Sunday, 11th May 2025

ಪತಿಯ ಕಿರುಕಳ ತಾಳಲಾರದೆ ಗೃಹಿಣಿ ನೇಣಿಗೆ ಶರಣು

ಚಿಕ್ಕಬಳ್ಳಾಪುರ: ಪತಿಯ ಕಿರುಕಳ ತಾಳಲಾರದೆ  ಗೃಹಿಣಿ ಮನೆಯಲ್ಲಿ ನೇಣುನೇಣಿಗೆ ಶರಣಾಗಿರುವ ಘಟನೆ ನಗರದ ಹೆಚ್.ಎಸ್.ಗಾರ್ಡನ್ ಬಡಾವಣೆಯಲ್ಲಿ  ಗುರುವಾರ ನಡೆದಿದೆ .

ಶೋಭಾ (48) ಮೃತ ದುರ್ದೈವಿ ಎಂದು ಗುರ್ತಿಸಲಾಗಿದೆ.

ಶೋಭಾಳ ಪತಿ ಶ್ರೀನಿವಾಸ್ ಆಲಿಯಾಸ್ ಸೀನಪ್ಪ ತರಕಾರಿ ವ್ಯಾಪಾರ ಮಾಡುತ್ತಿದ್ದು ಕುಡಿತದ ಚಟಕ್ಕೆ ಬಿದ್ದಿದ್ದ ಎನ್ನಲಾಗಿದೆ .ಕುಡಿದು ಬಂದು ಯಾವಾಗಲೂ  ಪತ್ನಿಯನ್ನು ತಳಿಸುತ್ತಿದ್ದನೆಂತೆ .ಇದರಿಂದ ಬೇಸತ್ತು ಮನ ನೊಂದ ಶೋಭಾ ಇಂದು ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.

ಮೃತ ಶೋಭಾ ಅಮೃತಾ,ಅನಿತಾ ಮತ್ತು ಮನೋಜ್ ಎಂಬ ಮೂವರು ಮಕ್ಕಳನ್ನು ಅಗಲಿದ್ದಾರೆ.

ಘಟನೆಯ ನಂತರ ಪುತ್ರಿ ಅಮೃತಾ ಚಿಕ್ಕಬಳ್ಳಾಪುರ ನಗರ ಪೋಲಿಸ್ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕಾಗಮಿಸಿದ ನಗರ ಠಾಣಾ ಪಿಎಸ್ಐ ಹೆಚ್.ನಂಜುಂಡಯ್ಯ ಸ್ಥಳ ಮಹಜರು ನಡೆಸಿ,ಮೃತಳ ಶವವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದು, ಪತಿ ಸೀನಪ್ಪನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. 

ಘಟನಾ ಸ್ಥಳದಲ್ಲಿ ಮೃತಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು  .