Thursday, 15th May 2025

ಗುಡ್ಡ ಕುಸಿತ: ಬೆಂಜ್ ಟ್ರಕ್‌ ಪತ್ತೆ, ಹೊರ ತೆಗೆಯುವಲ್ಲಿ ಅಡೆತಡೆ

ಅಂಕೋಲಾ: ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತದಿಂದ ಗಂಗಾವಳಿ ನದಿಯ ಮಣ್ಣಿನಡಿ ಹುದುಗಿ ಹೋಗಿರುವ ಬೆಂಜ್ ಟ್ರಕ್‌ನ್ನು ಪತ್ತೆ ಮಾಡಿರುವ ರಕ್ಷಣಾ ತಂಡಕ್ಕೆ ಟ್ರಕ್‌ನ್ನು ಹೊರ ತೆಗೆಯುವಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗಿವೆ.

ಈಗಾಗಲೇ ನದಿ ಳಗೆ ಬಿದ್ದ ಮಣ್ಣಿನಡಿ ಟ್ರಕ್ ಹೂತು ಹೋಗಿದ್ದು, ಟ್ರಕ್ ಕ್ಯಾಬಿನ್ ಹಾಗೂ ಉಳಿದ ಭಾಗಗಳು ಬೇರೆಯಾಗಿ ಮಣ್ಣಿನಡಿ ಚದುರಿ ಹೋಗಿ ರುವ ಸಾಧ್ಯತೆ ಇದೆ. ಹೀಗಾಗಿ ೨೦ ಅಡಿಗಳಷ್ಟು ಆಳದಲ್ಲಿ ಇರುವುದರಿಂದ ಮೇಲಕ್ಕೆ ಎತ್ತಲು ಕಷ್ಟವಾಗಿದ್ದು, ಎನ್ನುವ ಮಾಹಿತಿ ಲಭ್ಯವಾಗಿದೆ. ನೀರಿನ ಹರಿವಿನ ಪ್ರಮಾಣ ೮ ನಾಟಿಕಲ್ ಮೈಲ್ ವೇಗವಾಗಿ ಸಾಗುತ್ತಿದ್ದು ಮುಳುಗು ತಜ್ಞರಿಗೂ ಸಾಧ್ಯವಾಗುತ್ತಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿನಲ್ಲಿರುವ ಕಂಪನಿಯಿಂದ ಹೊಸ ನ್ಯಾವಿಗೇಷನಲ್ ಪ್ಯಾಕ್ ಅನ್ನು ಪಡೆದುಕೊಂಡಿದ್ದೇವೆ. ಭಾರತದಲ್ಲಿ ಬಳಸಲಾಗುವ ಜಿಪಿಎಸ್‌ಅನ್ನು ಯುಎಸ್‌ಎ ಅಭಿವೃದ್ಧಿ ಪಡಿಸಿದೆ. ಆದ್ದರಿಂದ ಹೊಸ ನ್ಯಾವಿಗೇಷನಲ್ ಪ್ಯಾಕ್ ಸ್ಥಳವನ್ನು ಪರಿಣಾಮಕಾರಿಯಾಗಿ ಪರಿಶೀಲಿಸಲು ನಮಗೆ ಸಹಾಯ ಮಾಡುತ್ತದೆ. ಒಮ್ಮೆ ಡ್ರೋನ್‌ನ ಬ್ಯಾಟರಿ ನಮಗೆ ತಲುಪಿದಾಗ ಅದನ್ನು ತಕ್ಷಣವೇ ಪ್ರಾರಂಭಿಸುತ್ತೇವೆ. ಟ್ರಕ್‌ನ ನಿಖರವಾದ ಸ್ಥಾನವನ್ನು ನಿರ್ಣಯಿಸಲು ಡ್ರೋನ್ ಅನ್ನು ಬಳಸಲಾಗುತ್ತದೆ. ಕೋಸ್ಟ್‌ಗಾರ್ಡ್ ಕೂಡ ಗುರುವಾರ ಬೆಳಿಗ್ಗೆ ೭ ಗಂಟೆಗೆ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಇಂದ್ರಪಾಲ ಮಾಧ್ಯಮಕ್ಕೆ ಮಾಹಿತಿ ನೀಡಿದರು.

