ಬಸವರಾಜ ಹುಲಗಣ , ಮುದ್ದೇಬಿಹಾಳ
ಮುದ್ದೇಬಿಹಾಳ ಮತಕ್ಷೇತ್ರದ ಜನರು ಶಾಂತಿ ಪ್ರಿಯರು ಸೌಲಭ್ಯಗಳು ಬೇಕೆಂದು ಕೇಳುವವರಲ್ಲ. ತಮ್ಮ ಶಾಸಕರು ಅವರ ಅವಧಿಯ ಐದು ವರ್ಷಗಳ ಒಳಗೆ ಎಂದಾದರೂ ಒಂದು ದಿನ ನಮ್ಮ ಊರಿಗೆ ಬಂದಾರು ಎಂದು ದಾರಿ
ಕಾಯುತ್ತಿರುವರು.
ಕಳೆದ ಒಂದು ಅವಧಿ (5 ವರ್ಷ)ಯನ್ನು ಹೊರತುಪಡಿಸಿದರೆ ಅದಕ್ಕೂ ಹಿಂದಿನ 25 ವರ್ಷಗಳ ನಿರಂತರವಾಗಿ
ಸಿ.ಎಸ್.ನಾಡಗೌಡರನ್ನು ಶಾಸಕರನ್ನಾಗಿ ಅಧಿಕಾರದಲ್ಲಿ ಕೂಡಿಸಿದ್ದಾರೆ. ಚುನಾಯಿತರಾಗಿ ಒಂದು ವರ್ಷದ ಅವಧಿ
ಪೂರ್ಣಗೊಂಡರೂ ಬೆಂಗಳೂರು ಬಿಟ್ಟು ಹಳ್ಳಿ ಕಡೆಗೆ ಬರುತ್ತಿಲ್ಲ. ಬಂದರೆ ಮುದ್ದೇಬಿಹಾಳದ ತಮ್ಮ ಮನೆಗೆ ಬಂದು, ಅಲ್ಲಿಗೆ ಬರುವ ಕೆಲ ಭಟ್ಟಂಗಿಗಳು ಮತ್ತು ಮುಖಂಡರನ್ನು ಭೇಟಿಯಾಗಿ ಹೊರಟು ಹೋಗುತ್ತಾರೆ. ಆದರೆ
ತಮ್ಮ ಊರುಗಳಿಗೆ ಬರುತ್ತಿಲ್ಲ ಎಂದು ಸಾಮಾನ್ಯ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಈ ಹಿಂದಿನ ಶಾಸಕರ ಅವಧಿಯಲ್ಲಿ ಆಗಿರುವ ಕೆಲವು ಅಭಿವೃದ್ಧಿ ಕೆಲಸಗಳನ್ನು ಬಿಟ್ಟರೆ ಇವರು ಬಂದಾಗಿನಿಂದ ಮತ್ತೊಂದು ಕೆಲಸವೇ ಆಗುತ್ತಿಲ್ಲ. ತಮ್ಮ ಅಹವಾಲು ಕೇಳಲು ಶಾಸಕರು ಗ್ರಾಮ ವಾಸ್ತವ್ಯದಂತಹ ಕಾರ್ಯಕ್ರಮ ಗಳನು ಹಮ್ಮಿಕೊಂಡರೆ ಅವರ ಹಿಂದೆ ಆಯಾ ಹೋಬಳಿಗಳ ಅಧಿಕಾರಿಗಳು, ತಹಸೀಲ್ದಾರರು, ಎಂಜನೀಯರರು ಬರುತ್ತಾರೆ. ಗ್ರಾಮೀಣ ಜನರ ನೋವು ಮತ್ತು ಅವಶ್ಯಕತೆಗಳ ಅರಿವಾಗಿ ಒಂದೆರಡು ಕೆಲಸಗಳಾದರೂ ಆಗಬಹುದು
ಎಂಬ ಆಸೆಯಲ್ಲಿದ್ದಾರೆ. ರೈತರ ಹೊಲಗಳಿಗೆ ನೀರು, ವಿದ್ಯುತ್, ಹೊಲಗಳಿಗೆ ಉತ್ತಮ ರಸ್ತೆಗಳು ತುಂಬಾ ಅವಶ್ಯಕ ವಾಗಿವೆ. ಅವುಗಳಲ್ಲಿ ಸ್ವಲ್ಪವಾದರೂ ಇಡೇರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಸರಕಾರ ಕೊಟ್ಟಿರುವ ಭಾಗ್ಯಗಳನ್ನು ಪೂರೈಸಲು ಹಣ ಸಾಲುತ್ತಿಲ್ಲವೆಂದೆ ಹೇಳುತ್ತಿದ್ದಾರೆ. ಆದರೆ ಸರಕಾರದ ಭಾಗ್ಯ ಗಳೂ ಜನರಿಗೆ ಸರಿಯಾಗಿ ತಲುಪುತ್ತಿಲ್ಲ. ಗೃಹಲಕ್ಷ್ಮೀ ಮುಂತಾದವುಗಳ ಹಣ ಜಮಾ ಆಗುತ್ತಿಲ್ಲ. ಭಾಗ್ಯಗಳ ಕಡೆಗೆ ಕೈ ತೋರಿಸುತ್ತಾ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ನಿರ್ಲಕ್ಷ್ಯವಹಿಸಿದರೆ ಜನರು ಬೀದಿಗಿಳಿದು ತಕ್ಕಪಾಠ ಕಲಿಸುತ್ತಾರೆ.
- ಸಂಗಪ್ಪ ಗಸ್ತಿಗಾರ, ಯುವ ಮುಖಂಡರು