ಮುಂಬೈ: ಅಲ್ಕಾ ಯಾಗ್ನಿಕ್ ಅವರನ್ನು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಶ್ರೇಷ್ಠ ಗಾಯಕರಲ್ಲಿ ಒಬ್ಬರು. ಅವರು ಹಿಂದಿ ಚಲನಚಿತ್ರಗಳಿಗೆ ಅನೇಕ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಇಂತಹ ಖ್ಯಾತ ಗಾಯಕಿ ಅಲ್ಕಾ ಯಾಗ್ನಿಕ್ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ, ಅವರ ವೈವಾಹಿಕ ಜೀವನ ಸಿನಿಮಾ ಕಥೆಗಳಂತೆ ಕಠಿಣವಾಗಿದೆ. ದೇಶದ ಅತ್ಯಂತ ಜನಪ್ರಿಯ ಗಾಯಕಿಯಾಗಿರುವ ಅಲ್ಕಾ ಯಾಗ್ನಿಕ್ ತನ್ನ ವೈಯಕ್ತಿಕ ಜೀವನದ ಬಗ್ಗೆ ಯಾವತ್ತೂ ಸಾವರ್ಜನಿಕವಾಗಿ ಮಾತನಾಡಲು ಇಷ್ಟಪಡುವುದಿಲ್ಲ. ಆದಾಗ್ಯೂ ಅವರು ತಮ್ಮ ಪತಿಯಿಂದ ದೂರವಿರಲು ಕಾರಣವೇನು ಎಂಬ ಮಾಹಿತಿ ಇಲ್ಲಿದೆ.
ಗಾಯಕಿ ಅಲ್ಕಾ ಯಾಗ್ನಿಕ್ ಉದ್ಯಮಿ ನೀರಜ್ ಕಪೂರ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು ಈ ದಂಪತಿಗೆ ಸಯೇಶಾ ಕಪೂರ್ ಎಂಬ ಮಗಳಿದ್ದಾಳೆ. ಆಶ್ಚರ್ಯಕಾರಿ ಸಂಗತಿಯೆಂದರೆ, ಅಲ್ಕಾ ಮತ್ತು ಅವರ ಪತಿ ನೀರಜ್ ಕಳೆದ 28 ವರ್ಷಗಳಿಂದ ಜೊತೆಯಾಗಿಲ್ಲ.

ಅಲ್ಕಾ ಯಾಗ್ನಿಕ್ ಮತ್ತು ನೀರಜ್ ಮೊದಲ ಬಾರಿಗೆ ಭೇಟಿಯಾದದ್ದು ಹೇಗೆ?
ವರದಿಗಳ ಪ್ರಕಾರ, ಅಲ್ಕಾ ಯಾಗ್ನಿಕ್ ಮೊದಲ ಬಾರಿಗೆ ನೀರಜ್ ಕಪೂರ್ ಅವರನ್ನು ರೈಲಿನಲ್ಲಿ ಭೇಟಿಯಾಗಿದ್ದರು. ಆ ಪ್ರಯಾಣದ ವೇಳೆ ಅವರು ಒಳ್ಳೆಯ ಸ್ನೇಹಿತರಾಗಿದ್ದರು. ಒಬ್ಬರಿಗೊಬ್ಬರು ಸಂಪರ್ಕದಲ್ಲಿದ್ದರು. ಇಬ್ಬರೂ ಸಂಪೂರ್ಣವಾಗಿ ವಿಭಿನ್ನ ಕ್ಷೇತ್ರಗಳಲ್ಲಿದ್ದರು ಕೂಡ ಅವರು ಆಗಾಗ ಭೇಟಿಯಾಗುತ್ತಲೇ ಇದ್ದರು ಮತ್ತು ಅಂತಿಮವಾಗಿ ಅವರ ಆರು ತಿಂಗಳ ಸ್ನೇಹ ಪ್ರೀತಿಗೆ ಬದಲಾಗಿತ್ತು. ಎರಡು ವರ್ಷಗಳ ಕಾಲ ಸಂಬಂಧದಲ್ಲಿದ್ದ ನಂತರ ಇಬ್ಬರೂ 1989 ರಲ್ಲಿ ಮದುವೆಯಾಗಿದ್ದರು. ಆದರೆ ಅಲ್ಕಾ ನೀರಜ್ ಅವರನ್ನು ಮದುವೆಯಾಗುವುದು ಅಲ್ಕಾ ಅವರ ಪೋಷಕರಿಗೆ ಇಷ್ಟವಿರಲಿಲ್ಲ.