ಕಟ್ಟು ನಿಟ್ಟಿನ ನಿರ್ಬಂಧನೆ: ಮೊಬೈಲ್ ಫೋನ್‌ಗಳ ಬಳಕೆಯು ಡ್ರೋನ್ ಬಳಸಿ ಹುಡುಕಾಟಕ್ಕೆ ಅಡ್ಡಿಯಾಗುವುದರಿಂದ ರಕ್ಷಣಾ ಕಾರ್ಯಕರ್ತರನ್ನು ಮಾತ್ರ ಸ್ಥಳಕ್ಕೆ ಅನುಮತಿಸಲಾಗಿದೆ. ಯಾವುದೇ ಅಡೆತಡೆಗಳಿಲ್ಲದೆ ಶೋಧ ಕಾರ್ಯವನ್ನು ಮುಂದುವರೆಸಲು ಜಿಲ್ಲಾಡಳಿತ ಕಟ್ಟು ನಿಟ್ಟಿನ ನಿರ್ಬಂಧ ಗಳನ್ನು ವಿಽಸಿದೆ. ಮಾಧ್ಯಮದವರಿಗೂ ಗುಡ್ಡ ಕುಸಿದ ಸ್ಥಳದಲ್ಲಿ ಪ್ರವೇಶ ನೀಡಿರಲಿಲ್ಲ. ನಂತರ ಪತ್ರಿಕಾಗೋಷ್ಠಿಯನ್ನು ಕರೆದ ಜಿಲ್ಲಾಡಳಿತ, ಗಂಗಾವಳಿ ನದಿಯ ಮಣ್ಣಿನಡಿ ಬೆಂಜ್‌ಟ್ರಕ್ ಇದೆಯಾದರೂ ನೀರಿನಿಂದ ಹೊರ ತೆಗೆಯಲು ಸಾಕಷ್ಟು ಸಮಸ್ಯೆಗಳು ಎದುರಾಗಿರುವುದನ್ನು ಖಚಿತ ಪಡಿಸಿದೆ.

ಡಿಟೆಕ್ಟರ್ ತಂಡಕ್ಕೆ ಇಂದ್ರಪಾಲ ನೇತೃತ್ವ
ರಾಷ್ಟ್ರೀಯ ಡಿಟೆಕ್ಟ್‌ರ್ ಏಜೆನ್ಸಿ ತಂಡದ ಮೇಜರ್ ಜನರಲ್ ಇಂದ್ರಪಾಲ ನೇತೃತ್ವದ ತಂಡದೊಂದಿಗೆ ಎನ್‌ಡಿಆರ್‌ಎ-, ನೌಕಾಪಡೆ ಮತ್ತು ಕೇರಳದ ಸ್ವಯಂ ಸೇವಕರ ಗುಂಪು ಗುರುವಾರ ಬೆಳಿಗ್ಗೆ ಕಾರ್ಯಾಚರಣೆ ಕೈಗೊಂಡಿದ್ದರು. ಸುಧಾರಿತ ಡ್ರೋನ್ ಕ್ಯಾಮೆರಾ ಮೂಲಕ ನೀರು ಹಾಗೂ ಕೆಸರು ಮಣ್ಣಿನಡಿ ಇರಬಹುದಾದ ವಸ್ತುಗಳನ್ನು ಪತ್ತೆ ಹಚ್ಚುವ ಕಾರ್ಯಾ ಚುರುಕಿನಿಂದ ಸಾಗಿತ್ತು. ಇನ್ನೊಂದೆಡೆ ಗಂಗಾವಳಿ ನದಿಯಲ್ಲಿ ಮಣ್ಣು ಸಂಗ್ರಹವಾಗಿರುವ ಭಾಗವನ್ನು ಕೊರೆಯಲು ಬೂಮ್ ಎಕ್ಸ್‌ಕಾವೇಟರ್ ಯಂತ್ರದ ಮೂಲಕ ಕಾರ್ಯಾಚರಣೆ ನಡೆಸಿದ್ದರು.

ಹುಡುಕಾಟಕ್ಕೆ ಸುಧಾರಿತ ಡ್ರೋನ್
ನಿವೃತ್ತ ಮೇಜರ್ ಜನರಲ್ ಇಂದ್ರಪಾಲ್ ನೇತೃತ್ವದ ಸೇನೆಯ ತಂಡವು ಲಾರಿಯ ಸ್ಥಾನವನ್ನು ಗುರುತಿಸಲು ಜಿಪಿಎಸ್ ಹೊಂದಿದ ಸುಧಾರಿತ ಡ್ರೋನ್ ಅನ್ನು ಉಪಯೋಗಿಸು ತ್ತಿದ್ದಾರೆ. ಡ್ರೋನ್‌ನ ಬ್ಯಾಟರಿಯ ಸಾಮರ್ಥ್ಯವನ್ನು ಆದರಿಸಿ ಕಾರ್ಯಾಚರಣೆ ಸಮಯವನ್ನು ನಿಗದಿ ಪಡಿಸಬಹುದು ಎಂದು ಮೇಜರ್ ಜನರಲ್ ಇಂದ್ರಪಾಲ್ ಮಾಹಿತಿ ನೀಡಿದ್ದರು. ಪೊಲೀಸರ ತಂಡ ಕಾರವಾರ ರೈಲು ಮಾರ್ಗದ ಮೂಲಕ ಬ್ಯಾಟರಿಯನ್ನು ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ನದಿಯ ಒಳಗಡೆ ಮಣ್ಣಿನ ದಿಬ್ಬದ ಅಡಿ ಲಾರಿ ಪತ್ತೆಯಾಗಿದೆ.

