Sunday, 11th May 2025

Ganeshotsava: ಗಣೇಶೋತ್ಸವ ಸಮಾಜದಲ್ಲಿ ಶಾಂತಿ, ನೆಮ್ಮದಿ, ಭಾವೈಕ್ಯತೆಯ ಪ್ರತೀಕವಾಗಲಿ-ಡಾ.ಹನುಮಂತನಾಥ ಸ್ವಾಮೀಜಿ

ಕೊರಟಗೆರೆ: ಜಾತಿ ಧರ್ಮಗಳನ್ನು ಒಟ್ಟುಗೊಡಿಸಿ ಭಾವೈಕ್ಯತೆಯೋಂದಿಗೆ ಪರಸ್ಪರ ಸೌಹಾರ್ದತೆ ಬೆಳೆಸುವ ಗಣೇಶೋತ್ಸವ ಸಮಾಜದಲ್ಲಿ ಶಾಂತಿ ನಮ್ಮೆದಿಯೊಂದಿಗೆ ನಾಡಿನಲ್ಲಿ ಉತ್ತಮ ಮಳೆ ಬೆಳೆಯೊಂದಿಗೆ ಸಂವೃದ್ದಿ ನೆಲೆಸುವಂತಾಗಲಿ ಎಂದು ಎಲೆರಾಂಪುರ ಕುಂಚಿಟಿರ ಮಹಾಸಂಸ್ಥಾನ ಮಠದ ಡಾ.ಶ್ರೀ ಹನುಮಂತನಾಥಸ್ವಾಮೀಜಿ ತಿಳಿಸಿದರು.

ಪಟ್ಟಣದ ಜನತೆಯ ಆರಾಧ್ಯ ದೈವ ಹಾಗೂ ಉದ್ಬವ ಮೂರ್ತಿ ಕಟ್ಟಗಣಪತಿ ದೇವಾಲಯದ ಸಮುದಾಯ ಭವನ ದಲ್ಲಿ ಶ್ರೀ ಕಟ್ಟೆ ಗಣಪತಿ ದೇವಾಲಯ ಅಭಿವೃದ್ದಿ ಟ್ರಸ್ಟ್, ಶ್ರೀ ಕಟ್ಟೆಗಣಪತಿ ಯುವಕ ಮಂಡಲಿ ಹಾಗೂ ಮಹಿಳಾ ಮಂಡಲಿ ಸಹಯೋಗದಲ್ಲಿ 16ನೇ ವರ್ಷದ ಗಣಪತಿ ಮಹೋತ್ಸವ ಪ್ರತಿಷ್ಠಾಪನಾ ವೇದಿಕೆಯಲ್ಲಿ ಲೋಕ ಕಲ್ಯಾಣಾರ್ಥ ಶ್ರೀ ಮಹಾಗಣಪತಿ ಮೋದಕ ಹೋಮ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಕಟ್ಟೆಗಣಪತಿ ದೇವಾಲಯದ ಸಮಿತಿಗಳು ಪ್ರತಿವರ್ಷ ನಾಡಿಗೆ ಒಳಿತಿಗಾಗಿ ನೇರವೇರಿಸುತ್ತಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ಲಾಘನೀಯವಾಗಿದ್ದು ಮುಂದಿನ ದಿನಗಳಲ್ಲೂ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಿನ ರೀತಿ ಯಲ್ಲಿ ಆಯೋಜನೆ ಮಾಡಲಿ ಎಂದ ಶ್ರೀಗಳು.

