನು ಮೊದಲೇ ಹೇಳಿದ್ದೇನೆ” ಎಂದು ಖಾರವಾಗಿ ಹೇಳಿದ್ದಾರೆ.

ಕಳೆದ ವಾರ ಜಗದೀಶ್ ಅವರಿಗೆ ಉಗ್ರಂ ಮಂಜು ಅವರು ಚಪ್ಪಲಿ ತೋರಿಸಿ ಬಳಿಕ ಎಸೆದಿದ್ದರು. ಅದು ಸರಿಯಲ್ಲ ಎಂದು ಸುದೀಪ್ ಅವರು ವೀಕೆಂಡ್​ನಲ್ಲಿ ಹೇಳಿದ್ದರು. ಚಪ್ಪಲಿಯನ್ನು ನಾವು ದೇವಸ್ಥಾನದ ಹೊರಗಡೆ ಬಿಟ್ಟು ಹೋಗ್ತೇವೆ, ಮನೆಯೊಳಗೆ ಕೂಡ ಹಾಕುವುದಿಲ್ಲ ಇದಕ್ಕೆಲ್ಲ ಒಂದು ಕಾರಣ ಎಂಬುದು ಇರುತ್ತದೆ. ಪದ ಬಳಕೆ ಮಾಡುವಾಗ ಎಚ್ಚರ ವಹಿಸಿ ಎಂದಿದ್ದರು. ಅಷ್ಟಾದರೂ ಕೂಡ ಚೈತ್ರಾ ಅವರು ಮಾತಿನ ವರಸೆ ಬದಲಾಯಿಸಿಕೊಂಡಿಲ್ಲ. ಸಂದರ್ಭ ಬಂದರೆ ತಾವು ಮೆಟ್ಟಿನಲ್ಲಿ ಹೊಡೆಯುವುದಾಗಿ ಹೇಳಿದ್ದು, ಈ ವಾರ ಸುದೀಪ್ ಪುನಃ ಈ ವಿಚಾರ ಎತ್ತುತ್ತಾರ ನೋಡಬೇಕು.

BBK 11: ಜಗದೀಶ್ ಹೋದರೂ ಬಿಗ್ ಬಾಸ್​ನಲ್ಲಿ ನಿಂತಿಲ್ಲ ಜಗಳ: ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಮಾರಾಮಾರಿ