Wednesday, 14th May 2025

ದೇಶದ ಚತುರರು ಜಗತ್ತಿನಲ್ಲಿ ಹಲವರಿಗೆ ಸ್ಫೂರ್ತಿಯಾಗಿದ್ದಾರೆ: ಪ್ರಧಾನಿ ಮೋದಿ

ನವದೆಹಲಿ: ಇತರರಿಗೆ ಜಗತ್ತಿನಲ್ಲಿ ಸ್ಫೂರ್ತಿಯಾಗಲು ಕಾತರರಾಗಿರುವ ಅನೇಕ ಜನ ಭಾರತದಲ್ಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

‘ಮನದ ಮಾತು (ಮನ್ ಕಿ ಬಾತ್)’ ರೇಡಿಯೋ ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಕೊರೊನಾ ಸಂದರ್ಭದಲ್ಲಿ ಖಾದಿ ಮಾಸ್ಕ್‌ಗಳು ಜನಪ್ರಿಯವಾಗಿವೆ. ಮೆಕ್ಸಿಕೊದ ಒಕ್ಸಾಕಾ ಪ್ರದೇಶದಲ್ಲಿಯೂ ಖಾದಿ ಮಾಸ್ಕ್ ತಯಾರಿಸಲಾಗುತ್ತಿದೆ ಎಂದು ಹೇಳಿದರು.

ದೇಶವಾಸಿಗಳಿಗೆ ವಿಜಯ ದಶಮಿ ಹಬ್ಬದ ಶುಭಾಶಯಗಳು. ಹಬ್ಬವು ಅಸತ್ಯದ ವಿರುದ್ಧ ಸತ್ಯ, ಕೆಡುಕಿನ ವಿರುದ್ಧ ಒಳಿತು ಜಯ ಸಾಧಿಸುವಂತೆ ಮಾಡಲಿ. ಪ್ರತಿಯೊಬ್ಬರ ಬಾಳಿನಲ್ಲೂ ಸ್ಫೂರ್ತಿ ತರಲಿ ಎಂದು ಹಾರೈಸಿದರು.

ಈ ವರ್ಷ ದೇಶದಲ್ಲಿ ಆಚರಿಸುವ ಹಬ್ಬಗಳಿಗೆ ಈ ಬಾರಿ ಕೊರೊನಾದಿಂದಾಗಿ ಅಡ್ಡಿಯಾಗಿದೆ. ಇಂಥ ಸಂದರ್ಭದಲ್ಲಿ ನಮ್ಮ ನೆರವಿಗೆ ಬಂದ ಸ್ವಚ್ಛತಾ ಕಾರ್ಮಿಕರು, ಆರೋಗ್ಯ ಕಾರ್ಯಕರ್ತರ ಕೊಡುಗೆಯನ್ನು ಅರ್ಥಮಾಡಿಕೊಂಡಿದ್ದೇವೆ. ಗಡಿಯಲ್ಲಿರುವ ಯೋಧರಿಗಾಗಿ ನಾವು ಮನೆಯಲ್ಲಿ ದೀಪಗಳನ್ನು ಬೆಳಗಬೇಕು.

ಅಂಗಡಿಯ ಒಂದು ಭಾಗವನ್ನು ಗ್ರಂಥಾಲಯ ಮಾಡಿದ ತಮಿಳುನಾಡಿನ ಪೋನ್ ಮರಿಯಪ್ಪನ್ ಅವರನ್ನು ಶ್ಲಾಘಿಸುತ್ತೇನೆ. ಜ್ಞಾನಕ್ಕಿಂತ ಹೆಚ್ಚು ಪರಿಶುದ್ಧವಾದುದು ಬೇರೆ ಯಾವುದೂ ಇಲ್ಲ ಎಂದು ಗೀತೆ ಹೇಳುತ್ತದೆ. ಸ್ವಾತಂತ್ರ್ಯ ಹೋರಾಟಕ್ಕೆ ನೆರವಾಗು ವಾಗಲೂ ಸರ್ದಾರ್ ಪಟೇಲರು ಹಾಸ್ಯಪ್ರಜ್ಞೆ ಉಳಿಸಿಕೊಂಡಿದ್ದರು. ದೇಶದ ಏಕತೆಗಾಗಿಯೇ ಸರ್ದಾರ್ ಪಟೇಲರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. * ಅಕ್ಟೋಬರ್ 31ರಂದು ನಾವು ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರನ್ನು ಕಳೆದು ಕೊಂಡಿದ್ದೆವು. ಅವರಿಗೆ ನನ್ನ ಗೌರವ ನಮನಗಳು. * ರೈತರ ಆದಾಯ ಹೆಚ್ಚಿಸಲು ಹೊಸ ಕೃಷಿ ಮಸೂದೆಗಳು ನೆರವಾಗಲಿವೆ. ಮುಂಬರುವ ಹಬ್ಬಗಳಿಗೆ ಶುಭಾಶಯಗಳು. ಆದರೆ, ಕೊರೊನಾ ವೈರಸ್ ಹರಡುವಿಕೆ ತಡೆಗೆ ವಹಿಸಬೇಕಾದ ಮುನ್ನೆಚ್ಚರಿಕೆ ಗಳನ್ನು ಮರೆಯದಿರಿ.

Leave a Reply

Your email address will not be published. Required fields are marked *