ನಾಡಿನಲ್ಲಿ ಎಲ್ಲಾ ಜಾತಿ, ಧರ್ಮದವರು ಒಟ್ಟುಗೊಡಿ ಆಚರಿಸುವ ಭಾವೈಕ್ಯತೆ ಬೆಸೆಯುವ ಧಾರ್ಮಿಕ ಕಾರ್ಯ ಕ್ರಮಗಳಾಗಿದ್ದು, ನಾವೆಲ್ಲಾ ವಸುದೈವ ಕುಟುಂಬ ಎನ್ನವ ರೀತಿ ಬಾಳುತ್ತಿರುವ ಭಾರತ ದೇಶದಲ್ಲಿ ಮಾದರಿಯಾಗದೆ ಇತ್ತೀಚಿನ ದಿನಗಳಲ್ಲಿ ಗಣೇಶೋತ್ಸವ ದ್ವೇಷ, ಅಸೂಯೆ, ಘರ್ಷಣೆಗಳಿಗೆ ಕಾರಣವಾಗಿ ಪೊಲೀಸರ ಸರ್ಪಕಾವಲಿನಲ್ಲಿ ಹಾಗೂ ಸರ್ಕಾರದಿಂದ ಆದೇಶ ಪಡೆದು ಭಕ್ತರಿಗೆ ಪ್ರಸಾದ ವಿರತಣೆ ಮಾಡುವ ಪರಿಸ್ಥಿತಿ ನಿರ್ಮಾಣ ವಾಗುತ್ತಿರುವುದು ವಿಶಾದನೀಯ ಎಂದರು.

ಗಣೇಶೋತ್ಸವ ಕಾರ್ಯಕ್ರಮದಲ್ಲಿ ವೇ.ಬ್ರ. ಶ್ರೀ, ದತ್ತಾತ್ರಿ ದೀಕ್ಷಿತ್, ರಾಜೇಶ್ ದೀಕ್ಷಿತ್, ಶಿವನಂದನ್ ದೀಕ್ಷಿತ್, ಯದು ನಂದನ ದೀಕ್ಷಿತ್, ರಘುನಂದನ್ ದೀಕ್ಷಿತ್ ಮತ್ತು ಚಂದ್ರಶೇಖರ್ ಶರ್ಮಾ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥ ಶ್ರೀ ಮಹಾಗಣಪತಿ ಮೋದಕ ಹೋಮ ನೆರವೇರಿಸಿದರೆ ದೇವಾಲಯ ಅಭಿವೃಧ್ದಿ ಮಂಡಲಿ ಹಾಗೂ ಯುವಕ ಮಂಡಲಿ, ಮಹಿಳಾ ಮಂಡಲಿ ಸೇರಿದಂತೆ ಭಕ್ತಾಧಿಗಳ ಸಹಕಾರದಿಂದ ಅನ್ನಸಂತರ್ಪಣಾ ಕಾರ್ಯಕ್ರಮ ನಡೆಸಿ ದರು.

ಕಾರ್ಯಕ್ರಮದಲ್ಲಿ ಡಾ.ಆತ್ಮರಾಮ್, ಡಾ.ಶುಭಾ, ನಿವೃತ್ತ ಪ್ರಾಚಾರ್ಯ ಕೆ.ಪಿ.ರಾಜಣ್ಣ, ಮಂಜುಳಾ ಮಯೂರ ಗೋವಿಂದರಾಜು, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಪುರಷೋತ್ತಮ್ , ಉಪಾಧ್ಯಕ್ಷ ನಾಗರಾಜು, ಹರೀಶ್, ದೇವಾಲಯದ ಅಭಿವೃಧ್ದಿ ಸಮಿತಿ ನಿರ್ದೇಶಕ ಎನ್.ಪದ್ಮನಾಭ್, ಯುವಕ ಸಂಘದ ಅಧ್ಯಕ್ಷ ಬೆನಕಾ ವೆಂಕಟೇಶ್, ಮಹಿಳಾ ಸಂಘದ ಅಧ್ಯಕ್ಷ ಗೀರಿಜಮ್ಮ, ಯುವಕ ಮಂಡಲಿಯ ನಿರ್ದೆಶಕರಾದ ಕೆ.ಬಿ.ಲೋಕೇಶ್, ವಿಜಯ್‌ಕುಮಾರ್, ಸಂಜಯ್, ಕೆ.ಪಿ.ಅಭಿಲಾಷ್, ಕೆ.ಪಿ.ಯಶಸ್ಸ್, ಬೆಸ್ಕಾಂ ನಟರಾಜು, ರಜಿಂತ್‌ಕುಮಾರ್, ಗುರುದತ್, ಸಿದ್ದೇಶ್ ಸಚಿನ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ಇದನ್ನೂ ಓದಿ: MLA G B JyotiGanesh: ಗಣೇಶ ಪ್ರತಿಷ್ಠಾಪನೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ

Leave a Reply

Your email address will not be published. Required fields are marked *