Thursday, 15th May 2025

ಮಕ್ಕಳು ಸೀರಿಯಲ್, ಸಿನಿಮಾಗಳಲ್ಲಿ ನಟಿಸಲು ’ಡಿಸಿ’ ಅನುಮತಿ ಕಡ್ಡಾಯ

ಬೆಂಗಳೂರು: ಇನ್ನು ಮುಂದೆ ಮಕ್ಕಳು ಸೀರಿಯಲ್, ಸಿನಿಮಾಗಳಲ್ಲಿ ನಟಿಸೋದಕ್ಕೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ರಾಜ್ಯ ಕಾರ್ಮಿಕ ಇಲಾಖೆಯಿಂದ ಆದೇಶ ಹೊರಡಿಸಲಾಗಿದ್ದು, ಮಕ್ಕಳನ್ನು ಧಾರವಾಹಿ, ಚಲನಚಿತ್ರಗಳಲ್ಲಿ ನಟಿಸಲು ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕು. ಮಕ್ಕಳು ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದ ಬಳಿಕ ಸಿನಿಮಾ, ಸೀರಿಯಲ್ ಗಳಲ್ಲಿ ನಟಿಸಲು ಅವಕಾಶ ಎಂಬುದಾಗಿ ತಿಳಿಸಿದೆ.

ಒಂದು ದಿನದಲ್ಲಿ 5 ಗಂಟೆಗೂ ಹೆಚ್ಚು ಕಾಲ ಮಕ್ಕಳನ್ನು ನಟಿಸುವುದಕ್ಕೆ ಬಳಸಿಕೊಳ್ಳಬಾರದು. ತಿಂಗಳಲ್ಲಿ ಕೇವಲ 27 ದಿನಗಳು ಮಾತ್ರವೇ ಮಕ್ಕಳನ್ನು ಶೂಟಿಂಗ್ ನಲ್ಲಿ ಬಳಿಸಿಕೊಳ್ಳಬೇಕು ಎಂಬುದಾಗಿಯೂ ಷರತ್ತು ವಿಧಿಸಿದೆ.

ಮಕ್ಕಳ ಶಿಕ್ಷಣದ ದೃಷ್ಠಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಬಾಲ ನಟ, ನಟಿಯಾಗಿ ಸೀರಿಯಲ್ ನಲ್ಲಿ ಮಕ್ಕಳು ನಡಿಸುವುದಕ್ಕೆ ನಿರ್ಮಾಪಕರು, ಆಯೋಜಕರು, ಆಯಾ ವ್ಯಾಪ್ತಿಯ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯಬೇಕು ಎಂಬುದಾಗಿ ತಿಳಿಸಲಾಗಿದೆ.

ಒಂದು ವೇಳೆ ಈ ಆದೇಶ ಪಾಲಿಸದೇ ಮಕ್ಕಳನ್ನು ಸೀರಿಯಲ್, ಸಿನಿಮಾಗಳಲ್ಲಿ ನಟಿಸಿಕೊಳ್ಳುವುದಕ್ಕೆ ಆಯೋಜಕರು, ನಿರ್ಮಾಪಕರು ಬಳಿಸಿಕೊಂಡಿದ್ದೇ ಆದಲ್ಲಿ, ಕಾನೂನು ಕ್ರಮ ಕೈಗೊಳ್ಳೋದಾಗಿ ಎಚ್ಚರಿಕೆ ನೀಡಿದೆ.

Leave a Reply

Your email address will not be published. Required fields are marked *