Sunday, 11th May 2025

Fraud case: ಬ್ಯಾಚುಲರ್ ಎಂದು ಹೇಳಿ ಐವರನ್ನು ಮದುವೆಯಾದ ವಿವಾಹಿತ!

Fraud case

ಗ್ವಾಲಿಯರ್: ಮದುವೆಯಾಗಿದ್ದ ಸಾಫ್ಟ್ ವೇರ್ ಎಂಜಿನಿಯರ್ (Software Engineer ) ಒಬ್ಬ ಮತ್ತೆ ಐವರು ಮಹಿಳೆಯರನ್ನು ವಿವಾಹವಾಗಿದ್ದು (Fraud case), ಮೊದಲ ಪತ್ನಿ ಗ್ವಾಲಿಯರ್ (Gwalior) ಎಸ್ಪಿಗೆ ದೂರು ನೀಡಿದ್ದಾರೆ. ಈ ಎಲ್ಲ ಮದುವೆಯನ್ನು ಆತನ ಕುಟುಂಬವೇ ನೆರವೇರಿಸಿರುವುದಾಗಿ ತಿಳಿದುಬಂದಿದೆ. ಈ ಘಟನೆ ಮಧ್ಯಪ್ರದೇಶದಲ್ಲಿ (Madhyapradesh) ನಡೆದಿದೆ.

ಮಗ ಬ್ರಹ್ಮಚಾರಿ ಎಂದು ಬಿಂಬಿಸಿ ತನ್ನ ಪತಿಗೆ ಆತನ ಕುಟುಂಬದವರು ಮತ್ತೆ ಐದು ಮದುವೆ ಮಾಡಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಆಕೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಇದುವರೆಗೆ ಆತನನ್ನು ಬಂಧಿಸಲಾಗಿಲ್ಲ ಎನ್ನಲಾಗಿದೆ.

ಐದು ಬೇರೆ ಮದುವೆಯಾಗಿರುವ ತನ್ನ ಪತಿ ದೇಶದಿಂದ ಪಲಾಯನ ಮಾಡಲು ಯೋಜಿಸುತ್ತಿದ್ದಾನೆ. ಆತನ ಪಾಸ್‌ಪೋರ್ಟ್ ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳುವಂತೆ ಮಹಿಳೆ ಎಸ್ಪಿಗೆ ಮನವಿ ಮಾಡಿದ್ದಾರೆ. ಮಹಿಳಾ ಅಪರಾಧ ವಿಭಾಗದ ಡಿಎಸ್ಪಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಮಮತಾ ಜಮ್ರಾ ಅವರೊಂದಿಗೆ 2018ರ ಮೇ 13ರಂದು ಸಿಂಗ್ ಶೇಖರ್ ವಿವಾಹವಾಗಿದ್ದ. ಕೆಲಸದ ಕಾರಣ ಹೇಳಿ ಆಕೆಯನ್ನು ಬಿಟ್ಟು ಹೋದ ಆತ ಕೆಲವು ದಿನಗಳ ಕಾಲ ನಾಪತ್ತೆಯಾಗಿದ್ದಾನೆ. ಇದರ ಕಾರಣ ಹುಡುಕುತ್ತಾ ಹೋದ ಆಕೆಗೆ ಹಲವಾರು ಮಹಿಳೆಯರೊಂದಿಗೆ ಆತ ಸಂಬಂಧ ಹೊಂದಿರುವುದಾಗಿ ತಿಳಿದು ಬಂದಿದೆ.

ವಿದ್ಯಾವಂತ, ಬ್ರಹ್ಮಚಾರಿ ಎಂದು ನಂಬಿಸಿ ಆತನಿಗೆ ಕುಟುಂಬದವರೇ ಹಲವು ಮದುವೆ ಮಾಡಿಸಿರುವುದು ತಿಳಿದು ಮಮತಾ ಅವರು ಪೋಲೀಸರ ಮೊರೆ ಹೋಗಿದ್ದಾರೆ.

Crime News: ನಾಲ್ಕನೇ ಬಾರಿಯೂ ಹೆಣ್ಣು ಮಗುವೆಂದು ನೆಲಕ್ಕೆ ಬಡಿದು ಕೊಂದ ಪಾಪಿ ತಂದೆ

ಮಮತಾ ಅವರು ಸಿಂಗ್ ವಿರುದ್ಧ 2022ರಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ದಾಖಲಿಸಿದ್ದು, ಅದು ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ವಾರಂಟ್ ಜಾರಿಯಾಗಿ ಎರಡು ವರ್ಷ ಕಳೆದರೂ ಆತನನ್ನು ಪೊಲೀಸರು ಬಂಧಿಸಿಲ್ಲ.