Wednesday, 14th May 2025

ಅವಸ್ಥಾಂತರದಲ್ಲಿ ಸಂಚಾರಿ ವಿಜಯ್

ರಾ ಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ‘ಅವಸ್ಥಾಂತರ’ ಚಿತ್ರಕ್ಕೆ ಸಹಿ ಹಾಕುವುದರ ಮೂಲಕ ಹೊಸಬರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಮಠ ಗುರು ಪ್ರಸಾದ್ ಗರಡಿಯಲ್ಲಿ ಪಳಗಿರುವ ಜಿ.ದೀಪಕ್ ಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಹಣಕಾಸು ಸಂಸ್ಥೆಯಲ್ಲಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ದೀಪಕ್ ಚಿತ್ರರಂಗದತ್ತ ಒಲವು ತಾಳಿದ್ದಾರೆ. ಆ ನಿಟ್ಟಿನಲ್ಲಿ ಮಾಲಿವುಡ್ ಸ್ಟಾರ್ ನಟರಾದ ಮುಮ್ಮಟಿ ಮತ್ತು ಮೋಹನ್ ಲಾಲ್ ಅವರ ಸಿನಿಮಾಗಳಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅಲ್ಲದೆ ಸಾಕ್ಷ್ಯಚಿತ್ರ, ಜಾಹೀರಾತುಗಳ ನಿರ್ದೇಶನದಲ್ಲೂ ತೊಡಗಿಸಿಕೊಂಡಿದ್ದಾರೆ.

ಜತೆಗೆ ಕಾರ್ಪೋರೇಟ್ ಫಿಲ್ಮ್ ಮೇಕರ್ ಆಗಿಯೂ ಕಾರ್ಯನಿರ್ವಹಿಸಿದ ಅನುಭವ ದೀಪಕ್ ಅವರಿಗಿದೆ. ಇವೆಲ್ಲದರ  ಅನುಭವ ದಿಂದ ಈಗ ಸ್ಯಾಂಡಲ್‌ವುಡ್‌ಗೆ ನಿರ್ದೇಶಕರಾಗಿ ಎಂಟ್ರಿ ಕೊಟ್ಟಿದ್ದಾರೆ. ತಾವೇ ಸ್ವತಃ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಬೆಳ್ಳಿ ತೆರೆಗೆ ನಿರ್ದೇಶಕನಾಗಿ ಪಾದಾರ್ಪಣೆ ಮಾಡಿದ್ದಾರೆ. ಅಷ್ಟೇ ಅಲ್ಲ, ಚಿತ್ರದ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ.

ಹದಿಹರೆಯದ ಯುವಕನೊಬ್ಬನಲ್ಲಿ ತನಗೆ ಅರಿವಿಲ್ಲದೆ ಬಯಕೆಗಳು, ಕಾಮನೆಗಳು ಹುಟ್ಟಿಕೊಂಡು, ಹೇಗೆ ಆತನನ್ನು ಅತಂತ್ರ ಸ್ಥಿತಿಗೆ ತೆಗೆದುಕೊಂಡು ಹೋಗುತ್ತದೆ. ಹಾಗೆಯೇ ಅದರಿಂದ ಏನೆಲ್ಲಾ ಕಷ್ಟಗಳು, ಅವಸ್ಥೆ, ಅನಾಹುತಗಳು ನಡೆಯುತ್ತವೆ ಎಂಬು ದನ್ನು ತಿಳಿಹಾಸ್ಯದ ಮೂಲಕ ತೋರಿಸಲಾಗುತ್ತಿದೆ. ಜತೆಗೆ ಅರ್ಥ ಪೂರ್ಣ ಸಂದೇಶವನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಿ ದ್ದಾರೆ. ‘ಪುಟ್ಟಗೌರಿ’, ‘ಕನ್ನಡತಿ’ ಧಾರವಾಹಿಗಳ ಖ್ಯಾತಿಯ ರಂಜನಿರಾಘವನ್, ‘ಆಡುವ ಗೊಂಬೆ’ ಚಿತ್ರದಲ್ಲಿ ನಟಿಸಿದ್ದ ದಿಶಾ ಕೃಷ್ಣಯ್ಯ ನಾಯಕಿಯರಾಗಿ ಬಣ್ಣಹಚ್ಚಲಿದ್ದಾರೆ.

ಉಳಿದಂತೆ ಕಲಾವಿದರು, ತಂತ್ರಜ್ಞರ ಆಯ್ಕೆ ಪ್ರಕ್ರಿಯೆ ಸದ್ಯದಲ್ಲೆ ಮುಗಿಯಲಿದೆ. ಈಗಾಗಲೇ ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಜನವರಿ ಮೊದಲ ವಾರದಲ್ಲಿ ಮಹೂರ್ತ ಆಚರಿಸಿಕೊಳ್ಳಲಿದ್ದು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ತಂಡವು ಯೋಜನೆ ಹಾಕಿಕೊಂಡಿದೆ.

ಹೊಸ ಸಿನಿಮಾ ಹೊಸತನ್ನು ಕಲಿಯುವ ತವಕ -ಸಂಚಾರಿ ವಿಜಯ್.

Leave a Reply

Your email address will not be published. Required fields are marked *