Wednesday, 14th May 2025

ಸ್ಟೇಟ್ ಐಕಾನ್ ಆಫ್ ಪಂಜಾಬ್ ಆಗಿ ನಟ ಸೋನು ಸೂದ್ ನೇಮಕ

ಮುಂಬೈ: ತೆರೆಯ ಮೇಲೆ ವಿಲನ್ ಪಾತ್ರಗಳಿಂದಲೇ ಜನಪ್ರಿಯತೆ ಪಡೆದುಕೊಂಡಿರುವ ಬಾಲಿವುಡ್ ನಟ ಸೋನು ಸೂದ್ ರ ಸಮಾಜಮುಖಿ ಕೆಲಸಗಳನ್ನು ಚುನಾವಣಾ ಆಯೋಗ ಕೂಡ ಗುರುತಿಸಿದೆ. ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಸಾವಿರಾರು ಜನರಿಗೆ ಸಹಾಯ ಮಾಡಿ ಸಮಾಜಮುಖಿ ಕೆಲಸಗಳ ಮೂಲಕ ಜನಮಾನಸದಲ್ಲಿ ರಿಯಲ್ ಹೀರೋ ಆಗಿ ಗಮನ ಸೆಳೆದಿದ್ದರು.

ನಟ ಸೋನು ಅವರನ್ನು ಚುನಾವಣಾ ಆಯೋಗ ಸ್ಟೇಟ್ ಐಕಾನ್ ಆಫ್ ಪಂಜಾಬ್ ಆಗಿ ನೇಮಕ ಮಾಡಿದೆ. ಈ ಕುರಿತು ಪಂಜಾಬ್ ನ ಮುಖ್ಯ ಚುನಾವಣಾಧಿಕಾರಿ ಟ್ವೀಟ್ ಮೂಲಕ ತಿಳಿಸಿದ್ದು, ರಿಯಲ್ ಹೀರೋ ಸೋನು ಸೂದ್ ಪಂಜಾಬ್ ರಾಜ್ಯದ ಐಕಾನ್ ಆಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದ್ದಾರೆ.

ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಾವಿರಾರು ಕಾರ್ಮಿಕರಿಗೆ ಉಚಿತ ಬಸ್ ವ್ಯವಸ್ಥೆ ಮಾಡಿ ಊರುಗಳಿಗೆ ತೆರಳಲು ಸಹಾಯ ಮಾಡಿದ್ದರು. ಕೇರಳದಲ್ಲಿ ಸಿಲುಕಿದ್ದ ಹಲವು ಮಹಿಳೆಯರು ಓಡಿಶಾಗೆ ತೆರಳಲು ವಿಮಾನ ವ್ಯವಸ್ಥೆ ಕೂಡ ಮಾಡಿ ದ್ದರು. ಉದ್ಯೋಗ ಕಳೆದುಕೊಂಡ ಹಲವರಿಗೆ ಉದ್ಯೋಗ ಕೊಡಿಸುವ, ಸಂಕಷ್ಟದಲ್ಲಿದ್ದ ವಿದ್ಯಾರ್ಥಿಗಳಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದರು.

Leave a Reply

Your email address will not be published. Required fields are marked *