Sunday, 11th May 2025

Tumkur News: ಸಿದ್ಧಗಂಗಾ ಹೆಲ್ತ್ ರನ್ 10 ಕೆ. ಮ್ಯಾರಥಾನ್ ನೋಂದಣಿ ಆರಂಭ 

ತುಮಕೂರು: ಸಿದ್ಧಗಂಗಾ ಆಸ್ಪತ್ರೆ ವತಿಯಿಂದ ಸೆ.29ರಂದು ನಡೆಯಲಿರುವ  ಸಿದ್ಧಗಂಗಾ ಹೆಲ್ತ್ ರನ್ 10 ಕೆ. ಮ್ಯಾರಥಾನ್ ನೋಂದಣಿ ಆರಂಭವಾಗಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೃದ್ರೋಗದ ಕುರಿತು ಅರಿವು  ಮೂಡಿಸಲು ನಮ್ಮ ಜತೆ ಹೆಜ್ಜೆ ಹಾಕಬೇಕು ಎಂದು ಸಿದ್ಧಗಂಗಾ ಮೆಡಿಕಲ್ ಕಾಲೇಜು ಪ್ರಾಚಾರ್ಯ ರಾದ ಡಾ.ಶಾಲಿನಿ ತಿಳಿಸಿದರು.

ಸಿದ್ಧಗಂಗಾ ಆಸ್ಪತ್ರೆಯಲ್ಲಿ  ಮ್ಯಾರಥಾನ್  ನೊಂದಣಿಗೆ ಚಾಲನೆ ನೀಡಿ ಮಾತನಾಡಿ ಅಂದು ಬೆಳಗ್ಗೆ 6 ಗಂಟೆಗೆ ಆಸ್ಪತ್ರೆ ಆವರಣದಲ್ಲಿ ವಿವಿಧ ಗಣ್ಯರು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಸಿದ್ಧಗಂಗಾ ಮಠಾಧ್ಯಕ್ಷ ರಾದ ಪರಮಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಯವರು ಚಾಲನೆ ನೀಡಲಿದ್ದಾರೆ ಎಂದು‌ ಮಾಹಿತಿ ನೀಡಿದರು.

ಇದನ್ನೂ ಓದಿ: Tumkur News: ಸೆ.14ರಂದು ರಾಜ್ಯಗಳ ಅಸ್ಮಿತೆ ರಕ್ಷಣೆಗಾಗಿ ರಾಷ್ಟ್ರೀಯ ಅಭಿಯಾನಕ್ಕೆ ಚಾಲನೆ

ಸಿದ್ಧಗಂಗಾ ಸೂಪರ್ ಸ್ಪೆಷಾಲಿಟಿ ವಿಭಾಗದ ನಿರ್ದೇಶಕ‌ ಹಾಗೂ ಹೃದ್ರೋಗ ತಜ್ಞ ಡಾ.ಭಾನುಪ್ರಕಾಶ್ ಮಾತನಾಡಿ, ಸೆ.29 ಕ್ಕೆ ವಿಶ್ವ ಹೃದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು ಇದರ ಭಾಗವಾಗಿ ನಡೆಯಲಿರುವ ಮ್ಯಾರಥಾನ್  ಪುರುಷ-ಮಹಿಳೆಯರ ವಿಭಾಗದಲ್ಲಿ 10ಕಿ.ಮೀ ಹಾಗೂ 5 ಕಿ.ಮಿ. ಹಾಗೂ 50 ವರ್ಷ ಮೇಲ್ಪಟ್ಟ ವರಿಗೆ 10 ಕಿ.ಮೀ. ಮ್ಯಾರಥಾನ್ ನಡೆಯಲಿದ್ದು 2 ಕಿ.ಮೀ ಮಜಾ ರನ್ ಕೂಡ ಏರ್ಪಡಿಸಲಾಗಿದೆ ವಿವಿಧ ವಿಭಾಗದ ವಿಜೇತರಿಗೆ ಒಟ್ಟು 1.5 ಲಕ್ಷ(ಒಂದೂವರೆ ಲಕ್ಷ) ಮೌಲ್ಯದ ಬಹುಮಾನವಿರಲಿದೆ ಎಂದರು.

ಸಿದ್ಧಗಂಗಾ ವೈದ್ಯಕೀಯ ಕಾಲೇಜು ಮೇಲ್ವಿಚಾರಕ ಡಾ.ನಿರಂಜನಮೂರ್ತಿ ಮಾತನಾಡಿ 5 ಕಿ.ಮೀ ಮ್ಯಾರಥಾನ್ ಸಿದ್ಧಗಂಗಾ ಆಸ್ಪತ್ರೆಯಿಂದ ಆರಂಭವಾಗಿ‌ ಕೆಇಬಿ ರಸ್ತೆ ಮೂಲಕ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಅಂತ್ಯವಾಗಲಿದೆ, 10 ಕೆ ಮ್ಯಾರಥಾನ್ ಆಸ್ಪತ್ರೆಯಿಂದ ಹೊರಟು ಟೌನ್ ಹಾಲ್,ಕಾಲ್ ಟ್ಯಾಕ್ಸ್, ರಿಂಗ್ ರೋಡ್, ಟಿ.ಪಿ.ಕೈಲಾಸಂ ರಸ್ತೆ ಮೂಲಕ ಸಾಗಿ ಪುನಃ ಆಸ್ಪತ್ರೆಯಲ್ಲಿ ಕೊನೆಗೊಳ್ಳಲಿದೆ ಎಂದರು.

ಸಿಇಓ ಡಾ.ಸಂಜೀವಕುಮಾರ್ ಮಾತನಾಡಿ ಕಳೆದ 4 ವರ್ಷಗಳಿಂದ ನಡೆಯುತ್ತಿರುವ ಮ್ಯಾರಥಾನ್ ಗೆ ಎಲ್ಲಾ ತಯಾರಿ ಪೂರ್ಣಗೊಂಡಿದ್ದು, ರಾಜ್ಯ ಸೇರಿದಂತೆ ಹೊರ ರಾಜ್ಯಗಳ‌ ಸ್ಪರ್ಧಿಗಳೂ ಕೂಡ ಆಗಮಿಸಲಿದ್ದಾರೆ ನೋಂದಣಿಗಾಗಿ 7624981879 ಅಥವಾ 9035052784 ಕರೆಮಾಡಬಹುದು ಎಂದರು.

ಅಥ್ಲೆಟಿಕ್ ಅಸೋಸಿಯೇಷನ್ ತುಮಕೂರು ಕಾರ್ಯದರ್ಶಿ ಪ್ರಭಾಕರ್, ದೈಹಿಕ‌ ಶಿಕ್ಷಣದ ನಿರ್ದೇಶಕರುಗಳಾದ ಜಯಶಂಕರ್,ಯೋಗೀಶ್, ಗೋಲ್ಡ್ ಜಿಮ್ ಪ್ರತಾಪ್ ಮುಂತಾದವರಿದ್ದರು.

Leave a Reply

Your email address will not be published. Required fields are marked *