Sunday, 11th May 2025

Viral Video: ಹಿಂದೂ ಧರ್ಮಕ್ಕಾಗಿ ಮನೆ, ಪೋಷಕರು, ದೇಶವನ್ನೇ ತೊರೆದಿದ್ದಾಳೆ ಪಾಕಿಸ್ತಾನದ ಈ ಯುವತಿ!

Viral Video

ಮನೆ, ಭೂಮಿ, ಪೋಷಕರು ಮಾತ್ರವಲ್ಲ ದೇಶವನ್ನೇ ತೊರೆದರೂ ಈ ಯುವತಿ ಹಿಂದೂ ಧರ್ಮವನ್ನು (hindu dharma) ಮಾತ್ರ ತೊರೆಯಲಿಲ್ಲ. ಯುವತಿಯ ಈ ನಡೆ ಭಾರಿ ಪ್ರಶಂಸೆಗೆ ಪಾತ್ರವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿರುವ ಪಾಕಿಸ್ತಾನದ (pakistan) ಯುವತಿಯ ವಿಡಿಯೋ ನೋಡಿ ಸಾಕಷ್ಟು ಮಂದಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಶೆಹಜಾದ್‌ಪುರದ ನೈನಾ ಶರ್ಮಾ ಎಂಬ ಹಿಂದೂ ಯುವತಿ ತನ್ನ ಕುಟುಂಬ, ಮನೆ ಮತ್ತು ದೇಶವನ್ನು ತೊರೆದಿದ್ದಾಳೆ. ಆದರೆ ಹಿಂದೂ ಧರ್ಮದ ಮೇಲಿನ ಭಕ್ತಿಯನ್ನು ಬಿಟ್ಟಿಲ್ಲ. ಅದರ ಮೇಲೆ ದೃಢವಾದ ವಿಶ್ವಾಸವನ್ನು ಇಟ್ಟಿದ್ದಾಳೆ.

ಯುವತಿಯ ಕಥೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಥಳೀಯರು ಮಾತ್ರವಲ್ಲ ರಾಷ್ಟ್ರಾದ್ಯಂತ ಇದು ಸುದ್ದಿಯಾಗಿದ್ದು, ಸಾಕಷ್ಟು ಮಂದಿಯ ಗಮನ ಸೆಳೆದಿದೆ.

ಸಂದರ್ಶನವೊಂದರಲ್ಲಿ 22 ವರ್ಷದ ನೈನಾ ಶರ್ಮಾ, ಧಾರ್ಮಿಕ ಸ್ವಾತಂತ್ರ್ಯದ ಹುಡುಕಾಟದಲ್ಲಿ ತನ್ನ ಕುಟುಂಬ ಮತ್ತು ತಾಯ್ನಾಡಿಗೆ ವಿದಾಯ ಹೇಳಿರುವುದಾಗಿ ಹೇಳಿಕೊಂಡಿದ್ದಾಳೆ.

ನನಗೆ ಸನಾತನ ಧರ್ಮವು ನನ್ನ ಅಸ್ತಿತ್ವದ ಅವಿಭಾಜ್ಯ ಅಂಗವಾಗಿದೆ. ನಾನು ನನ್ನ ಕುಟುಂಬ, ಮನೆ ಮತ್ತು ಭೂಮಿಯನ್ನು ತೊರೆದಿದ್ದೇನೆ. ಆದರೆ ನನ್ನ ನಂಬಿಕೆಯನ್ನು ನಾನು ಎಂದಿಗೂ ತ್ಯಜಿಸಲು ಸಾಧ್ಯವಿಲ್ಲ ಎಂದು ನೈನಾ ತಿಳಿಸಿದ್ದಾಳೆ.

ಆಕೆಯ ನಿರ್ಧಾರಕ್ಕೆ ಆಕೆಯ ಕುಟುಂಬವು ಪ್ರತಿಕ್ರಿಯಿಸಿದ್ದು, ಅವಳ ಆಯ್ಕೆಯನ್ನು ಗೌರವಿಸುವುದಾಗಿ ಹೇಳಿದ್ದಾರೆ. ಅವಳು ನಮ್ಮೊಂದಿಗೆ ಇದ್ದರೂ ಇಲ್ಲದೇ ಇದ್ದರೂ ನಾವು ಯಾವಾಗಲೂ ಅವಳ ಸಂತೋಷಕ್ಕಾಗಿ ಹಾರೈಸುತ್ತೇವೆ ಎಂದು ಅವಳ ತಂದೆ ತಿಳಿಸಿದ್ದಾರೆ.

ಸದ್ಯ ಭಾರತದ ಧಾರ್ಮಿಕ ಆಶ್ರಮವೊಂದರಲ್ಲಿ ನೆಲೆಸಿರುವ ನೈನಾ ಆಧ್ಯಾತ್ಮಿಕ ಅಧ್ಯಯನ ಮತ್ತು ಸಮುದಾಯ ಸೇವೆಯಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದಾಳೆ. ತನ್ನ ನಂಬಿಕೆಯ ಆಳವನ್ನು ಅರ್ಥಮಾಡಿಕೊಳ್ಳಲು ಮತ್ತು ಸಮಾಜದೊಳಗೆ ಅದರ ಬಗ್ಗೆ ಜಾಗೃತಿ ಮೂಡಿಸುವುದಾಗಿ ಹೇಳಿಕೊಂಡಿದ್ದಾಳೆ.

Viral Video: ಬೆಂಗಳೂರಿನಲ್ಲಿ ನೆಕ್ಸ್ಟ್‌ ಲೆವೆಲ್‌ ತಲುಪಿದ ರೋಡ್‌ ರೇಜ್‌, ಮಹಿಳೆಗೆ ಅತ್ಯಾಚಾರ-ಕೊಲೆ ಬೆದರಿಕೆ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ಗೆ ಸಾಕಷ್ಟು ಮಂದಿ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ. ಕಾಮೆಂಟ್ ನಲ್ಲಿ ಕೆಲವರು ನಂಬಿಕೆಗಳನ್ನು ಎತ್ತಿಹಿಡಿಯಲು ಒಬ್ಬರು ಎಷ್ಟು ದೂರ ಹೋಗಬಹುದು ಎಂಬುದನ್ನು ಯುವತಿಯ ಈ ಕಥೆ ಎತ್ತಿ ತೋರಿಸುತ್ತದೆ ಎಂದು ಹೇಳಿದ್ದು, ಸಾಕಷ್ಟು ಮಂದಿ ನೈನಾ ಅವರ ಧೈರ್ಯ ಮತ್ತು ಸಂಕಲ್ಪಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *