Sunday, 11th May 2025

Illegal Fishing: ಅಕ್ರಮವಾಗಿ ಮರಿ ಮೀನುಗಳ ಬೇಟೆ; ಸಾರ್ಡಿನ್‌ ಮೀನು ಸಂತತಿಗೆ ಸಂಚಕಾರ!

Illegal Fishing

ಕೋಯಿಕ್ಕೋಡ್‌: ಅಕ್ರಮ ಮೀನುಗಾರಿಕೆಯಿಂದ (Illegal Fishing) ಕೇರಳದ ಮೀನುಗಾರಿಕೆ ಉದ್ಯಮಕ್ಕೆ (Kerala fisheries industry) ಭಾರಿ ಆರ್ಥಿಕ ನಷ್ಟವನ್ನು ಉಂಟಾಗಿದೆ. ಕೋಟ್ಯಂತರ ಸಾರ್ಡೀನ್‌ ಮೀನುಗಳು (sardines fish) ಜೊತೆಗೆ ಮರಿ ಸಾರ್ಡೀನ್ (ಕುಂಜನ್ ಮತಿ) ನಾಶವಾಗುತ್ತಿರುವುದರಿಂದ ಪ್ರತಿನಿತ್ಯ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ.

ಕೋಯಿಕ್ಕೋಡ್‌ನ ಮೀನುಗಾರಿಕಾ ಬಂದರುಗಳಲ್ಲಿ ಮರಿ ಸಾರ್ಡೀನ್‌ಗಳ ಸಂರಕ್ಷಣೆ ನಿಯಮಾವಳಿಗಳ ಉಲ್ಲಂಘನೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮರಿ ಸಾರ್ಡೀನ್‌ಗಳ 100 ಲೋಡ್‌ಗಳನ್ನು ಚೋಂಬಳ ಬಂದರಿನಿಂದ ಮಂಗಳೂರು ಮತ್ತು ಇತರ ಸ್ಥಳಗಳ ಫಿಶ್ ಮಿಲ್‌ಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

Illegal Fishing

ಎಷ್ಟಿದೆ ಮಾರುಕಟ್ಟೆ ಬೆಲೆ?

ಪ್ರಸ್ತುತ ಈ ಸಾರ್ಡೀನ್‌ಗಳ ಬಾಕ್ಸ್‌ನ ಬೆಲೆ 1,000ರಿಂದ 1,400 ರೂ.ಗಳ ನಡುವೆ ಇದೆ. ಆದರೆ ಪೂರ್ಣ ಬೆಳವಣಿಗೆಗೆ ಅವಕಾಶ ನೀಡಿದರೆ ಅದೇ ಬಾಕ್ಸ್‌ಗೆ 10,000 ರೂ.ವರೆಗೆ ಸಿಗುತ್ತಿತ್ತು. ಸಾರ್ಡೀನ್‌ಗಳ ಜೊತೆಗೆ ಮರಿ ಮ್ಯಾಕೆರೆಲ್‌ಗಳನ್ನು ಸಹ ಹೆಚ್ಚಿನ ಪ್ರಮಾಣದಲ್ಲಿ ಹಿಡಿಯಲಾಗುತ್ತಿದೆ. ಭಾರತೀಯ ಮೀನುಗಾರಿಕೆ ಕಾಯಿದೆಯ ಪ್ರಕಾರ ಮೀನುಗಳು ನಿರ್ದಿಷ್ಟ ಗಾತ್ರವನ್ನು ತಲುಪಿದ ಅನಂತರವೇ ಅವುಗಳನ್ನು ಹಿಡಿಯಲು ಅನುಮತಿ ಇದೆ. ಸಾರ್ಡೀನ್‌ಗೆ 10 ಸೆಂಟಿ ಮೀಟರ್ ಮತ್ತು ಮ್ಯಾಕೆರೆಲ್‌ಗೆ 14 ಸೆಂಟಿ ಮೀಟರ್ ಆಗಿದೆ.

