Wednesday, 14th May 2025

Virat Kohli fan: ಕೊಹ್ಲಿಯ ಆಟ ನೋಡಲು 58 ಕಿ.ಮೀ ಸೈಕಲ್‌ ತುಳಿದು ಕಾನ್ಪುರಕ್ಕೆ ಬಂದ 15ರ ಪೋರ

Virat Kohli fan

ಕಾನ್ಪುರ: ವಿರಾಟ್ ಕೊಹ್ಲಿ(Virat Kohli) ವಿಶ್ವದ ಅತ್ಯಂತ ಜನಪ್ರಿಯ ಕ್ರೀಡಾಪಟುಗಳಲ್ಲಿ ಒಬ್ಬರು, ಮತ್ತು ಅವರ ಅಭಿಮಾನಿಗಳಿಗೆ ಯಾವುದೇ ಗಡಿಯ ಮಿತಿ ಇಲ್ಲ. ಭಾರತದ ಬದ್ಧ ಎದುರಾಳಿ ಪಾಕಿಸ್ತಾನದಲ್ಲಿಯೂ ವಿರಾಟ್​ ಕೊಹ್ಲಿ ಅಪಾರ ಅಭಿಮಾನಿಗಳಿದ್ದಾರೆ(Virat Kohli fan). ಅವರನ್ನು ಭೇಟಿಯಾಗಲೇ ಎಷ್ಟೇ ಮಂದಿ ವರ್ಷಾನು ಗಟ್ಟಲೆ ಕಾದು ಕುಳಿತಿರುತ್ತಾರೆ. ಇದೀಗ ಕೊಹ್ಲಿಯನ್ನು ನೋಡಲೆಂದೆ 15 ವರ್ಷದ ಪೋರನೊಬ್ಬ ಬರೋಬ್ಬರಿ 58 ಕಿ.ಮೀ ದೂರ ಸೈಕಲ್‌ ತುಳಿದು ಕಾನ್ಪುರ(Kanpur) ತಲುಪಿದ್ದಾನೆ. ಈ ವಿಡಿಯೊ ವೈರಲ್‌ ಆಗಿದೆ.

ಕೊಹ್ಲಿ ಈ ಅಭಿಮಾನಿಯ ಹೆಸರು ಕಾರ್ತಿಕೇ(Kartikey). ಈತ ಉತ್ತರ ಪ್ರದೇಶದ ಉನ್ನಾವೋ(Unnao ) ನಿವಾಸಿಯಾಗಿದ್ದು 10ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಕಾನ್ಪುರದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯವನ್ನು ನೋಡಲು ಬಂದಿದ್ದ ಈತ ಸ್ಟೇಡಿಯಂ ಹೊರ ಭಾಗದಲ್ಲಿ ನಿಂತಿದ್ದ ವೇಳೆ ಸ್ಥಳೀಯ ಯೂಟ್ಯೂಬರ್ ಒಬ್ಬ ಸಂದರ್ಶಿಸಿದ್ದಾರೆ. ಈ ವೇಳೆ ಆತ ತನ್ನ ಸೈಕಲ್‌ ಪ್ರಯಾಣದ ವಿಚಾರವನ್ನು ತಿಳಿಸಿದ್ದಾನೆ.

ನಾನು 10ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಉನ್ನಾವೋದೊಂದಿ ಸೈಕಲ್‌ ಮೂಲಕ ಬಂದಿದ್ದೇನೆ. ಬೆಳಗ್ಗಿನ ಜಾವ 4 ಗಂಟೇಗೆ ಸೈಕಲ್‌ ತುಳಿಯಲು ಆರಂಭಿಸಿ ಮಧ್ಯಾಹ್ನ 11 ಗಂಟೆಗೆ ಕಾನ್ಪುರ ತಲುಪಿದೆ. ವಿರಾಟ್‌ ಕೊಹ್ಲಿಯನ್ನು ನೋಡಲೆಂದೆ ಈ ಸಾಹಸ ಮಾಡಿದೆ ಎಂದು ಹೇಳಿದ್ದಾನೆ. ತನ್ನ ಪೋಷಕರು ಕೂಡ ಇಲ್ಲಿಗೆ ಬರಲು ಬೆಂಬಲ ಸೂಚಿಸಿದ್ದಾರೆ. ಮೊದಲ ದಿನದಾಟ ಮುಕ್ತಾಯದ ಬಳಿಕ ಬಳಿಕ ಮತ್ತೆ ಸೈಕಲ್‌ ಮೂಲಕ ಊರಿಗೆ ತೆರಳಲಿದ್ದೇನೆ ಎಂದು ಹೇಳುತ್ತಿರುವುದು ವಿಡಿಯೊದಲ್ಲಿ ಕಾಣಬಹುದಾಗಿದೆ. ಹಳೆಯ ಒಂದು ಸೈಕಲ್‌ನಲ್ಲಿ ಈತ ಇಷ್ಟು ದೂರ ಕ್ರಮಿಸಿದ ಈತನ ಸಾಧನೆಗೆ ನಿಜಕ್ಕೂ ಸಲಾಂ ಹೇಳಲೇ ಬೇಕು.

ಇದನ್ನೂ ಓದಿ IND vs BAN: ಒಂದೂ ಎಸೆತ ಕಾಣದೆ ರದ್ದುಗೊಂಡ 2ನೇ ದಿನದಾಟ

ಭಾರತ ತಂಡ ಈ ಪಂದ್ಯದಲ್ಲಿ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಕಾರಣ ಕಾರ್ತಿಕೇಗೆ ತನ್ನ ನೆಚ್ಚಿನ ವಿರಾಟ್‌ ಕೊಹ್ಲಿಯ ಬ್ಯಾಟಿಂಗ್‌ ನೋಡಲು ಸಾಧ್ಯವಾಗಲಿಲ್ಲ. 2ನೇ ದಿನದಾಟ ಒಂದೂ ಎಸೆತ ಕಾಣದೆ ರದ್ದುಗೊಂಡಿದೆ. ಉಳಿದಿರುವ ಮೂರು ದಿನಗಳ ಆಟ ಕೂಡ ನಡೆಯುವುದು ಅನುಮಾನ ಎನ್ನಲಾಗಿದೆ. ಮೂರನೇ ದಿನವಾದ ಭಾನುವಾರವೂ ಶೇ. 58 ರಷ್ಟು ಮಳೆ ಭೀತಿ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.