Monday, 12th May 2025

Car Accident: ಯೂಟರ್ನ್ ಕಾರುಗಳ ನಡುವೆ ಡಿಕ್ಕಿ, ಹಲವರು ಆಸ್ಪತ್ರೆಗೆ ದಾಖಲು

ಚಿಂತಾಮಣಿ: ಬೆಂಗಳೂರು ರಸ್ತೆಯ ಯಂಗ್ ಸ್ಕೈ ರೆಸಾರ್ಟ್ ಬಳಿ ಯು ಟರ್ನ್ ಹೊಡೆಯುತ್ತಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಹಲವರು ಗಾಯಗಳಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಟಮಾಚನಹಳ್ಳಿ ಗೇಟ್ ಸಮೀಪ ನಡೆದಿದೆ.

ಬೆಂಗಳೂರು ಕಡೆಯಿಂದ ಮದನಪಲ್ಲಿ ಕಡೆ ಹೋಗಲು ಚಿನ್ನಸಂದ್ರ ರಸ್ತೆ ಮೂಲಕ ಚಿಂತಾಮಣಿ ನಗರಕ್ಕೆ ಬಂದು  ಹೋಗಲು ಬಂದ ಶಿಫ್ಟ್ ಕಾರ್ ಕಟಮಾಚನಹಳ್ಳಿ ಗೇಟ್ ಸಮೀಪದ ಯಂಗ್ ಸ್ಕೈ ರೆಸಾರ್ಟ್ ಮುಂಭಾಗ ಯು ಟರ್ನ್ ಹೊಡೆಯುತ್ತಿದ್ದ ವೇಳೆ ಚಿಂತಾಮಣಿ ಕಡೆಯಿಂದ ಹೋಗುತ್ತಿದ್ದ ಮಹೇಂದ್ರ ಕಂಪನಿಯ ಕಾರು ಡಿಕ್ಕಿ ಹೊಡೆದು ರಸ್ತೆಯ ಪಕ್ಕದಲ್ಲಿದ್ದ ಹಳ್ಳಕ್ಕೆ ಉರುಳಿದೆ.

ಅದೃಷ್ಟ ವಶಾತ್ ಎರಡು ಕಾರಿನಲ್ಲಿದ್ದ ಜನರು ಪ್ರಾಣಾಪಾಯದಿಂದ ಅಪಾರಾಗಿದ್ದು ಸಣ್ಣ ಪುಟ್ಟ ಗಾಯಗಳಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ ಎಂದು ಗೊತ್ತಾಗಿದೆ.

ಘಟನೆಯ ವಿಷಯ ತಿಳಿದ ತಕ್ಷಣ 112 ವಾಹನದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ನೋಡಿ: Chikkaballapur News: ಮಾರಕ ಕುಲಾಂತರಿ ತಳಿ ಬಿತ್ತನೆ ಬೀಜದ ವಿಷ ವರ್ತುಲಕ್ಕೆ ಸರಕಾರ ಅವಕಾಶ ನೀಡಬಾರದು- ಎಂ.ಆರ್.ಲಕ್ಷ್ಮೀನಾರಾಯಣ