Tuesday, 13th May 2025

ಡೆಲ್ಲಿಗೆ ಸತತ ನಾಲ್ಕನೇ ಸೋಲು, ಕಗ್ಗಂಟಾದ ಪ್ಲೇಆಫ್

ದುಬೈ: ಸರ್ವಾಂಗೀಣ ವೈಫಲ್ಯ ಅನುಭವಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸತತ 4ನೇ ಸೋಲು ಕಂಡಿದೆ.

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಬಳಗ 9 ವಿಕೆಟ್‌ಗಳಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ಶರಣಾಯಿತು. 14 ಅಂಕಗಳೊಂದಿಗೆ 3ನೇ ಸ್ಥಾನದಲ್ಲೇ ಉಳಿದ ಡೆಲ್ಲಿ ತಂಡದ ಪ್ಲೇಆಫ್ ಹಾದಿ ಕಠಿಣಗೊಂಡಿತು. 9ನೇ ಜಯ ದಾಖಲಿಸಿದ ಮುಂಬೈ 18 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಡೆಲ್ಲಿ ತಂಡ, ಟ್ರೆಂಟ್ ಬೌಲ್ಟ್ (21ಕ್ಕೆ 3) ಹಾಗೂ ಜಸ್‌ಪ್ರೀತ್ ಬುಮ್ರಾ (17ಕ್ಕೆ 3) ಜೋಡಿಯ ಮಾರಕ ದಾಳಿಗೆ ನಲುಗಿ 9 ವಿಕೆಟ್‌ಗೆ 110 ರನ್ ಪೇರಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಮುಂಬೈ ತಂಡ ಇಶಾನ್ ಕಿಶನ್ (72*ರನ್, 47 ಎಸೆತ, 8 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಲವಾಗಿ 14.2 ಓವರ್‌ಗಳಲ್ಲಿ 1 ವಿಕೆಟ್‌ಗೆ 111 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

ಎಂಟು ಬೌಂಡರಿ ಮತ್ತು ಮೂರು ಸಿಕ್ಸರ್‌ ನೆರವಿನಿಂದ ಅಜೇಯ ಅರ್ಧಶತಕ ಬಾರಿಸಿದ ಮುಂಬೈನ ಆರಂಭಿಕ ಆಟಗಾರ ಇಶಾನ್ ಕಿಶನ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Leave a Reply

Your email address will not be published. Required fields are marked *