Sunday, 11th May 2025

Spider: 118 ವರ್ಷಗಳ ಬಳಿಕ ಜೇಡಗಳ ಎರಡು ಹೊಸ ಪ್ರಭೇದ ಪತ್ತೆ!

Spider

ಸುಮಾರು 118 ವರ್ಷಗಳ ಬಳಿಕ ಪಶ್ಚಿಮ ಘಟ್ಟಗಳಲ್ಲಿ (Western Ghats) ಎರಡು ಜಾತಿಯ ಮೈಮೆಟಸ್ ಜೇಡವನ್ನು (Spider) ಪತ್ತೆ ಹಚ್ಚಲಾಗಿದೆ. ಈ ಮೂಲಕ ಭಾರತದಲ್ಲಿ ಜೇಡಗಳ ಜಾತಿಯ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಝೂಲಾಜಿಕಲ್ ಸರ್ವೆ ಆಫ್ ಇಂಡಿಯಾ (The Zoological Survey of India) ಪಶ್ಚಿಮ ಘಟ್ಟಗಳಲ್ಲಿ ಎರಡು ಅಪರಿಚಿತ ಜೇಡ ಪ್ರಭೇದಗಳ ( spider species) ಆವಿಷ್ಕಾರವನ್ನು ಘೋಷಿಸಿದೆ.

ಜೀವವೈವಿಧ್ಯದ ಹಾಟ್‌ಸ್ಪಾಟ್ ಆಗಿರುವ ಕರ್ನಾಟಕದ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ ಮತ್ತು ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಮೈಮೆಟಸ್ ಸ್ಪೈ ನಾಟಸ್ ಮತ್ತು ಮೈಮೆಟಸ್ ಪರ್ವುಲಸ್ ಎಂಬ ಹೊಸ ಜೇಡ ಪ್ರಭೇದ ಕಂಡುಬಂದಿದೆ. ಸುಮಾರು 118 ವರ್ಷಗಳ ಹಿಂದೆ ಮೈಮೆಟಸ್ ಜಾತಿಯ ಜೇಡವನ್ನು ಪತ್ತೆ ಹೆಚ್ಚಲಾಗಿತ್ತು.

ಮೈಮೆಟಸ್ ಸ್ಪಿನಾಟಸ್ ಮತ್ತು ಮೈಮೆಟಸ್ ಪರ್ವುಲಸ್ ಆವಿಷ್ಕಾರದ ಬಳಿಕ ಭಾರತದಲ್ಲಿನ ಒಟ್ಟು ಮಿಮೆಟಸ್ ಜೇಡ ಪ್ರಭೇದಗಳ ಸಂಖ್ಯೆ ಮೂರಕ್ಕೆ ಏರಿದೆ. ಇವೆಲ್ಲವೂ ದೇಶದ ದಕ್ಷಿಣ ಭಾಗದಲ್ಲಿ ನೆಲೆಗೊಂಡಿರುವುದು ವಿಶೇಷವಾಗಿದೆ. ಮೈಮೆಟಸ್ ಜಾತಿಯ ಜೇಡವನ್ನು ಸುಮಾರು 118 ವರ್ಷಗಳ ಹಿಂದೆ ಗುರುತಿಸಲಾಗಿತ್ತು. ಹೀಗಾಗಿ ಈಗಿನ ಶೋಧ ವಿಶೇಷವಾಗಿ ಮಹತ್ವದ್ದಾಗಿದೆ.

ಭಾರತದ ಜೀವವೈವಿಧ್ಯದಲ್ಲಿ ಪಶ್ಚಿಮ ಘಟ್ಟಗಳ ನಿರ್ಣಾಯಕ ಪಾತ್ರದ ಬಗ್ಗೆ ವಿವರಿಸಿದ ಝೂಲಾಜಿಕಲ್ ಸರ್ವೆ ಆಫ್ ಇಂಡಿಯಾದ ನಿರ್ದೇಶಕಿ ಡಾ. ಧೃತಿ ಬ್ಯಾನರ್ಜಿ, ದೇಶದ ಹವಾಮಾನ ಸ್ಥಿರತೆಗೆ ಪಶ್ಚಿಮ ಘಟ್ಟಗಳು ಅತ್ಯಗತ್ಯ ಮತ್ತು ಇದು ಕೆಲವೊಮ್ಮೆ ವಿಜ್ಞಾನಿಗಳನ್ನೂ ಆಶ್ಚರ್ಯಗೊಳಿಸುತ್ತದೆ ಎಂದು ಹೇಳಿದರು.

Spider

ಈ ಆವಿಷ್ಕಾರದ ನೇತೃತ್ವವನ್ನು ಡಾ. ಸೌವಿಕ್ ಸೇನ್, ಡಾ. ಸುಧಿನ್ ಪಿ.ಪಿ., ಡಾ. ಪ್ರದೀಪ್ ಎಂ. ಶಂಕರನ್ ವಹಿಸಿದ್ದರು. ಡಾ. ಬ್ಯಾನರ್ಜಿ ಅವರು ಈ ಪ್ರದೇಶದಲ್ಲಿ ನಿರಂತರ ಸಂಶೋಧನೆ ಮತ್ತು ಸಂರಕ್ಷಣೆಯ ಪ್ರಯತ್ನಗಳ ಅಗತ್ಯವನ್ನು ವಿವರಿಸಿದ್ದಾರೆ.

ಆವಿಷ್ಕಾರಗಳ ನಡುವಿನ ದೀರ್ಘ ಅಂತರವು ಭಾರತದಲ್ಲಿ ಜೇಡಗಳ ಟ್ಯಾಕ್ಸಾನಮಿ ಮತ್ತು ಜೈವಿಕ ಭೂಗೋಳಶಾಸ್ತ್ರದ ಬಗ್ಗೆ ಹೆಚ್ಚು ವ್ಯಾಪಕವಾದ ಸಮೀಕ್ಷೆಗಳು ಮತ್ತು ಸಂಶೋಧನೆಗಳ ಅಗತ್ಯವನ್ನು ಹೇಳುತ್ತದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *