ವಿನುತಾ ಹೆಗಡೆ
ಸಾಮಾಜಿಕ ಜಾಲತಾಣದಲ್ಲಿ ವಂಚನೆ
ಮಹಿಳೆಯರು, ವಿದ್ಯಾರ್ಥಿಗಳೇ ಇದಕ್ಕೆ ಬಲಿ
ಶಿರಸಿ: ಆಧುನಿಕತೆ ಮುಂದುವರಿದಂತೆ ಸಾಮಾಜಿಕ ಜಾಲತಾಣದಲ್ಲಿ ವಂಚನೆಗಳು ಸಲೀಸಾಗಿ ನಡೆಯುತ್ತಿವೆ. ಅದರಲ್ಲೂ ಹೆಚ್ಚಾಗಿ ಮಹಿಳೆಯರು ಸಾಮಾಜಿಕ ಜಾಲತಾಣದಲ್ಲಿ ಗೃಹುಪಯೋಗಿ ಸಾಮಾನಿನ ಆಸೆಗೆ ಬಿದ್ದು ಮೋಸ ಹೋಗುತ್ತಿರುವುದು ಸರ್ವೇಸಾಮಾನ್ಯ ಎಂಬಂತಾಗಿದೆ.
ಹಬ್ಬ ಬಂತೆಂದರೆ ಸಾಕು ಆಫರ್ಗಳ ಸುರಿಮಳೆಯೇ ಸಾಮಾಜಿಕ ಜಾಲತಾಣದಲ್ಲಿ ರಾರಾಜಿಸುತ್ತದೆ. ಆಕರ್ಷಕ ಉಡುಗೊರೆ, ಬಂಪರ್ ಆಫರ್ ಹೀಗೆ ಬರುವ ಜಾಹೀರಾತಿಗೆ ಮರುಳಾಗಿ ಆರ್ಡರ್ ಮಾಡಿದಿರಿ ಎಂದುಕೊಳ್ಳಿ ಅಲ್ಲಿ ಕ್ಯಾಶ್ ಆಂಡ್ ಡೆಲಿವರಿ ಅವಕಾಶ ಇರುವುದೇ ಇಲ್ಲ.
ಬದಲಾಗಿ ಆನ್ ಲೈನ್ ಪೇಮೆಂಟ್ ಇರುತ್ತದೆ. ಹಾಗೆಯೇ ಪೇ ಮಾಡಿದರೆ ನಿಮ್ಮ ಹಣ ಹೋಗುವುದು ಗ್ಯಾರಂಟಿ. ಹಣ ಕಟ್ ಆಗುತ್ತದೆ ಆದರೆ ನಂತರ ಪೇಮೆಂಟ್ ಫುಲ್ ಎಂದು ವರ ಸ್ಟೋರ್ನಲ್ಲಿ ಮೆಸೇಜ್ ಬರುತ್ತದೆ. ಆದರೆ ನಮ್ಮ ಹಣ ಅಷ್ಟರಲ್ಲಾಗಲೇ ಕಳೆದುಕೊಂಡಾಗಿರುತ್ತದೆ.
ಇನ್ನು ಕೆಲವರು ಪ್ಲಿಪ್ ಕಾರ್ಟ್ ಅಂತ ಒಳ್ಳೆಯ ಆನ್ ಲೈನ್ ಆಪ್ ಎಂದುಕೊಂಡು ಖರೀದಿ ಮಾಡಿದರೂ ಅಷ್ಟೇ. ಸಾಮಾಜಿಕ ಜಾಲತಾಣದ ಹೊರತಾಗಿ ಅದೇ ಆಪ್ ಗೆ ಹೋಗಿ ನೋಡಿದರೆ ಅಲ್ಲಿ ಆ ಆಫರ್ ಇರುವುದಿಲ್ಲ. ಗ್ರಾಹಕ ರನ್ನು ವಂಚಿಸುವುದಕ್ಕಾಗಿಯೇ ಉತ್ತಮ ಆಪ್ ಗಳ ಬಳಕೆ ಮಾಡಲಾಗುತ್ತಿದೆ. ಸಮಾಜಿಕ ಜಾಲತಾಣದಲ್ಲಿ ಅರ್ಧ ಘಂಟೆಯೋ ಅಥವಾ 15 ನಿಮಿಷವೋ ಕಾಲಾವಕಾಶದಲ್ಲಿ ಪಡೆದುಕೊಳ್ಳಿ ಎಂದು ದೊಡ್ಡದಾಗಿ ಹೇಳಲಾಗುತ್ತದೆ. ಅಯ್ಯೋ ಇದು ಬೇಗ ಮುಗಿದು ಹೋಗುತ್ತದೆ ಎನ್ನುವ ಅವಸರದಲ್ಲಿ ಎಲ್ಲರೂ ಅದನ್ನು ಆರ್ಡರ್ ಹಾಕುತ್ತಾರೆ. ನಂತರ ಮೋಸಕ್ಕೆ ಒಳಗಾಗಿದ್ದು ಅರ್ಥವಾದರೆ ಏನೂ ಪ್ರಯೋಜನವಿಲ್ಲ. ಇದು ಹಬ್ಬದಲ್ಲಿ ಕಳೆದುಕೊಳ್ಳುವ ಆಫರ್ ಎಂದು ನಂತರ ಅರ್ಥವಾಗುತ್ತದೆ.
ಅದೂ ಅಲ್ಲದೇ ಒಂದು ನೂರು ರುಪಾಯಿ, ಎರಡು ನೂರು ರುಪಾಯಿ ಹೀಗೇ ಸಾವಿರಾರು ರುಪಾಯಿಯ ವಸ್ತುವನ್ನು ನೂರಾರು ರೂಪಾಯಿಗೆ ನೀಡಲಾಗುವುದೆಂದು ತಿಳಿಸಲಾಗುತ್ತದೆ. ಕಡಿಮೆಗೆ ಇದೆಯಲ್ಲ. ಇದು ಹಬ್ಬದ ಆಫರ್ ಆಗಿರುವುದಕ್ಕೆ ಇಷ್ಟು ಕಡಿಮೆಗೆ ಇದೆ ಎಂದು ನಂಬಿದರೆ ಹಣ ಗೋವಿಂದ. ಒಳ್ಳೆಯ ನಂಬಿಕೆಯ ಆಪ್ ಇದು
ನಮಗೆ ಸಿಗುತ್ತಿದೆ ಎಂದು ಎಲ್ಲರೂ ನಿಜವೆಂದು ನಂಬುತ್ತಾರೆ. ಆದರೆ ಹಣ ಕಳೆದುಕೊಂಡ ಮೇಲೆ ಅದು ನಿಜವಾಗಿ ರುವುದಲ್ಲ ಎನ್ನುವುದು ತಿಳಿಯುತ್ತದೆ.
ಅಲ್ಲದೇ ವಿದ್ಯಾರ್ಥಿಗಳೂ ಸಹ ಇದು ಆಫರ್ ಎಂದು ಆಸೆಗೆ ಬೀಳುತ್ತಾರೆ ಹಣ ಕಳೆದುಕೊಂಡ ಅನೇಕರು ಹೇಳುವುದೇ ಇಲ್ಲ ಎನ್ನುವುದು ಹಲವರ ಮಾತು. ಜನರು ನಂಬುವಂಥ ಒಳ್ಳೆಯ ಆಪ್ನ ಹೆಸರನ್ನೇ ಬಳಸಿ ಫೇಸ್ಬುಕ್ ನಲ್ಲಿ ಆಫರ್ ನೀಡುತ್ತಾರೆ. ಅದು ನಂಬಿಕೆಗೆ ಅರ್ಹ ಆಪ್ ಆದ್ದರಿಂದ ಜನ ಬೇಗನೆ ನಂಬುತ್ತಾರೆ. ಇಲ್ಲಿ
ಅಧಿಕೃತವಾದ ಆಪ್ಗೆ ಹೋಗಿ ಚೆಕ್ ಮಾಡುವಷ್ಟು ಸಮಯವನ್ನೂ ಆಫರ್ ಸಮಯದಲ್ಲಿ ನೀಡಲಾಗುತ್ತಿಲ್ಲ.
ಕೆಲವೇ ಸಮಯದ ಕಾಲಾವಕಾಶ ನೀಡಿರುವುದರಿಂದ ನಿಜವೆಂದು ಆರ್ಡರ್ ಹಾಕುತ್ತಾರೆ. ಹಣ ನೀಡಿದಾಗ ಅಲ್ಲಿ ಪೇಮೆಂಟ್ ಅದೇ ಆಪ್ಗೆ ಹೋಗಿರುವುದಿಲ್ಲ. ಬದಲಾಗಿ ಕಿಚನ್ ಸ್ಟೋರ್ ಎಂಬಲ್ಲಿಗೆ ಹೋಗಿರುವುದಾಗಿ ತಿಳಿಸುತ್ತದೆ.
