Monday, 12th May 2025

ಕುಟುಂಬ, ಆಪ್ತರೊಂದಿಗೆ ಸಮಯ ಕಳೆಯುತ್ತಿರುವ ಕಾಂಗ್ರೆಸ್ ಅಭ್ಯರ್ಥಿ

ಶಿರಸಿ: ಕಳೆದ ಎರಡು ತಿಂಗಳಿನಿಂದ ದಣಿವರಿಯದೆ ಇಡೀ ಉತ್ತರ ಕನ್ನಡ ಕ್ಷೇತ್ರ ಸಂಚರಿಸಿ ಪ್ರಚಾರದಲ್ಲಿ ಕಾರ್ಯನಿರತರಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್, ಸದ್ಯ ಮನೆಯಲ್ಲಿ ಕುಟುಂಬಸ್ಥರು ಹಾಗೂ ಆಪ್ತರೊಂದಿಗೆ ಸಮಯ ಕಳೆಯುತ್ತಿದ್ದಾರೆ.

ಕಾಂಗ್ರೆಸ್ ಟಿಕೆಟ್ ಘೋಷಣೆಯಾದ ನಂತರದಿಂದ ಉತ್ತರಕನ್ನಡ ಕ್ಷೇತ್ರದಾದ್ಯಂತ ನಾಯಕರು, ಕಾರ್ಯಕರ್ತರೊಂದಿಗೆ ಪ್ರಚಾರದಲ್ಲಿ ಡಾ.ಅಂಜಲಿ ನಿಂಬಾಳ್ಕರ್ ಕಾರ್ಯನಿರತರಾಗಿದ್ದರು. ಕುಟುಂಬದವರು, ಆಪ್ತರಿಗೂ ಸಮಯ ನೀಡದೆ ಚುನಾವಣೆಯ ಪ್ರಚಾರದಲ್ಲಿ ಮಗ್ನರಾಗಿದ್ದರು.

ಸದ್ಯ ನಿನ್ನೆಯಷ್ಟೇ ಮತದಾನ ಮುಗಿದಿದೆ. ಮತದಾರರು ತಮ್ಮ ಅಭಿಪ್ರಾಯಗಳನ್ನ ಮತಪೆಟ್ಟಿಗೆಯಲ್ಲಿ ಭದ್ರವಾಗಿಸಿದ್ದಾರೆ. ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ಮತದಾನದ ದಿನದವರೆಗೆ ಮತಗಟ್ಟೆ ಓಡಾಟ, ಕಾರ್ಯಕರ್ತರ ಭೇಟಿ, ದೇಗುಲಗಳ ಭೇಟಿ ನಡೆಸುತ್ತಿದ್ದ ಡಾ.ಅಂಜಲಿ, ಇಂದು ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದಾರೆ.

ಮತದಾನ ಮುಗಿದಿರುವುದರಿಂದ ಸದ್ಯ ಸೋಲು- ಗೆಲುವಿನ ಲೆಕ್ಕಾಚಾರದಲ್ಲಿ ಎಲ್ಲರೂ ಮುಳುಗಿದ್ದಾರೆ‌. ಹೀಗಾಗಿ ಖಾನಾಪುರದ ಡಾ.ಅಂಜಲಿ ಅವರ ನಿವಾಸಕ್ಕೆ ಪಕ್ಷದ ಮುಖಂಡರು, ಆಪ್ತರು, ಕುಟುಂಬಸ್ಥರು ಭೇಟಿ ನೀಡಿ ಮಾತಿಗಿಳಿಯುತ್ತಿದ್ದಾರೆ. ಬಂದವರೊಂದಿಗೆ ಸಮಾಲೋಚನೆ ನಡೆಸುತ್ತಿರುವ ಅವರು, ಬಾಕಿ ಸಮಯದಲ್ಲಿ ಪತ್ರಿಕೆ, ಚುನಾವಣೆಯಲ್ಲಿ ಕಳೆದುಹೋಗಿದ್ದ ಮೆಸೇಜಸ್- ಕಾಲ್ಸ್, ಸುದ್ದಿಗಳನ್ನ ತೆರೆದು ವೀಕ್ಷಿಸುತ್ತಿದ್ದಾರೆ.

Leave a Reply

Your email address will not be published. Required fields are marked *