Sunday, 11th May 2025

Height Increase: ನೀವು ಎತ್ತರವಾಗಿ ಕಾಣಬೇಕಾ? ಹಾಗಾದ್ರೆ ಕೆಲವು ಟ್ರಿಕ್ಸ್ ಫಾಲೋ ಮಾಡಿ

Height Increase

ಬೆಂಗಳೂರು: ಕೆಲವರು ತುಂಬಾ ಹೈಟ್ (Height Increase) ಇದ್ದರೆ ಕೆಲವರು ತುಂಬಾ ಕುಳ್ಳಗೆ ಇರುತ್ತಾರೆ. ಈ ಕುಳ್ಳಗಿರುವ ಹುಡುಗ-ಹುಡುಗಿಯರಿಗೆ ಕೆಲವರು ಕುಳ್ಳ- ಕುಳ್ಳಿ ಎಂದು ಚುಡಾಯಿಸುತ್ತಾರೆ. ಅಲ್ಲದೇ ಕೆಲವರು ಕುಳ್ಳಗಿದ್ದೇವೆ ಯಾವುದೇ ಸ್ಟೈಲ್‌ ಮಾಡುವುದಕ್ಕೆ ಆಗುವುದಿಲ್ಲ, ನಮ್ಮ ಸಂಗಾತಿಗೆ ಫರ್ಪೆಕ್ಟ್ ಆಗಿ ಮ್ಯಾಚ್ ಆಗುವುದಿಲ್ಲ ಎಂಬ ಚಿಂತೆಯಲ್ಲಿರುತ್ತಾರೆ. ಹಾಗಾಗಿ ಅಂತವರು ಬೇಸರ ಮಾಡಿಕೊಳ್ಳುವ ಬದಲು ಕೆಲವು ಸಲಹೆಗಳನ್ನು ಫಾಲೋ ಮಾಡಿ. ತಜ್ಞರು ನೀವು ಹೇಗೆ ಎತ್ತರವಾಗಿ ಕಾಣಿಸಿಕೊಳ್ಳಬಹುದು ಎಂಬುದರ ಕುರಿತು ಕೆಲವು ಟ್ರಿಕ್‌ಗಳನ್ನು ಸೂಚಿಸಿದ್ದಾರೆ. ಹಾಗಾಗಿ ಅವುಗಳ ಬಗ್ಗೆ ತಿಳಿದುಕೊಳ್ಳಿ.

Height Increase

ಫ್ಲೇರ್ಡ್ ಜೀನ್ಸ್: ಚೆನ್ನಾಗಿ ಹೊಂದಿಕೊಳ್ಳುವ ಮತ್ತು ಉದ್ದವಾದ ಹೆಮ್ಲಿನ್ ಹೊಂದಿರುವ ಫ್ಲೇರ್ಡ್ ಜೀನ್ಸ್ ನಿಮ್ಮ ಕಾಲುಗಳನ್ನು ಉದ್ದವಾಗಿ ಕಾಣುವಂತೆ ಮಾಡುತ್ತದೆ. ಹಾಗಾಗಿ ಕುಳ್ಳಗಿರುವವರು ಇದನ್ನು ಧರಿಸಿ.

ಡೀಪ್ ವಿ-ನೆಕ್ಸ್: ಡೀಪ್ ಆದ ಮತ್ತು ಉದ್ದವಾದ ವಿ ನೆಕ್ ಡ್ರೆಸ್‍ಗಳು ಮತ್ತು ಟಾಪ್‍ಗಳನ್ನು ಧರಿಸುವುದರಿಂದ ನೀವು ಕುಳ್ಳಗಿದ್ದೀರಿ ಎಂಬುದು ಬೇರೆಯವರಿಗೆ ತಿಳಿಯುವುದಿಲ್ಲ. ಮತ್ತು ನಿಮ್ಮ ಕಾಲುಗಳ ಉದ್ದ ಕಡಿಮೆ ಇರುವುದನ್ನು ಬೇರೆಯವರಿಗೆ ಗಮನಿಸಲು ಸಾಧ್ಯವಾಗುವುದಿಲ್ಲ. ಅಲ್ಲದೇ ನಿಮ್ಮ ಈ ಡ್ರೆಸ್ ಗ್ಲಾಮರ್ ಮತ್ತು ಸ್ಟೈಲಿಷ್‌ ಲುಕ್‌ ನೀಡುತ್ತದೆ.