ಆದರೆ ವಸ್ತುವೂ ಇಲ್ಲ ಹಣವೂ ಇಲ್ಲ ಎನ್ನುವ ಸ್ಥಿತಿ ಗ್ರಾಹಕರದ್ದಾಗಲಿದೆ. ಪೊಲೀಸರು ಇಂಥ ವಂಚನೆ ಕುರಿತು ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದಾರೆ. ಆದರೂ ಹಲವರು ಆಸೆಗೆ ಬೀಳುತ್ತಾರೆ. ಯಾರಿಗೇ ಆಸೆ ಇದ್ದರೂ ನಿಜವಾದ ಆಪ್ಗೆ ಒಮ್ಮೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಿ. ಆಸೆಗೆ ಬಿದ್ದು ಮೋಸ ಹೋಗಬೇಡಿ.
ಮೋಸ ಹೋಗಬೇಡಿ
ಯಾವುದೇ ಹಬ್ಬ ಇರಲಿ ಯಾವುದೇ ಆಫರ್ ಇರಲಿ ಸಾಮಾಜಿಕ ಜಾಲತಾಣ ಎನ್ನುವುದು ನಂಬಿಕೆಗೆ ಅರ್ಹ ಅಲ್ಲ ಎನ್ನುವುದು ನೆನಪಿರಲಿ. ಸಾಮಾಜಿಕ ಜಾಲತಾಣದಲ್ಲಿ ಬಂದಿರುವ ಆಫರ್ ಕುರಿತು ಅಧಿಕೃತವಾಗಿ ಇರುವ ವೆಬ್ ಸೈಟ್ ನಲ್ಲಿಯೇ ಅದನ್ನು ಚೆಕ್ ಮಾಡಿಕೊಳ್ಳಿ. ಅಥವಾ ಅಧಿಕೃತವಾದ ಅಂಗಡಿಗೆ ಹೋಗಿ ಅದನ್ನು ಪರಿಶೀಲಿಸಿ ಕೊಳ್ಳಿ. ಕೈನಲ್ಲಿ ಪೋನ್ ಇದೆ. ಎಲ್ಲೋ ಆಫರ್ ಇದೆ. ದುಡ್ಡು ನಿಮ್ಮದೇ ಹೋಗುವ ಸಂಭವವೂ ಇದೆ. ಇಂಥ ಆಫರ್ ಕುರಿತು ಎಚ್ಚರ ವಹಿಸಿ. ಆಕರ್ಷಕ ಜಾಹೀರಾತಿಗೆ ಮರುಳಾಗಿ ಮೋಸ ಹೋಗಬೇಡಿ.
*
ಜನ ಆಸೆಬಿದ್ದು ಈ ರೀತಿ ಮಾಡ್ತಿದಾರೆ. ನಾವು ಈಗಾಗಲೇ ನಮ್ಮ ಇಲಾಖೆಯಿಂದ ಸೈಬರ್ ಕ್ರೈಮ್ ಕುರಿತಂತೆ ಶಾಲೆ ಕಾಲೇಜಿ ನಲ್ಲೂ ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಮೂಡಿಸ್ತಿದ್ದೇವೆ. ಶೇರ್ ಮಾರ್ಕೆಟ್, ಗಿಪ್ಟ್ ಹೀಗೆ, ಆಫರ್ ಹೀಗೇ ಹತ್ತಾರು ರೀತಿಯಲ್ಲಿ ಜನರನ್ನು ವಂಚಿಸೋಕಾರ್ಯ ಆಗ್ತಿದೆ. ಆದರೆ ಜನರೇ ಜಾಗೃತರಾಗಬೇಕು. ಏನೇ ಪರ್ಚೆಸ್ ಮಾಡಬೇಕು ಅಂದರೂ ಅಧಿಕೃತವಾಗಿರೋ ಆಯಾ ಆಯಪ್ ಗಳಿಗೆ ಹೋಗಬೇಕು. ಆಫರ್ ಆಸೆಗೆ ಬೀಳಬಾರದು.
-ಗಣೇಶ, ಡಿಎಸ್ಪಿ, ಶಿರಸಿ
ಇದನ್ನೂ ಓದಿ: Sirsi News: ಸ್ವಯಂ ಸೇವಕ ಸಂಘದವರಿಂದ ಪಥ ಸಂಚಲನ