Saturday, 10th May 2025

Prema Hugar: ಮುಂಜಾನೆ ಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಪ್ರೇಮ ಹೂಗಾರ್ ನಿಧನ

Prema Hugar

ಹುಬ್ಬಳ್ಳಿ: ಮುಂಜಾನೆ ಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಪ್ರೇಮ ಹೂಗಾರ್ (Prema Hugar) (ಹಿರಿಯ ಪತ್ರಕರ್ತ ಗುರುರಾಜ ಹೂಗಾರ ಪತ್ನಿ) ಅವರು ಹುಬ್ಬಳ್ಳಿಯಲ್ಲಿ ಇಂದು ನಿಧನರಾಗಿದ್ದಾರೆ.

ಮೃತರು ಪತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ)‌ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರಾರ್ಥಿಸಿದ್ದಾರೆ.