Thursday, 15th May 2025

ಯುಎಸ್‌ಎ, ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಗಳಿಗೆ ಅಮುಲ್ ಪ್ರಾಯೋಜಕತ್ವ

ವದೆಹಲಿ: ಜೂನ್’ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್’ಗಾಗಿ ಯುಎಸ್‌ಎ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವವನ್ನ ಭಾರತೀಯ ಡೈರಿ ದೈತ್ಯ ಅಮುಲ್ ಘೋಷಿಸಿದೆ.

ಉಭಯ ತಂಡಗಳ ಆಯಾ ಕ್ರಿಕೆಟ್ ಮಂಡಳಿಗಳು ಗುರುವಾರ ಪಾಲುದಾರಿಕೆಯನ್ನ ಅನಾವರಣಗೊಳಿಸಿದ್ದು, ಜಾಗತಿಕ ವೇದಿಕೆಯಲ್ಲಿ ಕ್ರಿಕೆಟ್ ಪ್ರಯತ್ನಗಳಿಗೆ ಅಮುಲ್ ಬೆಂಬಲವನ್ನು ಎತ್ತಿ ತೋರಿಸಿದೆ.

ಜೂನ್ 1ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಟೂರ್ನಿಯ ಸಹ ಆತಿಥ್ಯ ವಹಿಸಿರುವ ಅಮೆರಿಕ ಚೊಚ್ಚಲ ಪಂದ್ಯವನ್ನಾಡಲಿದೆ.

ಅಮುಲ್ ಅವರನ್ನ ಯುಎಸ್‌ಎ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿಗೆ ಲೀಡ್ ಆರ್ಮ್ ಪ್ರಾಯೋಜಕರಾಗಿ ನೇಮಿಸಲಾಗಿದೆ.

Leave a Reply

Your email address will not be published. Required fields are marked *