Saturday, 10th May 2025

Udupi News: ಈಜುತ್ತಾ ಹೊಳೆ ದಾಟಿ, ವಿದ್ಯುತ್‌ ಸಮಸ್ಯೆ ಬಗೆಹರಿಸಿದ ಮೆಸ್ಕಾಂ ಸಿಬ್ಬಂದಿ!

Udupi News

ಉಡುಪಿ: ಮೆಸ್ಕಾಂ ಸಿಬ್ಬಂದಿಯೊಬ್ಬರು ಹೊಳೆಯಲ್ಲಿ ಈಜುತ್ತಾ ಹೋಗಿ, ವಿದ್ಯುತ್ ಸಮಸ್ಯೆ ಬಗೆಹರಿಸಿರುವ ಘಟನೆ ಉಡುಪಿ ಜಿಲ್ಲೆಯ (Udupi News) ಹೆಬ್ರಿ ತಾಲೂಕಿನ ಶಿವಪುರ ಮೂಡ್ಸಾಲಿ ಗ್ರಾಮದಲ್ಲಿ ನಡೆದಿದೆ. ಮೆಸ್ಕಾಂ ಸಿಬ್ಬಂದಿಯ ಈ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಶಿವಪುರ ಮೂಡ್ಸಾಲಿ ಗ್ರಾಮದಲ್ಲಿ ವಿದ್ಯುತ್‌ ಸಮಸ್ಯೆ ಆಗಿರುವ ಬಗ್ಗೆ ಸ್ಥಳೀಯರು ಕರೆ ಮಾಡಿ ದೂರು ನೀಡಿದ್ದರು. ಕರೆ ಸ್ವೀಕರಿಸಿದ್ದ ಹೆಬ್ರಿ ಶಾಖೆಯ ಮೆಸ್ಕಾಂ ಸಿಬ್ಬಂದಿ ಪ್ರಮೋದ್ ಸಮಸ್ಯೆ ತಿಳಿಯುತ್ತಿದ್ದಂತೆ, ತಕ್ಷಣವೇ ಸ್ಥಳಕ್ಕೆ ತೆರಳಿದ್ದರು. ವಿದ್ಯುತ್‌ ಕಂಬದ ತೆರಳಲು ಹೊಳೆ ದಾಟಿ ಹೋಗಬೇಕಿತ್ತು. ಹೀಗಾಗಿ ಸಿಬ್ಬಂದಿ, ಹಗ್ಗ ಹಿಡಿದು ಹೊಳೆ ದಾಟಿ ದುರಸ್ತಿ ಕಾರ್ಯ ಮಾಡಿದ್ದಾರೆ. ಸಿಬ್ಬಂದಿ ಹೊಳೆ ದಾಟಿ ಬಂದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಮೋದ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಈ ಸುದ್ದಿಯನ್ನೂ ಓದಿ | Hassan News: ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 100ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