Thursday, 15th May 2025

Viral Video: ರೈಲಿನಲ್ಲಿ ವಿಡಿಯೊ ಮಾಡುತ್ತಿದ್ದ ಹುಡುಗನ ಮೊಬೈಲ್‌ ಎಗರಿಸಿದ ಚಾಲಾಕಿ ಕಳ್ಳ; ವಿಡಿಯೊ ವೈರಲ್

Viral Video

ಬಿಹಾರ: ಸ್ಟಂಟ್‍ ಮಾಡುವುದನ್ನು ನೋಡಲು ಚೆನ್ನಾಗಿರುತ್ತದೆ. ಆದರೆ ಕೆಲವರು ತಮ್ಮ ಈ ಸಾಮರ್ಥ್ಯವನ್ನು ಕಳ್ಳತನದಂತಹ ಕೆಟ್ಟ ಕೆಲಸಗಳಿಗೆ ಬಳಸಿಕೊಳ್ಳುತ್ತಾರೆ. ಇತ್ತೀಚೆಗೆ ಅಂತಹದೊಂದು ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರೈಲಿನಲ್ಲಿ ಪ್ರಯಾಣಿಸುತ್ತ ವಿಡಿಯೊ ಮಾಡುತ್ತಿದ್ದ ಹುಡುಗನ ಮೊಬೈಲ್‌ ಅನ್ನು ಕಬ್ಬಿಣದ ಸೇತುವೆಯ ಕಂಬಗಳ ಮೇಲೆ ನೇತಾಡುತ್ತಾ ಸ್ಟಂಟ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ಕಳ್ಳತನ ಮಾಡಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ವೈರಲ್ (Viral Video) ಆಗಿದೆ.

ಬಿಹಾರದ ಬೆಗುಸರಾಯ್‍ನಲ್ಲಿ  ಪಾಟ್ನಾ ಮತ್ತು ಬೇಗುಸರಾಯ್ ಅನ್ನು ಸಂಪರ್ಕಿಸುವ ರಾಜೇಂದ್ರ ಸೇತು ರೈಲು ಸೇತುವೆಯಲ್ಲಿ ಈ ದರೋಡೆ ನಡೆದಿದೆ. ವೈರಲ್ ವಿಡಿಯೊದಲ್ಲಿ ಕಟಿಹಾರ್‌ನಿಂದ ಪಾಟ್ನಾಗೆ ಪ್ರಯಾಣಿಸುತ್ತಿದ್ದ ಇಂಟರ್ ಸಿಟಿ ಎಕ್ಸ್‌ಪ್ರೆಸ್‌ ರೈಲಿನ ಓಪನ್ ಗೇಟ್‍ನಲ್ಲಿ ಸಮೀರ್ ಕುಮಾರ್ ಎಂಬ ಹುಡುಗ ತನ್ನ ಫೋನ್‍ನಿಂದ ಗಂಗಾ ನದಿಯ ಸುಂದರ ನೋಟವನ್ನು ರೆಕಾರ್ಡ್ ಮಾಡುತ್ತಿದ್ದ. ಆತ ಕಣ್ಣು ಮಿಟುಕಿಸುವಷ್ಟರಲ್ಲಿ ಕಬ್ಬಿಣದ ಸೇತುವೆಯ ಕಂಬಗಳ ಮೇಲೆ ನೇತಾಡುತ್ತಾ ಸ್ಟಂಟ್ ಮಾಡುತ್ತಾ ಬಂದ ವ್ಯಕ್ತಿಯೊಬ್ಬ ಫೋನ್ ಎಗರಿಸಿದ್ದಾನೆ.

ಈ ವಿಡಿಯೊದಲ್ಲಿ ಕಳ್ಳನ ಮುಖ ಮಾತ್ರ ಸ್ಪಷ್ಟವಾಗಿ ಕಾಣುತ್ತಿಲ್ಲ. ಈ ವಿಡಿಯೊವನ್ನು  ನೋಡಿದವರು  ಈ ರೀತಿಯಲ್ಲಿ ಕೂಡ ಕಳ್ಳತನ ಮಾಡಲು ಸಾಧ್ಯವೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಈ ನಗರದಲ್ಲಿ ಪುರುಷರು ಮಹಿಳೆಯರಂತೆ ಸೀರೆ ಉಡುತ್ತಾರೆ! ಇದೆಂಥಾ ಶಾಪ ಗೊತ್ತಾ?

ಕಬ್ಬಿಣದ ಕಂಬಕ್ಕೆ ಕಟ್ಟಿದ ಹಗ್ಗದಿಂದ ನೇತಾಡುತ್ತಿದ್ದ ಮುಖವಾಡ ಧರಿಸಿದ ವ್ಯಕ್ತಿ, ಪ್ರಯಾಣಿಕನಿಂದ ಫೋನ್ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಆದರೆ ಒಂದು ಸೆಕೆಂಡಿನಲ್ಲಿ, ಫೋನ್ ಕಣ್ಮರೆಯಾಗಿದ್ದನ್ನು ಕಂಡು ಎಲ್ಲರೂ ದಿಗ್ಭ್ರಮೆಗೊಂಡಿದ್ದಾರೆ. ಆಘಾತಕಾರಿ ವಿಡಿಯೊ ಒಂದು ಅಪಾಯಕಾರಿ ಕೃತ್ಯವನ್ನು ತೋರಿಸುತ್ತದೆ. ಇದು ವೀಕ್ಷಕರಿಗೆ ಕುತೂಹಲ ಮತ್ತು ಆಶ್ಚರ್ಯವನ್ನುಂಟು ಮಾಡಿದೆ.