ಅನೇಕ ಮೀನುಗಾರರು ಈ ಮೀನುಗಳ ಗಾತ್ರವನ್ನು ತಲುಪುವ ಮೊದಲು ಹಿಡಿಯುತ್ತಿದ್ದು, ಮೀನುಗಾರಿಕೆ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಈ ಅಭ್ಯಾಸವು ಈ ಮೀನು ಪ್ರಭೇದಗಳ ಭವಿಷ್ಯದ ಲಭ್ಯತೆಗೆ ಅಪಾಯವನ್ನುಂಟು ಮಾಡುತ್ತದೆ. ಯಾಕೆಂದರೆ ಮೀನುಗಾರರು ಮತ್ತು ದೋಣಿ ಮಾಲೀಕರ ಮಿತಿಮೀರಿದ ಮೀನುಗಾರಿಕೆಯಿಂದ ದಾಸ್ತಾನುಗಳು ಕ್ಷೀಣಿಸಲು ಕಾರಣವಾಗುತ್ತದೆ. ದೀರ್ಘಾವಧಿಯ ಪರಿಣಾಮಗಳನ್ನು ತಿಳಿದಿದ್ದರೂ ಸಹ ಕೆಲವರು ಸ್ಪರ್ಧೆ ಮತ್ತು ತಕ್ಷಣದ ಆರ್ಥಿಕ ಲಾಭದಿಂದ ಈ ಕಡಿಮೆ ಗಾತ್ರದ ಮೀನುಗಳನ್ನು ಹಿಡಿದು ಮಾರಾಟ ಮಾಡುತ್ತಾರೆ.

Illegal Fishing

ತಪಾಸಣೆ ಕ್ರಮ ಸರಿಯಾಗಿಲ್ಲ

ಮೀನುಗಾರಿಕೆ ಇಲಾಖೆ ಮತ್ತು ಸಮುದ್ರ ಜಾರಿ ದಳವು ಮೀನುಗಳ ಸಂರಕ್ಷಣೆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಅವರ ಪ್ರಯತ್ನಗಳು ಸಾಕಾಗುತ್ತಿಲ್ಲ. ಮೀನುಗಾರಿಕಾ ಇಲಾಖೆಯು ಪ್ರಸ್ತುತ ಕೋಯಿಕ್ಕೋಡ್ ಜಿಲ್ಲೆಯ ಐದು ಬಂದರುಗಳಾದ್ಯಂತ ತಪಾಸಣೆಗಾಗಿ ಕೇವಲ ಎರಡು ದೋಣಿಗಳನ್ನು ಹೊಂದಿದೆ.

ಮೀನುಗಾರಿಕೆ ಉಪನಿರ್ದೇಶಕ ಪಿ.ವಿ. ಸತೀಶನ್ ಈ ಕುರಿತು ಪ್ರತಿಕ್ರಿಯಿಸಿದ್ದು, ಅಕ್ರಮವಾಗಿ ಸಣ್ಣ ಮೀನು ಹಿಡಿದುದ್ದಕ್ಕಾಗಿ ಕಳೆದ ಮೂರು ತಿಂಗಳಿನಿಂದ ಅಂದಾಜು 15 ಲಕ್ಷ ರೂ. ದಂಡವನ್ನು ಸಂಗ್ರಹಿಸಲಾಗಿದೆ. ಇದರ ಹೊರತಾಗಿಯೂ ಈ ಮೀನುಗಳ ಒಂದು ಸಣ್ಣ ಭಾಗ ಮಾತ್ರ ಬಳಕೆಗಾಗಿ ಸ್ಥಳೀಯ ಮಾರುಕಟ್ಟೆಗಳನ್ನು ತಲುಪುತ್ತದೆ. ಹೆಚ್ಚಿನವುಗಳನ್ನು ರಸಗೊಬ್ಬರ ಮತ್ತು ಇತರ ಉತ್ಪನ್ನಗಳಲ್ಲಿ ಬಳಸಲು ಕಾರ್ಖಾನೆಗಳಿಗೆ ಕಳುಹಿಸಲಾಗುತ್ತದೆ.

ಉದಾಹರಣೆಗೆ ಮರಿ ಸಾರ್ಡೀನ್‌ಗಳು ಸ್ಥಳೀಯ ಮೀನು ಮಾರುಕಟ್ಟೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇತ್ತೀಚೆಗೆ ಎರಡು ಕಿಲೋಗಳು 50 ರೂ. ಗೆ ಮಾರಾಟವಾಗುತ್ತವೆ. ಮೀನುಗಾರರು ಮತ್ತು ವ್ಯಾಪಾರಿಗಳು ಈ ಕ್ಯಾಚ್‌ಗಳಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುವುದಿಲ್ಲ. ಯಾಕೆಂದರೆ ಬೆಳೆಯಲು ಅನುಮತಿಸಲಾದ ಸಾರ್ಡೀನ್‌ಗಳು ಹೆಚ್ಚಿನ ಬೆಲೆಯನ್ನು ಪಡೆಯುತ್ತವೆ. ಕೆಲವು ತಿಂಗಳ ಹಿಂದೆ ಸಾರ್ಡೀನ್ ಬೆಲೆ 400 ರೂ. ಗೆ ಏರಿತ್ತು.

ಮರಿ ಸಾರ್ಡೀನ್ ಲೋಡ್‌ಗೆ 25 ಲಕ್ಷ ರೂ.

ರಸಗೊಬ್ಬರ ಕಾರ್ಖಾನೆಗಳಿಗೆ ಕಳುಹಿಸಲಾದ ಮರಿ ಸಾರ್ಡೀನ್‌ಗಳ ಲೋಡ್ 2.5 ಲಕ್ಷದಿಂದ 2.8 ಲಕ್ಷ ರೂ. ಪ್ರತಿ ಲೋಡ್ ಸುಮಾರು 200 ಬಾಕ್ಸ್‌ಗಳನ್ನು ಒಳಗೊಂಡಿರುತ್ತದೆ. ಒಟ್ಟು ಸರಿಸುಮಾರು 14,000 ಕೆ.ಜಿ. ಸಾರ್ಡೀನ್‌ಗಳನ್ನು ಪ್ರತಿ ಕೆ.ಜಿ. ಗೆ ಸರಾಸರಿ 20 ರೂ. ಗೆ ಮಾರಾಟ ಮಾಡಲಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ದೊಡ್ಡ ಸಾರ್ಡೀನ್‌ಗಳು ಪ್ರತಿ ಕೆ.ಜಿ.ಗೆ 150 ರಿಂದ 200 ರೂ. ರವರೆಗೆ ಪಡೆಯಬಹುದು. ಪ್ರತಿ ಲೋಡ್‌ಗೆ 21 ಲಕ್ಷದಿಂದ 28 ಲಕ್ಷ ರೂ. ವರೆಗೆ ಗಳಿಸಬಹುದು.

Toll Free travel: ಎಕ್ಸ್‌ಪ್ರೆಸ್‌ವೇಗಳಲ್ಲಿ 20 ಕಿ.ಮೀ ಪ್ರಯಾಣಕ್ಕೆ ಶುಲ್ಕವಿಲ್ಲ! ಸದ್ಯದಲ್ಲೇ ಟೋಲ್‌ ಸಂಗ್ರಹ ಸ್ವಯಂಚಾಲಿತ

ಕೇವಲ ಒಂದು ಲೋಡ್ ಬೇಬಿ ಸಾರ್ಡೀನ್ ನಿಂದ ಸುಮಾರು 25 ಲಕ್ಷ ರೂ. ಪಡೆದರೆ 100 ಲೋಡ್ ಆಗಿದ್ದರೆ ಒಟ್ಟು 25 ಕೋಟಿ ರೂ. ಪಡೆಯಬಹುದಿತ್ತು. ಈ ಸಾರ್ಡೀನ್‌ಗಳನ್ನು ಬೆಳೆಯಲು ಬಿಟ್ಟಿದ್ದರೆ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಿ ನಷ್ಟವನ್ನು ತಡೆಯಬಹುದು.

Leave a Reply

Your email address will not be published. Required fields are marked *