ಮ್ಯಾಕ್ಸಿ ಡ್ರೆಸ್‍ಗಳು: ಮ್ಯಾಕ್ಸಿ ಡ್ರೆಸ್‍ಗಳು ಜನರ ಅಚ್ಚುಮೆಚ್ಚಿನವು ಮತ್ತು ಅವು ದೇಹಕ್ಕೆ ಉತ್ತಮ ಆಕಾರವನ್ನು ನೀಡುತ್ತವೆ ಮತ್ತು ನೀವು ಉದ್ದವಾಗಿ ಕಾಣುವಂತೆ ಮಾಡುತ್ತವೆ. ಹಾಗೇ ನಿಮ್ಮ ಮ್ಯಾಕ್ಸಿ ಡ್ರೆಸ್‍ನೊಂದಿಗೆ ಹೈಹೀಲ್ಡ್ ಗಳನ್ನು ಧರಿಸಿ. ಇದರಿಂದ ನೀವು ಕುಳ್ಳಗಿರುವುದು ತಿಳಿಯುವುದಿಲ್ಲ.

ಲೋ ಕಾಂಟ್ರಾಸ್ಟಿಂಗ್ ಪಾದರಕ್ಷೆಗಳು: ಕುಳ್ಳಗಿರುವ ಪುರುಷರು ಶೂಗಳನ್ನು ಧರಿಸುವುದು ಒಳ್ಳೆಯದು. ಏಕೆಂದರೆ ಅವುಗಳಿಂದ ನಿಮ್ಮ ಹೈಟ್ ಹೆಚ್ಚಾಗಿರುವಂತೆ ಕಾಣುತ್ತದೆ.

Height Increase

ಉದ್ದನೆಯ ಟಾಪ್ ಕೋಟ್‌ಗಳು: ತೊಡೆಯ ಮಧ್ಯಭಾಗದ ತನಕ ಬರುವಂತಹ ಟಾಪ್ ಕೋಟ್‍ಗಳು ದೇಹವನ್ನು ಉದ್ದವಾಗಿಸಿ ನೀವು ಎತ್ತರವಾಗಿ ಕಾಣುತ್ತದೆ ಮಾಡುತ್ತವೆ. ಆದರೆ ನೀವು ಉದ್ದವಾಗಿ ಕಾಣಲು ಉಣ್ಣೆ ಟಾಪ್ ಕೋಟ್‍ಗಳನ್ನು ಧರಿಸುವುದು ಬಹಳ ಒಳ್ಳೆಯದು.

ಬೆಲ್ಟ್‌ಗಳು: ನೀವು ಧರಿಸುವಂತಹ ಬೆಲ್ಟ್‌ಗಳು ಸ್ಲಿಮ್ ಆಗಿರಲಿ. ಅವು 1.5 ಇಂಚುಗಳಿಗಿಂತ ದಪ್ಪವಾಗಿಲ್ಲದಿದ್ದರೆ ಉತ್ತಮ. ಇದು ನೀವು ಚೆನ್ನಾಗಿ ಕಾಣುವಂತೆ ಮಾಡುತ್ತದೆ. ತೆಳುವಾದ ಬೆಲ್ಟ್‌ಗಳು ಧರಿಸುವುದು ನಿಮ್ಮನ್ನು ಉದ್ದವಾಗಿ ಕಾಣುವಂತೆ ಮಾಡುತ್ತವೆ. ಅಲ್ಲದೆ, ನೀವು ಚೆನ್ನಾಗಿ ಕಾಣಲು ಮತ್ತು ನಿಮಗೆ ಆರಾಮದಾಯಕವಾಗಿರಲು ಸ್ಲಿಮ್ ಬೆಲ್ಟ್ ಧರಿಸುವುದು ಸೂಕ್ತವಾಗಿದೆ.

ಇದನ್ನೂ ಓದಿ: ಮದುವೆಯ ದಿನ ಸುಂದರವಾಗಿ ಕಾಣಬೇಕೆ? ಹಾಗಾದ್ರೆ ತಪ್ಪದೇ ಕುಡಿಯಿರಿ ಈ ಡ್ರಿಂಕ್ಸ್‌!

ಈ ಸಲಹೆಗಳನ್ನು ಪಾಲಿಸುವ ಮೂಲಕ ನೀವು ಎಷ್ಟೇ ಕುಳ್ಳಗಿದ್ದರು ಕೂಡ ಅದನ್ನು ಮರೆಮಾಚಬಹುದು. ಇದು ನಿಮಗೆ ಆರಾಮದಾಯಕ ಕೂಡ ಆಗಿರುತ್ತದೆ. ಮತ್ತು ಇದರಿಂದ ನೀವು ಆಕರ್ಷಕವಾದ ನೋಟವನ್ನು ಪಡೆಯುತ್ತೀರಿ.

Leave a Reply

Your email address will not be published. Required fields are marked *