ಜೆ.ಎಂ.ಬಾಲಕೃಷ್ಣ
ಹಳೇಬೂದನೂರು ಬಳಿ ಮೇಲುಸೇತುವೆ ತಡೆಗೋಡೆಯಲ್ಲಿ ಬಿರುಕು
ಜೀವಭಯದಿಂದಲೇ ಸಂಚರಿಸುವ ಸವಾರರು
ಮಂಡ್ಯ: ಕೇಂದ್ರ ಸರ್ಕಾರದ ಪ್ರತಿಷ್ಠಿತ ಯೋಜನೆಯಾಗಿರುವ 10 ಸಾವಿರ ಕೋಟಿ ರೂ. ವೆಚ್ಚದ ಬೆಂಗಳೂರು-ಮೈಸೂರು ರಾಷ್ಟ್ರೀಯ ದಶಪಥ ಹೆದ್ದಾರಿ ಉದ್ಘಾಟನೆಯಾದ ಒಂದೂವರೆ ವರ್ಷಕ್ಕೇ ಕುಸಿತವಾಗಿದ್ದು, ತಡೆಗೋಡೆ ವಾಲಿರುವ ಘಟನೆ ತಾಲೂಕಿನ ಹಳೇಬೂದನೂರು ಗ್ರಾಮದ ಬಳಿ ನಡೆದಿದೆ.
ಕಳಪೆ ಕಾಮಗಾರಿಯಿಂದಾಗಿ ನಡೆದು ರಸ್ತೆ ಕುಸಿದು,ತಡೆಗೋಡೆವಾಲಿದ್ದು, ಸಾರ್ವಜನಿಕರು ಹಾಗೂ ವಾಹನ
ಸವಾರ ರಲ್ಲಿ ಜೀವಭಯ ಹುಟ್ಟಿಸುತ್ತಿದೆ. ರಸ್ತೆ ಹಾಗೂ ತಡೆಗೋಡೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೇಪೆ ಹಾಕುವ ಕೆಲಸಕ್ಕೆ ಮುಂದಾಗಿದೆ.
ಈ ಕುರಿತು ಮಾಹಿತಿ ನೀಡಿದ ಹಳೇಬೂದನೂರು ಗ್ರಾಮಸ್ಥ ಶಿವು, 2023ರ ಮಾರ್ಚ್ 12ರಂದು ಪ್ರಧಾನಿ ನರೇಂದ್ರ
ಮೋದಿ ಉದ್ಘಾಟಿಸುವ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಗುತ್ತಿಗೆದಾರ ಕಂಪನಿ ಡಿಬಿಎಲ್ 4 ಕಿ.ಮೀ ಉದ್ದದ ರಸ್ತೆ
ಕಾಮಗಾರಿಯನ್ನು ಕಳಪೆ ಗುಣಮಟ್ಟದಲ್ಲಿ ನಡೆಸಿದೆ ಎಂದು ದೂರಿದರು.
ಅಲೋಕ್ಕುಮಾರ್ ಪರಿಶೀಲನೆ ಕಳಪೆ ಕಾಮಗಾರಿಯ ಬಗ್ಗೆ ಸ್ಥಳೀಯರ ಆರೋಪದ ನಂತರವೂ ಎಚ್ಚೆತ್ತುಕೊಳ್ಳದ
ಕಂಪನಿ ತರಾತುರಿಯಲ್ಲಿ ಕಾಮಗಾರಿ ಮುಗಿಸಿತ್ತು. ಸ್ಥಳೀಯರು ಅಂದೇ ರಸ್ತೆ ಅಂಡರ್ಪಾಸ್ ಬಳಿ ತಡೆಗೋಡೆಗಳು
ವಾಲಿದ ಬಗ್ಗೆ ದೂರು ನೀಡಿದ್ದರು. ನಂತರ ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ನೆರವೇರಿಸಿ ದ್ದರು. ಆದರೆ ಅಪಘಾತಗಳು ಹೆಚ್ಚಾದ ನಂತರ ಸಂಚಾರ ಮತ್ತು ರಸ್ತೆ ಸುರಕ್ಷತಾ ಆಯುಕ್ತ ಅಲೋಕ್ ಕುಮಾರ್ ಕಾಮಗಾರಿಯನ್ನು ಪರಿಶೀಲಿಸಿದ್ದರು. ಆದರೂ ಯಾವುದೇ ಕ್ರಮ ಆಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಾಂಕ್ರೀಟ್ ತುಂಬುವ ಕೆಲಸ : ತಡೆಗೋಡೆ ವಾಲಿರುವುದನ್ನು ತಡೆಯಲು ಕಳೆದೊಂದು ವಾರದಿಂದ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕಬ್ಬಿಣದ ರಾಡು ಅಳವಡಿಸಲು ರಂಧ್ರಗಳನ್ನು ಮಾಡಿ ಜೊತೆಗೆ ಕಾಂಕ್ರಿಟ್ ತುಂಬುವ ಕಾಮಗಾರಿ ಸಾಗಿದೆ. ಇದು ಸಹ ಅವೈಜ್ಞಾನಿಕ, ಕಳಪೆ ಕಾಮಗಾರಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು,
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಅಂಡರ್ಪಾಸ್ ಕುಸಿತ
ಹಳೇ ಬೂದನೂರು ಬಸ್ ನಿಲ್ದಾಣ ಬಳಿಯ ಅಂಡರ್ಪಾಸ್ ಮೇಲಿನ ರಸ್ತೆ ಅಲ್ಪ ಪ್ರಮಾಣದ ಕುಸಿತವಾಗಿದೆ.
ಬಹುಮುಖ್ಯವಾಗಿ ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಮಾರ್ಗದಲ್ಲಿ ರಸ್ತೆ ಕುಸಿದಿದೆ. ವಾಹನ ಗುಂಡಿಗೆ
ಬಿದ್ದಾಗ ಸವಾರರು ಗಲಿಬಿಲಿ ಗೊಳ್ಳುವುದು ಸಾಮಾನ್ಯವಾಗಿದ್ದು, ಹಗಲು ಹಾಗೂ ರಾತ್ರಿ ವೇಳೆ ಜೀವಭಯದಿಂದ ಸಂಚರಿಸುವಂತಾ ಗಿದೆ. ಮೊದಲೇ ಅಪಘಾತ ಹೆದ್ದಾರಿ ಎಂಬ ಕುಖ್ಯಾತಿ ಪಡೆದಿರುವ ರಸ್ತೆಯ ಲ್ಲೀಗ ಮತ್ತೊಂದು ಸಮಸ್ಯೆ ವಾಹನ ಸವಾರರನ್ನು ಕಾಡುವಂತಾಗಿದೆ.
ಇದನ್ನೂ ಓದಿ: Mandya Violence: ನಾಗಮಂಗಲ ಗಲಭೆಯ 55 ಆರೋಪಿಗಳಿಗೆ ಜಾಮೀನು