Saturday, 10th May 2025

BBK 11: ಚಿನ್ನಿ ಐ ಲವ್ ಯೂ: ಬಿಗ್ ಬಾಸ್ ಮನೆಗೆ ಕಾಲ್ ಮಾಡಿ ಭವ್ಯಾಗೆ ಪ್ರಪೋಸ್ ಮಾಡಿದ ತುಕಾಲಿ

Bhavya Gowda and Tukali Santhosh

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮೂರನೇ ವಾರಕ್ಕೆ ಕಾಲಿಟ್ಟಿದ್ದು ಕುತೂಹಲ ಕೆರಳಿಸುತ್ತಿದೆ. ಸ್ಪರ್ಧಿಗಳು ಇನ್ನೂ ಓಪನ್-ಅಪ್ ಆಗಿಲ್ಲ, ಪ್ರಾಮಾಣಿಕರಾಗಿಲ್ಲ ಎಂಬ ಮಾತು ಕಳೆದ ವಾರ ಕೇಳಿಬಂದಿತ್ತು. ಈ ವಾರವಾದರೂ ಮನೆ ಮಂದಿ ಇದನ್ನು ಸುಳ್ಳು ಮಾಡುತ್ತಾರ ನೋಡಬೇಕಿದೆ. ಈ ವಾರ ದೊಡ್ಮನೆಯಲ್ಲಿ ಕೆಲ ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ಸದ್ಯ ಮನೆಯಲ್ಲಿ ಒಂದು ಫೋನ್ ಬೂತ್ ಇಡಲಾಗಿದ್ದು ಬಿಗ್ ಬಾಸ್ ಇದರ ಮೂಲಕವೇ ಮಾತನಾಡುತ್ತಿದ್ದಾರೆ.

ಬೆಳ್ಳಂಬೆಳಗ್ಗೆ ಸ್ಪರ್ಧಿಗಳು ಎದ್ದ ತಕ್ಷಣ ಬಿಗ್​ ಬಾಸ್​ ಫೋನ್​ ಕರೆ ಮಾಡಿದ್ದಾರೆ. ಮನೆಯ ಕ್ಯಾಪ್ಟನ್​ ಶಿಶಿರ್​ ಈ ಫೋನ್​ ಸ್ವೀಕರಿಸಿದ್ದಾರೆ​. ಅತ್ತ ಕಡೆಯಿಂದ ಬಿಗ್ ಬಾಸ್ ‘ನಿಮ್ಮ ಎಲ್ಲರ ವರ್ತನೆಯಿಂದ ನನಗೆ ತುಂಬಾ ನೋವಾಗಿದೆ. ನಾನು ಬ್ರೇಕ್ ತೆಗೋತಾ ಇದ್ದೇನೆ. ಏನಿದ್ದರೂ ಈ ಫೋನ್ ಮೂಲಕವೇ ಮಾತನಾಡುತ್ತೇನೆ. ಮನೆಯ ನಿಯಮ ಪಾಲಿಸುವುದು ಬಹಳ ಮುಖ್ಯ, ಅದನ್ನು ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ’​ ಎಂದು ಹೇಳಿದ್ದಾರೆ.

ಬಿಗ್ ಬಾಸ್ ಫೋನ್ ಇಟ್ಟ ಕೆಲ ಸಮಯದ ಬಳಿಕ ತುಕಾಲಿ ಸಂತೋಷ್ ಕರೆ ಕೂಡ ಕರೆ ಮಾಡಿದ್ದಾರೆ. ತುಕಾಲಿ ಸಂತೋಷ್ ಅವರು ಕರೆ ಮಾಡುತ್ತಿದ್ದಂತೆ ಭವ್ಯಾ ಅವರು ಹೋಗಿ ಕರೆ ಸ್ವೀಕರಿಸಿದರು. ‘ಹೆಲೋ, ಚಿನ್ನಿ ಯಾಕ್ ಚಿನ್ನಿ? ಐ ಲವ್​ ಯೂ. ನೀನಿಲ್ಲದೆ ಇರೋಕೆ ಆಗ್ತಿಲ್ಲ’ ಎಂದರು ತುಕಾಲಿ ಸಂತೋಷ್. ಫೋನ್​ನಲ್ಲಿ ಮಾತನಾಡುತ್ತಿರುವುದು ಯಾರು ಎಂಬುದನ್ನು ಕಂಡುಹಿಡಿಯೋಕೆ ಭವ್ಯಾಗೆ ಸಾಧ್ಯವೇ ಆಗಲಿಲ್ಲ.

ಆ ಬಳಿಕ ಕರೆಯಲ್ಲಿರೋದು ತುಕಾಲಿ ಸಂತೋಷ್ ಎಂದು ಭವ್ಯಾಗೆ ಗೊತ್ತಾಗಿದೆ. ನಂತರ ಮಾನಸಾ ಕರೆ ಸ್ವೀಕರಿಸಿದರು. ‘ಭವ್ಯಾಗೆ ಏಕೆ ಐ ಲವ್​ ಯೂ ಎಂದೆ’ ಎಂದು ಕ್ಲಾಸ್ ತೆಗೆದುಕೊಂಡರು. ಇದಕ್ಕೆ ಉತ್ತರಿಸಿದ ಅವರು, ‘ಅವಳು ನಿನಗಿಂತ ಚೆನ್ನಾಗಿ ಇದ್ದಾಳೆ. ಹೀಗಾಗಿ, ಐ ಲವ್​ ಯೂ ಎಂದೆ ಎಂದರು ತುಕಾಲಿ ಸಂತೋಷ್. ಇಬ್ಬರ ಮಧ್ಯೆ ಫನ್ ಟಾಕ್ ಕೂಡ ನಡೆಯಿತು. ಆ ಬಳಿಕ ಸಂತೋಷ್ ಅವರು ಮನೆ ಮಂದಿಗೆ ಮಾನಾಸ ಮೂಲಕ ಒಂದೊಂದೆ ಟಿಪ್ಸ್ ನೀಡಿದ್ದಾರೆ.

BBK 11: ಫೇಸ್​ಬುಕ್ ಲೈವ್ ಬಂದು ಬಿಗ್ ಬಾಸ್​ನ ಎಲ್ಲ ವಿಚಾರ ಬಿಚ್ಚಿಟ್ಟ ರೂಪೇಶ್ ರಾಜಣ್ಣ