Tuesday, 13th May 2025

ಗೆಲುವಿನೊಂದಿಗೆ ಚೆನ್ನೈ ಅಭಿಯಾನ ಅಂತ್ಯ

ಅಬುಧಾಬಿ: ಚೆನ್ನೈ ಸೂಪರ್‌ ಕಿಂಗ್ಸ್ ಎದುರಿನ ಐಪಿಎಲ್ ಕೊನೆಯ ಪಂದ್ಯ ಸೋಲುವುದರೊಂದಿಗೆ, ಕಿಂಗ್ಸ್ ಎಲೆವೆನ್ ಪಂಜಾಬ್ ತಂಡದ ಪ್ಲೇಆಫ್ ಕನಸು ಬಹುತೇಕ ಕಮರಿದೆ.

ಆರಂಭಿಕ ಋತುರಾಜ್ ಗಾಯಕ್ವಾಡ್ ಅವರ ಅಜೇಯ ಅರ್ಧಶತಕ, ಚೆನ್ನೈ ತಂಡದ ಗೆಲುವನ್ನು ಸುಲಭವನ್ನಾಗಿಸಿತು. ಗಾಯಕ್ವಾಡ್ ಅವರ ಇನ್ನಿಂಗ್ಸ್‌ನಲ್ಲಿ ಆರು ಬೌಂಡರಿ ಮತ್ತು ಒಂದು ಸಿಕ್ಸರ್‌ ಒಳಗೊಂಡಿತ್ತು. ಫಾಫ್ ಡು ಪ್ಲೆಸಿಸ್ 48 ರ ಮೊತ್ತದಲ್ಲಿ ಕ್ರಿಸ್ ಜೋರ್ಡಾನ್’ಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಚೆನ್ನೈ ತಂಡ ಒಂಬತ್ತು ವಿಕೆಟ್ಗಳ ಜಯ ದಾಖಲಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ , ದೀಪಕ್ ಹೂಡಾ ಸ್ಪೋಟಕ ಅರ್ಧಶತಕದ ನೆರವಿನಿಂದ 20 ಓವರ್ ಗಳಲ್ಲಿ 6 ವಿಕಟ್ ನಷ್ಟಕ್ಕೆ 153 ರನ್ ಗಳಿಸಿತ್ತು.

ರುತುರಾಜ್ ಗಾಯಕ್ವಾಡ್ ಮತ್ತು ಫಾಫ್ ಡು ಪ್ಲೆಸಿಸ್, ಭರ್ಜರಿ ಬ್ಯಾಟಿಂಗ್ ಮೂಲಕ ಪಂಜಾಬ್ ಬೌಲರ್ ಗಳ ಬೆವರಿಳಿಸಿದರು. ಬೌಂಡರಿ, ಸಿಕ್ಸರ್ ಗಳ ಮೂಲಕ ಉತ್ತಮ ಜೊತೆಯಾಟ ನಡೆಸಿದ ಈ ಜೋಡಿ 9. 5 ಓವರ್ ಗಳಲ್ಲಿ 82 ರನ್ ಪೇರಿಸಿತು. ನಂತರ ಬಂದ ಅಂಬಟಿ ರಾಯುಡು ಕೂಡ ತಂಡಕ್ಕೆ ಭದ್ರ ಬುನಾದಿ ಒದಗಿಸಿಕೊಟ್ಟರು.

 

 

Leave a Reply

Your email address will not be published. Required fields are marked *