Saturday, 10th May 2025

Boy Suicide: ಉತ್ಸವಕ್ಕೆ ಹೋಗಬೇಡ ಎಂದಿದ್ದಕ್ಕೆ ಬಾಲಕ ಆತ್ಮಹತ್ಯೆ

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಹೊನ್ನಯ್ಯನಪಾಳ್ಯದಲ್ಲಿ ಪೋಷಕರು ಗಣಪತಿ ಉತ್ಸವಕ್ಕೆ ಹೋಗಬೇಡ ಎಂದು ಹೇಳಿದಕ್ಕೆ ಬೇಸರಗೊಂಡು 12 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಬಾಲಕನನ್ನು ಪುಣ್ಯತಿತ್(12) ಎಂದು ಗುರುತಿಸಲಾಗಿದೆ. ಈತ ಹುಳಿಯಾರಿನ ಕೆಪಿಎಸ್ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಪುಣ್ಯತೀತ್ ಗಣಪತಿ ಉತ್ಸವಕ್ಕೆ ಹೋಗುವುದಾಗಿ ತಂದೆ-ತಾಯಿಗಳಿಗೆ ಹೇಳಿದ್ದಾನೆ. ಇದಕ್ಕೆ ಪೋಷಕರು ಒಪ್ಪಿಲ್ಲ. ಆದರೂ ಗಣಪತಿ ಉತ್ಸವಕ್ಕೆ ಹೋಗುವುದಾಗಿ ಪಟ್ಟು ಹಿಡಿದಿದ್ದಾನೆ. ಇದಕ್ಕೆ ಪೋಷಕರು ಬೇಡವೆಂದು ಮನೆಯಲ್ಲೇ ಇರಬೇಕು ಎಂದು ತಾಕೀತು ಮಾಡಿದರೆಂದು ಹೇಳಲಾಗಿದೆ.

ಇದರಿಂದ ಬೇಸತ್ತ ಬಾಲಕ ಮನೆಯ ಕಬ್ಬಿಣದ ತೀರಿಗೆ ಬಳ್ಳಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ ಎಂದು ಹೇಳಲಾಗಿದೆ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚಿಕಾಗೋ ಉಪನಗರದಲ್ಲಿ ಗುಂಡಿನ ದಾಳಿ: ಆರು ಮಂದಿ ಸಾವು

Leave a Reply

Your email address will not be published. Required fields are marked *