Wednesday, 14th May 2025

Viral News: ಕೀರ್ತನೆಗೆ ಕುಣಿಯುವುದು ಹೇಗೆ? ತಿಳಿಯಲು ಈ ವೈರಲ್‌ ವೀಡಿಯೊ ನೋಡಿ

Viral News

ನವದೆಹಲಿ: ಇತ್ತೀಚಿನ ದಿನಗಳಲ್ಲಿ ರೀಲ್ಸ್‌ ಹಾವಳಿ ಎಷ್ಟ ಮಟ್ಟಿಗೆ ಆವರಿಸಿದೆ ಎಂದರೆ ಪ್ರತಿಯೊಬ್ಬರೂ ಗಾಯಕ, ಕಲಾವಿದ, ಡ್ಯಾನ್ಸರ್‌ ಆಗಿ ಬದಲಾಗಿದ್ದಾರೆ. ಯಾವುದಾದರೂ ಹಾಡು ಹಿಟ್‌ ಆದರೆ ಸಾಕು ಅದಕ್ಕೆ ಹೆಜ್ಜೆ ಹಾಕಲು ಆರಂಭಿಸುತ್ತಾರೆ. ಪ್ರತಿಭೆ ಇಲ್ಲದಿದ್ದರೂ ಪರವಾಗಿಲ್ಲ ಹೆಚ್ಚೆಚ್ಚು ಲೈಕ್ಸ್‌ ಪಡೆದುಕೊಳ್ಳಬೇಕು ಎನ್ನುವ ಧಾವಂತದಲ್ಲಿ ಮೈಮೇಲೆ ಬಂದವರಂತೆ ವರ್ತಿಸುವವರಿಗೇನೂ ಕಡಿಮೆ ಇಲ್ಲ. ಕೆಲವರಂತೂ ವಿಚಿತ್ರ ಧ್ವನಿಯಲ್ಲಿ ಹಾಡುವುದೂ ಕಲೆ ಎನ್ನುವಂತೆಯೂ ವರ್ತಿಸುತ್ತಾರೆ. ಹಲವು ಬಾರಿ ಟ್ರೋಲ್‌ ಮೂಲಕವೇ ಕೆಲವರ ವೀಡಿಯೊ ವೈರಲ್‌ ಆಗುತ್ತದೆ. ಇಲ್ಲಿ ನಾವು ಹೇಳ ಹೊರಟಿರುವುದು ಕೂಡ ಅಂತಹದ್ದೊಂದು ವೀಡಿಯೊದ ಬಗ್ಗೆ. ಮಹಿಳೆಯೊಬ್ಬರು ವಿವಿಧ ಭಂಗಿಗಳಲ್ಲಿ ಡ್ಯಾನ್ಸ್‌ ಮಾಡಿರುವ ವೀಡಿಯೊ ಇದೀಗ ವೈರಲ್‌ ಆಗಿದೆ (Viral News).

ಇನ್‌ಸ್ಟಾಗ್ರಾಮ್‌ನ yaaraanchal ಎನ್ನುವ ಪೇಜ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಕೀರ್ತನೆ/ಸಂಗೀತಕ್ಕೆ ಕುಣಿಯುವ ಡ್ಯಾನ್ಸರ್‌ ಎನ್ನುವ ಕ್ಯಾಪ್ಶನ್‌ ನೀಡಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಕೀರ್ತನೆ ಮತ್ತು ಸಂಗೀತಕ್ಕೆ ಯಾರು ಹೇಗೆ ಕುಣಿಯುತ್ತಾರೆ ಎನ್ನುವುದನ್ನು ತೋರಿಸಿದ್ದಾರೆ. ಪ್ರತಿ ಸ್ಟೆಪ್‌ಗೆ ಅನುಗುಣವಾಗಿ ನೃತ್ಯಗಾರ್ತಿಯರ ಹೆಸರನ್ನು ವೀಡಿಯೊದ ಮುಂದೆ ನಮೂದಿಸಲಾಗಿದೆ.

ʼಚಟ್ಕಿ ಮೇಕರ್‌ʼ ನೃತ್ಯದೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಎರಡನೆಯ ವಿಧ ʼತುಮ್ಕೇಶ್ವರಿʼ. ನಂತರ ʼಬೆಂಡರ್ʼ ವಿಧ ಕಾಣ ಸಿಕ್ಕರೆ ನಾಲ್ಕನೆಯ ವಿಧ ʼಬೋಲ್ಡ್ ಬಹುʼ ಕಂಡು ಬರುತ್ತದೆ. ʼಒಜಿ ಬೆಬ್ಲೇಡ್‌ʼನೊಂದಿಗೆ ನೃತ್ಯ ಕೊನೆಯಾಗುತ್ತದೆ. ನಿಮ್ಮ ನೆಚ್ಚಿನ ಸ್ಟೆಪ್‌ ಯಾವುದು ಎಂದು ಕ್ಯಾಪ್ಶನ್‌ನಲ್ಲಿ ಕೇಳಲಾಗಿದೆ.

ನೆಟ್ಟಿಗರು ಏನಂದ್ರು?

ಸದ್ಯ ಈ ವೀಡಿಯೊವನ್ನು 16 ಲಕ್ಷಕ್ಕಿಂತಲೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ನೂರಾರು ಮಂದಿ ಪ್ರತಿಕಿಯಿಸಿದ್ದಾರೆ. ʼʼಈ ವೀಡಿಯೊ ನೋಡುತ್ತಿದ್ದ ನಾನು ಮೆಟ್ರೋದಲ್ಲಿ ಜೋರಾಗಿ ನಕ್ಕುಬಿಟ್ಟೆʼʼ ಎಂದು ಒಬ್ಬರು ತಮ್ಮ ಅನುಭವವನ್ನು ವ್ಯಕ್ತಪಡಿಸಿದ್ದಾರೆ. ʼʼವೀಡಿಯೊ ನೋಡಿ ನಾನು ಮತ್ತು ಅಮ್ಮ ಇಬ್ಬರೂ ಬಿದ್ದು ಬಿದ್ದು ನಕ್ಕೆವುʼʼ ಎಂದು ಇನ್ನೊಬ್ಬರು ತಿಳಿಸಿದ್ದಾರೆ. ಇದರ ಜೊತೆಗೆ ಹಲವು ತಮ್ಮ ನೆಚ್ಚಿನ ಸ್ಟೆಪ್‌ ಹೆಸರಿಸಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೊ ಹಲವರ ಗಮನ ಸೆಳೆದಿರುವುದು ಸುಳ್ಳಲ್ಲ.

ಈ ಸುದ್ದಿಯನ್ನೂ ಓದಿ: Viral Video: ಸಹೋದರಿಯ ಮದುವೆಯಲ್ಲಿ ʼಜಿಂಗಾತ್ʼ, ʼಲಂಡನ್ ತುಮಕ್ಡಾʼ ಹಾಡಿಗೆ ಡಾನ್ಸ್‌ ಮಾಡಿದ ಸಾಯಿ ಪಲ್ಲವಿ

Leave a Reply

Your email address will not be published. Required fields are marked *