Wednesday, 14th May 2025

Terror attack: ಕಣಿವೆ ರಾಜ್ಯದಲ್ಲಿ ಗುಂಡಿನ ಚಕಮಕಿ; ಸೇನಾ ಬಲೆಗೆ ಬಿದ್ದ ನಾಲ್ವರು ಜೈಷ್‌ ಉಗ್ರರು

terror attack

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ(Jammu-Kashmir)ದಲ್ಲಿ ಮತ್ತೆ ಉಗ್ರರ ಉಪಟಳ(Terror attack) ಶುರುವಾಗಿದ್ದು, ಇಂದು ನಡೆದ ಸೇನಾ ಕಾರ್ಯಾಚರಣೆಯಲ್ಲಿ ಜೈಶ್-ಎ-ಮೊಹಮ್ಮದ್ (JEM) ಸಂಘಟನೆಯ ನಾಲ್ವರು ಉಗ್ರರನ್ನು ಬಲೆಗೆ ಬಿದ್ದಿದ್ದಾರೆ. ಉಧಂಪುರದ ಬಸಂತ್‌ಗಢ ಪ್ರದೇಶದಲ್ಲಿ ಬುಧವಾರ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಉಗ್ರರು ಸೇನೆ ಬೀಸಿದ ಬಲೆಗೆ ಬಿದ್ದಿದ್ದು, ಯೋಧರು ನಾಲ್ಕು ದಿಕ್ಕಿನಿಂದಲೂ ಅವರನ್ನು ಆವರಿಸಿದ್ದಾರೆ.

ಬಂಧಿತ ಉಗ್ರರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದ್ದು, ಉಗ್ರರು ಅಡಗಿರುವ ಬಗ್ಗೆ ಗುಪ್ತಚರ ಇಲಾಖೆ ನೀಡಿದ ಅಧಿಕೃತ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿತ್ತು. ಕಥುವಾ-ಬಸಂತಗಢ ಗಡಿಯಲ್ಲಿಸೇನೆ ಮತ್ತು ಪೊಲೀಸರು ಜಂಟೀ ಕಾರ್ಯಾಚರಣೆ ನಡೆಸಿ ನಾಲ್ವರು ಸೆರೆ ಹಿಡಿದಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ಇನ್ನು ಕಾರ್ಯಾಚರಣೆ ವೇಳೆ ಭಾರೀ ಗುಂಡಿನ ಚಕಮಕಿ ನಡೆದಿದೆ. ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ 2019 ರ ಪುಲ್ವಾಮಾ ಬಾಂಬ್ ದಾಳಿ ಸೇರಿದಂತೆ ಭಾರತದಲ್ಲಿ ಹಲವಾರು ಸ್ಫೋಟಕ ದಾಳಿಗಳಿಗೆ ಕಾರಣವಾಗಿದೆ.

ಕದನ ವಿರಾಮ ಉಲ್ಲಂಘಿಸಿ ಪಾಕ್‌ ಸೇನೆ ದಾಳಿ

ಜಮ್ಮು ಮತ್ತು ಕಾಶ್ಮೀರದ ಗಡಿಪ್ರದೇಶದಲ್ಲಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ(Ceasefire Violation) ನಡೆಸಿದ್ದು, ಘಟನೆಯಲ್ಲಿ ಬಿಎಸ್‌ಎಫ್‌ ಯೋಧನಿಗೆ ಗಂಭೀರ ಗಾಯಗಳಾಗಿವೆ. ಪಾಕ್‌ ಸೇನೆ ನಡೆಸಿದ ದಾಳಿಗೆ ಗಡಿ ಭದ್ರತಾ ಪಡೆ(BSF) ಸೂಕ್ತ ಪ್ರತ್ಯುತ್ತರ ನೀಡಿದೆ ಎಂದು ಅಧಿಕೃತ ಮೂಲವೊಂದು ತಿಳಿಸಿದೆ.

ಮುಂಜಾನೆ 2.35ರ ಸುಮಾರಿಗೆ, ಅಖ್ನೂರ್ ಪ್ರದೇಶದಲ್ಲಿ ಗಡಿಯಾಚೆಯಿಂದ ಅಪ್ರಚೋದಿತ ಗುಂಡಿನ ದಾಳಿಯ ಘಟನೆ ಸಂಭವಿಸಿದೆ ಮತ್ತು ಇದಕ್ಕೆ ಬಿಎಸ್ಎಫ್ ಸೂಕ್ತವಾಗಿ ಪ್ರತಿಕ್ರಿಯಿಸಿತು. ಪಾಕಿಸ್ತಾನದ ಗುಂಡಿನ ದಾಳಿಯಲ್ಲಿ ಓರ್ವ ಬಿಎಸ್‌ಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಗಡಿ ರಕ್ಷಣಾ ಪಡೆಯ ವಕ್ತಾರರು ತಿಳಿಸಿದ್ದಾರೆ. ಪಡೆಗಳು ಹೆಚ್ಚಿನ ಎಚ್ಚರಿಕೆಯಲ್ಲಿವೆ ಮತ್ತು ಅಂತರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯ ಉದ್ದಕ್ಕೂ ಕಟ್ಟುನಿಟ್ಟಾದ ಜಾಗರೂಕತೆಯನ್ನು ಇರಿಸುತ್ತಿವೆ ಎಂದು ಅವರು ಹೇಳಿದರು.

ಫೆಬ್ರವರಿ 25, 2021 ರಂದು ಭಾರತ ಮತ್ತು ಪಾಕಿಸ್ತಾನವು ಕದನ ವಿರಾಮ ಒಪ್ಪಂದವನ್ನು ನವೀಕರಿಸಿದಾಗಿನಿಂದ ಉಭಯ ದೇಶಗಳ ನಡುವಿನ ಕದನ ವಿರಾಮ ಉಲ್ಲಂಘನೆಯು ಬಹಳ ಅಪರೂಪವಾಗಿದೆ. ಕಳೆದ ವರ್ಷ, ರಾಮ್‌ಗಢ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ರೇಂಜರ್‌ಗಳ ಗುಂಡಿನ ದಾಳಿಯಲ್ಲಿ BSF ಯೋಧ ಹುತಾತ್ಮರಾಗಿದ್ದರು, ಇದು ಮೊದಲ ಜೀವಹಾನಿಯಾಗಿತ್ತು.

ಈ ಸುದ್ದಿಯನ್ನೂ ಓದಿ: ಜಮ್ಮು-ಕಾಶ್ಮೀರದ ಎರಡು ಮುಸ್ಲಿಂ ಸಂಘಟನೆಗಳ ಮೇಲೆ ಐದು ವರ್ಷ ನಿಷೇಧ

Leave a Reply

Your email address will not be published. Required fields are marked *