Sunday, 11th May 2025

Kalaburagi News: ನಿಂತಲ್ಲೇ ಕುಸಿದುಬಿದ್ದು ಹೋಟೆಲ್ ಸಿಬ್ಬಂದಿ ಸಾವು

Kalaburagi News

ಕಲಬುರಗಿ: ಹೃದಯಾಘಾತದಿಂದ ಹೋಟೆಲ್ ಸಿಬ್ಬಂದಿಯೊಬ್ಬರು ನಿಂತಲ್ಲೇ ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ನಗರದ (Kalaburagi News) ಆಮಂತ್ರಣ ಹೋಟೆಲ್‌ನಲ್ಲಿ ನಡೆದಿದೆ. ಮಂಗಳೂರು ಮೂಲದ ರಾಜೇಶ್ (53) ಮೃತ ದುರ್ದೈವಿ‌ಯಾಗಿದ್ದಾರೆ. ಕೌಂಟರ್ ಹತ್ತಿರ ನಿಂತಲ್ಲೇ ಕುಸಿದುಬಿದ್ದು ಮೃತಪಟ್ಟಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೃತ ರಾಜೇಶ್ ಕಳೆದ ಹದಿನೈದು ದಿನಗಳ ಹಿಂದಷ್ಟೇ ಆಮಂತ್ರಣ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದ್ದರು ಎನ್ನಲಾಗಿದೆ. ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಈ ಸುದ್ದಿಯನ್ನೂ ಓದಿ | Udaya TV: ಉದಯ ಟಿವಿ ಮುಖ್ಯಸ್ಥ, ಚಿತ್ರ ನಿರ್ಮಾಪಕ ಸೆಲ್ವಂ ನಿಧನ

ಎದೆ ಝಲ್ ಎನಿಸುವ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.