Sunday, 11th May 2025

Warriors Ganesh: ವಾರಿಯರ್ಸ್ ಗಣೇಶ ಯುವಕರ ಬಳಗದ ವತಿಯಿಂದ  ಗೌರಿ ಗಣೇಶ  ಪ್ರತಿಷ್ಠಾಪನೆ ಹಾಗೂ ವಿಸರ್ಜನೆ

ಬಾಗೇಪಲ್ಲಿ: ಪಟ್ಟಣದ ೭ನೇ ವಾರ್ಡಿನ ಬಾಗೇಪಲ್ಲಿ ತಾಲ್ಲೂಕು ವಾರಿಯರ್ಸ್ ಗಣೇಶ ಯುವಕರ ಬಳಗದ ವತಿ ಯಿಂದ ಪ್ರತಿಷ್ಟಾಪಿಸಲಾಗಿದ್ದ ಗೌರಿ ಗಣೇಶ ಮೂರ್ತಿಗಳನ್ನು ಭಾನುವಾರ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ಪಟ್ಟಣಪಂಚಾತಿಯಿತಿ ನಿಗದಿಪಡಿಸಿರುವೆಡೆ ಶ್ರದ್ಧಾಪೂರ್ವಕ ರೀತಿಯಲ್ಲಿ ವಿಸರ್ಜನೆ ಮಾಡಲಾಯಿತು.

ಎರಡು ದಿನಗಳ ಕಾಲ ನಿತ್ಯ ಅಲಂಕಾರ, ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನಡೆಸಲಾ ಗಿತ್ತು. ಪ್ರತಿ ದಿನ ಸಂಜೆ ಭಜನಾ ಕಾರ್ಯಕ್ರಮ, ಸಂಗೀತ ಕಚೇರಿ, ರಂಗೋಲಿ ಸ್ಪರ್ಧೆ, ಸಾಮೂಹಿಕ ನೃತ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಜರುಗಿದ್ದವು. ವಿಸರ್ಜನೆಯ ಅಂಗವಾಗಿ ಭಾನುವಾರ ರಾತ್ರಿ ಗಣೇಶ ಮೂರ್ತಿಯನ್ನು ಹೂವಿನಿಂದ ಅಲಂಕೃತವಾದ ಭವ್ಯ ಮಂಟಪದಲ್ಲಿ ಕೂರಿಸಿ ಪಟ್ಟಣದ ಡಿ.ವಿ.ಗುಂಡಪ್ಪ ಮುಖ್ಯ ರಾಜಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಜಾನಪದ ಕಲಾ ತಂಡದೊಂದಿಗೆ ಮಕ್ಕಳು ಮಹಿಳೆಯರು, ಯುವಕರುಗಳು ಸಹ ಹೆಜ್ಜೆಹಾಕುತ್ತಾ ಉತ್ಸವಕ್ಕೆ ರಂಗೇರಿಸಿದ್ದರು. ನಂತರ ಮೆರವಣಿಗೆ ಮೂಲಕ ರಾಮಸ್ವಾಮಿ ಪಲ್ಲಿ ರೆಡ್ಡಿ ಕೆರೆಯಲ್ಲಿಗೆ ತೆರಳಿ ವಿಸರ್ಜಿಸಲಾಯಿತು.

ಮೆರವಣಿಗೆಯುದ್ದಕ್ಕೂ ಸಬ್ ಇನ್ಸ್ಪೆಕ್ಟರ್ ಪ್ರಶಾಂತ್ ವರ್ಣಿ ನೇತೃತ್ವದಲ್ಲಿ ಪೋಲಿಸ್ ಬಂದೋಬಸ್ತ್ ಹಾಕಲಾಗಿತ್ತು. ಈ ಸಂದರ್ಭದಲ್ಲಿ ರಾ.ನ.ಗೋಪಾಲ ರೆಡ್ಡಿ, ರಾಜಾರೆಡ್ಡಿ, ಡಿ.ವಿ.ಮಂಜುನಾಥ್, ನರೇಂದ್ರ, ಸಂದೀಪ್. ಜಿ. ,ದರ್ಶನ ರೆಡ್ಡಿ, ಅಭಿಷೇಕ್, ಶ್ರೀನಿವಾಸ್,ಪ್ರವೀಣ್ ಕುಮಾರ್, ಪ್ರೇಮ್ ಶ್ರೀರಾಮ್, ಹರಿ, ಪವನ್, ಬಾರ್ಗವ್, ಕಿರಣ್, ಶಶಿಧರ್, ಗೋಕುಲ್, ಶಶಾಂಕ್ ಸೇರಿದಂತೆ ಇತರರಿದ್ದರು.

Leave a Reply

Your email address will not be published. Required fields are marked *