Sunday, 11th May 2025

Electric Shock: ವಿದ್ಯುತ್ ತಂತಿ ತುಳಿದು ಡಿ ಗ್ರೂಪ್ ನೌಕರ ಸ್ಥಳದಲ್ಲೇ ಸಾವು

Electric shock

ಕಲಬುರಗಿ: ವಿದ್ಯುತ್ ತಂತಿ ತುಳಿದು (Electric shock) ಡಿ ಗ್ರೂಪ್ ನೌಕರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ‌ಕರಜಗಿ ಗ್ರಾಮದಲ್ಲಿ ಜರುಗಿದೆ. ಶಿವಪುತ್ರ ಹಾವಳಗಿ (32) ಮೃತ ದುರ್ದೈವಿಯಾಗಿದ್ದಾನೆ.

ಸಿಂಟೆಕ್ಸ್‌ನಲ್ಲಿ ನೀರು ಚೆಕ್ ಮಾಡಲು ತೆರಳಿದ್ದ ವೇಳೆ ವಿದ್ಯುತ್ ತಂತಿ ತುಳಿದು ಈತ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಮೃತ ಶಿವಪುತ್ರ ಹಾವಳಗಿ, ಕರಜಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಿ ಗ್ರೂಪ್ ನೌಕರನಾಗಿದ್ದಾನೆ.

ಈ ಸುದ್ದಿಯನ್ನೂ ಓದಿ | Renuka swamy Murder Case: ರೇಣುಕಾಸ್ವಾಮಿ ಕೊಲೆ ಆರೋಪಿ ಮತ್ತೆ ಬೆಂಗಳೂರು ಜೈಲಿಗೆ ಶಿಫ್ಟ್‌; ದರ್ಶನ್‌ಗೆ ಬಳ್ಳಾರಿಯೇ ಗತಿ

ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.