ನೀರಜ್ ಕಪೂರ್ ಶಿಲ್ಲಾಂಗ್ ಮೂಲದ ಉದ್ಯಮಿಯಾಗಿದ್ದರಿಂದ, ಇಬ್ಬರ ನಡುವಿನ ಅಂತರವು ಅವರ ವೈವಾಹಿಕ ಜೀವನದಲ್ಲಿ ದೊಡ್ಡ ಸಮಸ್ಯೆಯಾಗಬಹುದು ಎಂದು ಅವರ ಪೋಷಕರ ಅಭಿಪ್ರಾಯವಾಗಿತ್ತು. ಆದರೆ ಅಲ್ಕಾ ಅವರಿಗಾಗಿ ನೀರಜ್ ಅವರು ಮುಂಬೈಗೆ ಬಂದು ನೆಲೆಸಲು ನಿರ್ಧರಿಸಿದ್ದರು. ಮದುವೆಯಾದ ನಂತರ, ನೀರಜ್ ಮುಂಬೈಗೆ ತೆರಳಿ ಅಲ್ಲಿ ತಮ್ಮದೇ ಆದ ವ್ಯವಹಾರವನ್ನು ಪ್ರಾರಂಭಿಸಿದ್ದರು.
ಇದನ್ನೂ ಓದಿ:ನಿಲ್ಲಿಸಿದ್ದ ಕಾರಿನ ಪಕ್ಕದಲ್ಲಿ ರೊಮ್ಯಾನ್ಸ್ ಮಾಡಿದ ಪ್ರೇಮಿಗಳು; ವಿಲನ್ ಥರ ಬಂದ ಪೊಲೀಸಪ್ಪ… ಮುಂದೇನಾಯಿತು?

ವರದಿಗಳ ಪ್ರಕಾರ, ಕಪೂರ್ ಆ ಬಳಿಕ ವ್ಯವಹಾರದಲ್ಲಿ ಭಾರೀ ನಷ್ಟ ಅನುಭವಿಸಿದ್ದರು. ಆಗ ಅಲ್ಕಾ ಸ್ವತಃ ನೀರಜ್ ಅವರಿಗೆ ಶಿಲ್ಲಾಂಗ್‌ಗೆ ತೆರಳಿ ಅಲ್ಲಿ ಅವರ ವ್ಯವಹಾರ ಮುಂದುವರಿಸಲು ಕೋರಿಕೊಂಡಿದ್ದರು. ಒಟ್ಟಾರೆ ಮದುವೆಯಾದ ನಾಲ್ಕು-ಐದು ವರ್ಷಗಳ ನಂತರ, ಇಬ್ಬರೂ ತಮ್ಮ ವೈವಾಹಿಕ ಜೀವನದಲ್ಲಿ ಕಠಿಣ ಹಂತ ಎದುರಿಸಿದ್ದಾರೆ.
Today is our 25th #marriage anniversary! My #hubby has always been my greatest #support. Feel #blessed! ^_^ pic.twitter.com/PStq2XZiNv
— Alka Yagnik (@thealkayagnik) February 9, 2014
ಇಬ್ಬರೂ ಪರಸ್ಪರರಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಅರಿತುಕೊಂಡರೂ ಕೂಡ ಕಳೆದ 28 ವರ್ಷಗಳಿಂದ ನೀರಜ್ ಕಪೂರ್ ಮತ್ತು ಅಲ್ಕಾ ಯಾಗ್ನಿಕ್ ದೀರ್ಘಕಾಲ ತಮ್ಮ ಸಂಬಂಧದಿಂದ ದೂರವಿದ್ದಾರೆ.