Tuesday, 13th May 2025

ಸರ್‌ಪ್ರೈಸ್ ನೀಡಿದ ಮಾನ್ವಿತಾ

ಟಗರು ಪುಟ್ಟಿ ಮಾನ್ವಿತಾ, ಕನ್ನಡ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ನಟಿ. ವಿಭಿನ್ನ ಪಾತ್ರ ಗಳಲ್ಲಿ ಬಣ್ಣಹಚ್ಚಿ, ತಮ್ಮ ನಟನೆಯ ಮೂಲಕವೇ ಗಮನ ಸೆಳೆದು, ಶಬಾಷ್ ಎನ್ನಿಸಿಕೊಂಡ ವರು. ಹೀಗಿರುವಾಗಲೇ ಮಾನ್ವಿತಾ ಸರ್‌ಪ್ರೈಸ್ ನೀಡಿದ್ದಾರೆ.

ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ, ಕನ್ನಡತಿ ಧಾರಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದು, ಕಿರುತೆರೆ ಪ್ರಿಯರನ್ನು ರಂಜಿಸಿದ್ದಾರೆ. ಈ ಧಾರಾವಾಹಿಯಲ್ಲಿ ನಾಯಕ ಹರ್ಷ, ಮಾನ್ವಿತಾ ಅವರ ಅಪ್ಪಟ ಅಭಿಮಾನಿ. ಇದನ್ನು ತಿಳಿದಿದ್ದ, ನಾಯಕನ ಗೆಳತಿ ಭುವಿ, ಹರ್ಷನ ಬತ್ ಡೆರ್ಗೆ ಮಾನ್ವಿತಾ ಅವರನ್ನು ಕರೆತರುತ್ತಾರೆ. ಸರ್‌ಪ್ರೈಸ್ ನೀಡುತ್ತಾರೆ.

ತನ್ನ ಹುಟ್ಟು ಹಬ್ಬದಂದೇ ತನ್ನ ನೆಚ್ಚಿನ ನಟಿ ಮಾನ್ವಿತಾರನ್ನು, ಕಂಡು ಹರ್ಷ ಚಕಿತಗೊಳ್ಳು ತ್ತಾನೆ. ಸಂತಸದಲ್ಲಿ ತೇಲಾಡು ತ್ತಾನೆ. ಹೀಗೆ ಒಂದು ಚಿಕ್ಕ ದೃಶ್ಯದಲ್ಲಿ ಮಾನ್ವಿತಾ ಕಾಣಿಸಿ ಕೊಂಡರು. ಕನ್ನಡತಿ ಧಾರಾವಾಹಿಯಲ್ಲಿ ಅತಿಥಿ ಪಾತ್ರ ವಾದರೂ, ಕಿರುತೆರೆ ನನಗೆ ಇಷ್ಟ ವಾಯಿತು ಎನ್ನುತ್ತಾರೆ ಮಾನ್ವಿತಾ. ಸದ್ಯ ಮಾನ್ವಿತಾ ನಟನೆಯ ನವಿರಾದ ಪ್ರೇಮಕಥೆಯ ಶಿವಂ143 ಹಾಗೂ ರಾಜಸ್ಥಾನ್ ಡೈರೀಸ್ ತೆರೆಗೆ ಬರಲು ಸಿದ್ಧವಾಗಿವೆ.

ಚಿತ್ರಮಂದಿರ ತೆರೆದ ಬಳಿಕ ಬಿಡುಗಡೆ ಕಾಣಲಿವೆ. ಇದರ ಜತೆಗೆ ಮತ್ತಷ್ಟು ಚಿತ್ರಗಳಲ್ಲಿ ನಟಿಸಲು ಕೆಂಡಸಂಪಿಗೆ ಬೆಡಗಿ ಸಿದ್ಧವಾಗು ತ್ತಿದ್ದಾರೆ. ಲಾಕ್‌ಡೌನ್ ನಡುವೆ ಕೆಲವು ಕಥೆಯನ್ನು ರಚಿಸಿರುವ ಮಾನ್ವಿತಾ, ನಿರ್ದೇಶನದತ್ತಲೂ ಒಲವು ಹೊಂದಿದ್ದಾರೆ.

Leave a Reply

Your email address will not be published. Required fields are marked *