ಕ್ಯಾಬಿನ್‌ನಲ್ಲಿ ಅರ್ಜುನ ಇರುವ ಸಾಧ್ಯತೆ ಕಡಿಮೆ
ಮೊದಲಿಗೆ ನದಿಯ ತಳದಿಂದ ಟ್ರಕ್‌ಅನ್ನು ಮೇಲೆತ್ತಲು ನದಿಯ ಮೇಲೆ ಸಂಗ್ರಹವಾಗಿರುವ ಮಣ್ಣನ್ನು ಸಂಪೂರ್ಣವಾಗಿ ತೆರುವುಗೊಳಿಸುವ ಕಾರ್ಯ ಬರದಿಂದ ಸಾಗಿದೆ. ನೌಕಾಪಡೆಯ ಸ್ಕೂಬಾ ಡೈವಿಂಗ್‌ನವರ ಪ್ರಕಾರ ಟ್ರಕ್‌ನ ಕ್ಯಾಬಿನ್‌ನಲ್ಲಿ ಕೇರಳದ ಅರ್ಜುನ್ ಇರಬಹುದಾದ ಸಾಧ್ಯತೆ ತೀರಾ ಕಡಿಮೆ ಎಂದು ಅಂದಾಜಿಸಿದೆ.

ಅರ್ಜುನ್ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ
ಸುಳಿವು ಲಭ್ಯವಾಗಿರುವ ಬೆಂಜ್ ಲಾರಿಯ ಕ್ಯಾಬಿನ್‌ನಲ್ಲಿ ಚಾಲಕ ಅರ್ಜುನ್ ಬದುಕುಳಿದಿರುವ ಸಾಧ್ಯತೆ ತೀರಾ ಕಡಿಮೆ ಎಂದು ಅಂದಾಜಿಸಲಾಗಿದೆ. ಬೆಂಜ್ ಟ್ರಕ್‌ನ ಕ್ಯಾಬಿನ್ ಎಸಿ ಸೌಕರ್ಯ ಹೊಂದಿದ್ದು ಭದ್ರವಾದ ಲಾಕಿಂಗ್ ವವಸ್ಥೆ ಹೊಂದಿದೆ.

ಒಳಗಿರುವ ಆಮ್ಲಜನಕದ ಪ್ರಮಾಣ ೧೭ ಸಾವಿರ ಲೀಟರ್‌ಗಳಷ್ಟು ಎಂದು ತಿಳಿದು ಬಂದಿದೆ. ಈ ವ್ಯವಸ್ಥೆ ಲಾರಿಯ ಕ್ಯಾಬಿನ್ ಒಳಗಡೆ ಸ್ಥಿರವಾಗಿದ್ದರೂ ಒಳಗಿರುವ ವ್ಯಕ್ತಿ ಆರು ದಿನಗಳ ಕಾಲ ಬದುಕುಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಅವಗಡ ಸಂಭವಿಸಿ ಈಗಾಗಲೇ ಹತ್ತು ದಿನಗಳು ಕಳೆದಿದ್ದು, ಚಾಲಕ ಅರ್ಜುನ ಬದುಕಿರುವ ಕುರಿತು ಸ್ಪಷ್ಟವಾಗಿ ಹೇಳಲು ಸಾಧ್ಯವಾಗದು. ಕ್ಯಾಬಿನ್ ಸುಳಿವು ದೊರೆತ ಸ್ಥಳದಲ್ಲಿ ಗಂಗಾವಳಿ ನದಿ ನೀರಿನ ಹರಿವಿನ ಪ್ರಮಾಣ ೮ ನಾಟಿಕಲ್ ಮೈಲ್ ವೇಗವಾಗಿ ಸಾಗುತ್ತಿದ್ದು ಮುಳುಗು ತಜ್ಞರಿಗೂ ಸಾಧ್ಯವಾಗುತ್ತಿಲ್ಲ ಎಂದು ಮೇಜರ್‌ಜನರಲ್‌ಇಂದ್ರಪಾಲ ಹೇಳಿದರು.

Leave a Reply

Your email address will not be published. Required fields are marked *