Wednesday, 14th May 2025

ದುರಂತ ಪ್ರೇಮಕಥೆಯ ಮಾಂಜ್ರಾ

ದುರ್ಗಾ ಪರಮೇಶ್ವರಿ ಸಿನಿ ಪ್ರೊಡಕ್ಷ್ಸ್ ಲಾಂಛನದಲ್ಲಿ ರವಿ ಅರ್ಜುನ್ ಪೂಜಾರ ನಿರ್ಮಿಸುತ್ತಿರುವ ‘ಮಾಂಜ್ರಾ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ಲಹರಿ ಸಂಸ್ಥೆಯ ಲಹರಿ ವೇಲು ಟೀಸರ್ ಬಿಡುಗಡೆ ಮಾಡಿದರು. ‘ಮಾಂಜ್ರಾ’ ನೈಜ ಘಟನೆ ಆಧಾರಿತ ಚಿತ್ರವಾಗಿದ್ದು, ಮುತ್ತುರಾಜ್ ರೆಡ್ಡಿ , ಕಥೆ , ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಆ ಇಬ್ಬರು ಮುಗ್ದ ಪ್ರೇಮಿಗಳು, ಬಡತನದಲ್ಲೇ ಅರಳಿದ್ದ
ಪ್ರೀತಿ ಅವರದ್ದು, ಇದ್ದುದ್ದರಲ್ಲಿಯೇ ಸಂತಸಪಡುತ್ತಿದ್ದ ಆ ಇಬ್ಬರು ಪ್ರೇಮಿಗಳು ಅಂದುಕೊಂಡಂತೆ, ಸಪ್ತಪದಿ ತುಳಿದರು. ಆದರೆ ಈ ಇಬ್ಬರು ಪ್ರೇಮಿಗಳಿಗೆ ಹುಡುಗಿಯ ಕಡೆಯವರೇ ವಿಲನ್ ಆಗುತ್ತಾರೆ. ಈ ವೈಷಮ್ಯದಲ್ಲಿ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಮಡದಿ ಸಾವನ್ನಪ್ಪುತ್ತಾಳೆ, ಇದರಿಂದ ಆಘಾತಕ್ಕೊಳಗಾದ ಪತಿ ಮಾನಸಿಕವಾಗಿ ನೊಂದು ಈ ಸಮಾಜದಿಂದಲೇ ದೂರ ಉಳಿಯು ತ್ತಾನೆ.

ಅಷ್ಟಕ್ಕೂ ಈ ಇಬ್ಬರು ಪ್ರೇಮಿಗಳಿಗೆ ವಿರೋಧ ವ್ಯಕ್ತವಾಗಿದ್ದು ಯಾಕೆ ಎಂಬುದೇ ಚಿತ್ರದ ಸ್ಸಸ್ಪೆನ್ಸ್‌. ಉತ್ತರ ಕರ್ನಾಟಕದಲ್ಲಿ 2005 ರಲ್ಲಿ ನಡೆದ ನೈಜ ಘಟನೆಯನ್ನೇ, ಸಿನಿಮಾ ರೂಪದಲ್ಲಿ ತೆರೆಗೆ ತರಲು ಸಿದ್ಧವಾಗಿದ್ದಾರೆ ನಿರ್ದೇಶಕ ಮುತ್ತುರಾಜ್. ಈಗಾಗಲೇ ಚಿತ್ರಕ್ಕೆ ಸೆನ್ಸಾರ್ ಮುಗಿದಿದ್ದು ಡಿಸೆಂಬರ್ ಕೊನೆಯವಾರ ಅಥವಾ ಜನವರಿಯಲ್ಲಿ ‘ಮಾಂಜ್ರಾ’ ತೆರೆಗೆ ಬರಲಿದೆ.

Leave a Reply

Your email address will not be published. Required fields are marked *