Tuesday, 13th May 2025

ಮೆಕ್​ ಡೊನಾಲ್ಡ್ಸ್​ ಸ್ಫೋಟಿಸುವ ಬೆದರಿಕೆ: ಮುಂಬೈ ಪೊಲೀಸರು ಅಲರ್ಟ್

ಮುಂಬೈ: ಮುಂಬೈ ಪೊಲೀಸ್  ಕಂಟ್ರೋಲ್​ ರೂಂಗೆ ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ ದಾದರ್​ನಲ್ಲಿರುವ ಮೆಕ್​ ಡೊನಾಲ್ಡ್ಸ್​ ಸ್ಫೋಟಿಸುವು ದಾಗಿ ಮಾತನಾಡಿಕೊಳ್ಳುತ್ತಿದ್ದರು ಎನ್ನುವ ವಿಚಾರವನ್ನು ತಿಳಿಸಿದ್ದಾರೆ.
ಮುಂಬೈ ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿ ತಾನು ಬೆಸ್ಟ್ ಬಸ್ ಸಂಖ್ಯೆ 351 ರಲ್ಲಿ ಪ್ರಯಾಣಿಸುತ್ತಿದ್ದಾಗ, ಮ್ಯಾಕ್​ಡೊನಾಲ್ಡ್ ಅನ್ನು ಸ್ಫೋಟಿಸುವ ಬಗ್ಗೆ ಇಬ್ಬರು ಮಾತನಾಡುವುದನ್ನು ಕೇಳಿದೆ ಎಂದು ಹೇಳಿದರು.

ಕರೆ ಮಾಡಿದವರು ಈ ಬಗ್ಗೆ ಮಾಹಿತಿ ನೀಡಿದ್ದು, ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ. ಈ ಕರೆ ನಂತರ ಮುಂಬೈ ಪೊಲೀಸರು ಅಲರ್ಟ್ ಆದರು. ಪೊಲೀಸರು ಇಡೀ ರಾತ್ರಿ ಬಾಂಬ್‌ಗಾಗಿ ಶೋಧ ಕಾರ್ಯದಲ್ಲಿ ನಿರತರಾಗಿದ್ದರು. ವ್ಯಾಪಕ ತನಿಖೆಯ ನಂತರವೂ ಪೊಲೀಸರಿಗೆ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಮುಂಬೈ ಪೊಲೀಸರ ಬಾಂಬ್ ನಿಷ್ಕ್ರಿಯ ದಳಕ್ಕೂ ಎಚ್ಚರಿಕೆ ನೀಡಲಾಗಿದೆ. ಪೊಲೀಸರ ಶೋಧ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.

ಜನರು ಎಚ್ಚರಿಕೆಯಿಂದ ಇರುವಂತೆ ಮುಂಬೈ ಪೊಲೀಸರು ಸೂಚಿಸಿದ್ದಾರೆ. ಅನುಮಾನಾಸ್ಪದ ವಸ್ತು ಕಂಡು ಬಂದಲ್ಲಿ ಎಲ್ಲರಿಗೂ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *