Sunday, 11th May 2025

Cult Movie: ಝೈದ್ ಖಾನ್ ಅಭಿನಯದ ಕಲ್ಟ್ ಸಿನಿಮಾ ಸೆಟ್‌ನಲ್ಲಿ ರಚಿತಾರಾಮ್ ಹುಟ್ಟುಹಬ್ಬ!

Cult Movie

ಬೆಂಗಳೂರು: “ಬನಾರಸ್” ಚಿತ್ರದ ನಂತರ ಝೈದ್ ಖಾನ್ (Zaid Khan) ನಾಯಕರಾಗಿ ನಟಿಸುತ್ತಿರುವ ಹಾಗೂ “ಉಪಾಧ್ಯಕ್ಷ” ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದ “ಕಲ್ಟ್” ಚಿತ್ರಕ್ಕೆ (Cult Movie) ಉಡುಪಿಯಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ ಇಪ್ಪತ್ತು ದಿನಗಳ ಚಿತ್ರೀಕರಣ ಮುಕ್ತಾಯವಾಗಿದೆ. ರಚಿತಾರಾಮ್ (Rachita Ram) ಹಾಗೂ ಮಲೈಕಾ “ಕಲ್ಟ್” ಚಿತ್ರದ ನಾಯಕಿಯರಾಗಿ ನಟಿಸುತ್ತಿದ್ದಾರೆ. ಉಡುಪಿ ಭಾಗದ ಚಿತ್ರೀಕರಣದಲ್ಲಿ ಝೈದ್ ಖಾನ್ ಹಾಗೂ ರಚಿತಾರಾಮ್ ಅಭಿನಯಿಸುತ್ತಿದ್ದಾರೆ. ಅ. 3ರಂದು ನಾಯಕಿ ರಚಿತಾರಾಮ್ ಅವರ ಹುಟ್ಟುಹಬ್ಬ. ಚಿತ್ರೀಕರಣ ಸ್ಥಳದಲ್ಲಿ “ಕಲ್ಟ್” ಚಿತ್ರತಂಡ ಅದ್ಧೂರಿಯಾಗಿ ರಚಿತಾರಾಮ್ ಅವರ ಹುಟ್ಟುಹಬ್ಬ (Birthday) ಆಚರಿಸಿದ್ದಾರೆ.‌

ಆಶ್ರಿತ್ ಸಿನಿಮಾಸ್ ಲಾಂಛನದಲ್ಲಿ “ಕಲ್ಟ್” ಸಿನಿಮಾ ನಿರ್ಮಾಣವಾಗುತ್ತಿದ್ದು. ರಚಿತಾರಾಮ್ ಹಾಗೂ ಮಲೈಕಾ “ಕಲ್ಟ್” ಚಿತ್ರದ ನಾಯಕಿಯರಾಗಿ ನಟಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ | BESCOM: ಬೆಸ್ಕಾಂ ಗ್ರಾಹಕರೇ ಗಮನಿಸಿ; ಅ.5, 6 ರಂದು ಆನ್‌ಲೈನ್‌ ಸೇವೆ ಅಲಭ್ಯ

ರಚನೆ ಹಾಗೂ ನಿರ್ದೇಶನ ಅನಿಲ್ ಕುಮಾರ್ ಅವರದು. ಜೆ.ಎಸ್. ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಂ. ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.